Saturday, November 14, 2009

ಗೀಚಿದ ಕೆಲವೊಂದಿಸ್ಟು ನಿಮ್ಮ ಮುಂದೆ ,, ಹಾಗೆ ಸುಮ್ನೆ ., :)

ಹಾರಿ ಹೋದ ಚಿಟ್ಟೆಯೊಂದಿಗಿನ ನನ್ನ ಕಲ್ಪನೆಯ ಬದುಕು .,

ನಿನ್ನೊಂದಿಗಿನ ಆ ನನ್ನ ಕಲ್ಪನೆಯ ಬದುಕ
ಹೇಗೆ ಬಣ್ಣಿಸಲಿ ., ಹೇಗೆ ವರ್ಣಿಸಲಿ .,
Hmmm .,
''ಬರೀ ಆಸೆ - ಕನಸುಗಳ ಮಹಾಪೂರ
ಜೊತೆಗೊಂದಿಸ್ಟು ಭಾವನೆಗಳ ಸಮರ"


ಪ್ರೀತಿ
ನನಗರಿವಿಲ್ಲದೆ
ಮನಸಿನೊಳಗೆ ತೂರಿ
ನನ್ನ ಇಂಚಿಂಚು ಮನಸನ್ನ
ಗಾಯಗೊಳಿಸಿದ "ಕ್ರಿಮಿ-ಅತಿಕ್ರಮಿ"


ಪ್ರೀತಿ ಹಾಗು ಭಾವನೆಗಳು
ಕಡಲ ಪ್ರತಿ ಅಬ್ಬರದ ಹೊಡೆತಗಳು
ದಂಡೆಯಲ್ಲಿರುವ ಪ್ರತಿ ವಸ್ತುವನ್ನ ಹಿಮ್ಮೆಟ್ಟಿಸುತ್ವೆ .,
ಪ್ರೀತಿಯ ಜೊತೆಗಿರುವ ಭಾವನೆಗಳು ಅಸ್ಟೇ
ಮನಸಿನ ಪ್ರತಿ ಆಸೆ - ಕನಸುಗಳನ್ನ
ಬಹುದೂರ ಕೊಂಡೊಯ್ದುಬಿಡುತ್ವೆ .,
ಕೊನೆಗೊಮ್ಮೆ ಮನಸನ್ನೇ ಮುಳುಗಿಸಿಬಿಡುತ್ವೆ.



ನೀನೆಂಬ ಮಾಯೆ!!
ನಾ ಸಾಗೋ ಪ್ರತಿ ದಾರಿಯಲಿ
ನೀನೆ ಇದ್ದೆ .,
ನಾ ಕಾಣೋ ಪ್ರತಿಕನಸಲು
ನೀನೆ ಇದ್ದೆ .,
ಅಸ್ಟೆ ಏಕೆ ಗೆಳೆತಿ ., ನನ್ನ ಪ್ರತಿ ಸಾಧನೆಯ
ಹಿಂದೆ ನೀನೇ ಇದ್ದೆ .,
ಆದರೆ ಇವಾಗೆಲ್ಲಿಗೆದ್ದೆ ???


ಚಾರ್ಲಿ ....

ಪ್ರೀತಿಯ ಗಳಿಸೋ ತವಕದಲ್ಲಿ
ನಾ ಬಹುದೂರ ಸಾಗಿದೆ ,
ಪ್ರೀತಿಯ ಮರೆಯುವ ಎಲ್ಲ ಶಕ್ತಿಯನು
ನನಗರಿವಿಲ್ಲದೆ ನಾ ಅದೇ ಹಾದಿಯಲಿ ಪಡದೆ ...

Friday, November 13, 2009

ಅಂದೇ ನಮ್ಮನ್ನ ಅಗಲಿದರೂ, ಇನ್ನೂ ನಮ್ಮೊಂದಿಗಿರುವ ಚೈತನ್ಯ .,

ಕರುನಾಡ ಕಣ್ಮಣಿ ... ಯುವಕರ ಆಶಾಕಿರಣ .. ಅಂದೇ ನಮ್ಮನ್ನ ಅಗಲಿದರೂ ಇನ್ನೂ ನಮ್ಮೊಂದಿಗಿರುವ ಚೈತನ್ಯ .,



ಶಂಕರನಾಗ್ ...(ನಮ್ಮೊಂದಿಗಿಲ್ಲ ಎನ್ನುವ ಭಾವನೆ ನನ್ನಲ್ಲಿ ಇಲ್ಲ ., ನನ್ನಂತ ಸಾವಿರಾರು ಅಭಿಮಾನಿಗಳಲ್ಲೂ ಇಲ್ಲ )





ಅವರ ನೆನಪ್ಪನ್ನ ಅಮರವಾಗಿಸಲು ., ಯಾವುದೇ ಪ್ರಯತ್ನ ಬೇಕಿಲ್ಲ., ಅವರ ಅಂದಿನ ಹೊಸ ಪ್ರಯೋಗಗಳು ., ಕಲಾತ್ಮಕ ಹಾಗು ಅಭಿರುಚಿಯ ಕೆಲಸಗಳು ಇನ್ನೂ ನಮ್ಮೊಂದಿಗಿವೆ ., ಮುಂದೆಯುs ನಮ್ಮ ತಲೆ ಕಾಯುತ್ತವೆ ...



ಆದರೂ ಅವರ ಹಿಂದಿನ ಬದುಕನ್ನ ಅವರ ಕನಸುಗಳನ್ನ ಮುಂದಿನ ಪೀಳಿಗೆಗೆ ಬಿತ್ತರಿಸಲು ರಂಗಶಂಕರ , ಬೆಂಗಳೂರು., ಶಂಕರನಾಗ್ ಅವರ ಜನ್ಮ ದಿನದಂದು (ನವಂಬರ್ ೯ ) ಅವರ ವೆಬ್ ಸೈಟ್ ಆರಂಭಿಸಿದೆ ., http://www.shankarnag.in/ಒಮ್ಮೆ ಕಣ್ಣಾಯಿಸಿ ..



ಖಂಡಿತ ಶಂಕರ್ ನಿಮ್ಮ ಕಣ್ಣಂಚಲ್ಲಿ ಹನಿಯಾಗಿ ಮೂsಡುತ್ತಾರೆ .,



ರಂಗಶಂಕರದ ಪ್ರತಿ ಕತೃವಿಗೆ ... ಹಾಗು ಶಂಕರ್ ಅವರ ಪ್ರತಿ ಕನಸನ್ನ ಸಾಕಾರಗೊಳಿಸಲು ಸದಾ ಕಾರ್ಯಪ್ರವೃತ್ತರಾಗಿರುವ ತಾಯಿ ಅರುಂದತಿನಾಗ್ ರವರಿಗೆ ವಂದಿಸಲೇಬೇಕು ಎಂಬ ಭಾವನೆ ಹುಟ್ಟುತ್ತೆ .,



ಶಂಕರ್ ಅವರ ಅಸ್ಟೂ ಕನಸು ನನಸಾಗಲಿ ಎಂದೂ ಬೇಡುತ್ತಾ ., http://www.shankarnag.in/ ತಪ್ಪದೆ ಲಿಂಕ್ ನೋಡಿ .,



ಸಾದ್ಯವಾದರೆ ಜೆ ಪಿ ನಗರದ ರಂಗಶಂಕರಕ್ಕೆ ಹೋಗಿ ಬನ್ನಿ ., ಸದಾ ಒಂದಲ್ಲ ಒಂದು ಕಾರ್ಯಕ್ರಮದೊಂದಿಗೆ ಬ್ಯುಸಿ ಇರುವ ನೆಚ್ಚಿನ ತಾಣವದು .,



Have a look at :-http://www.rangashankara.org/home/rangatest/

Thursday, November 5, 2009

ಸುಂದರತೆಗೆ,ಪ್ರೀತಿ - ವಿಶ್ವಾಸಕ್ಕೆ ಮತ್ತೊಂದು ಹೆಸರೇ "ಮಲೆನಾಡು" !!!



ಸಾಲು ಸಾಲು ಗಿರಿ-ಶಿಖರಗಳು
ಅವುಗಳಿಗೆ ಹಸಿರಿನ ಸುಂದರ ಹೊದಿಕೆ
ಮೇಲೊಂದಿಷ್ಟು ಮರಗಿಡಗಳ ಸಾಲು
ಅಂತೇ ಬಿಳಿ ಹಾಲ ತೊರೆಗಳು-ಬೊರ್ಗರೆವ ಜಲಪಾತಗಳು
ಇವೆಲ್ಲವಕ್ಕಿಂತ ಮಿಗಿಲಾಗಿರುವ ಆ
ವಿಶಾಲ ಹೃದಯದ ಮಹಾಜನರು
ಇವೇ ನಮ್ಮ ಮಲೆನಾಡಿನ ವೈಶಿಷ್ಟ್ಯಗಳು .



ತಾಯಿ ಭುವನೇಶ್ವರಿಯು
ವೈಶಿಷ್ಟ್ಯಗಳ ಮೆರದಿಹಳು.,
ಒಂದು ಕಡೆ ಬಂಡೆಗಲ್ಲುಗಳನ್ನ, ಬಿಸಿಲ ಧಗೆಯನ್ನ
ಹೊಡಲೋಳಿರಿಸಿಕೊಂಡಿಹಳು
ಮತ್ತೊಂದೆಡೆ ಸುಂದರ ಜಲಪಾತಗಳನ್ನ, ನೀರ ತೊರೆಗಳನ್ನ
ಹಾಗೆ ಹಸಿರ ವನರಾಶಿಯ ಬಾಚಿ ತಬ್ಬಿಹಳು.



ಸಹ್ಯಾದ್ರಿಯ ಸಾಲೆಂದರೆ
ಸದಾ ಜಿನುಗುಟ್ಟುವ ಮಳೆ
ಹಸಿರು ವನರಾಶಿಯ ಸೆಲೆ,
ನೂರಾರು ಜಲಪಾತಗಳ ತವರು ಮನೆ
ಸಾವಿರಾರು ಬುದ್ದಿ ಜೀವಿಗಳ,
ಪ್ರಜ್ಞಾವಂತ ಮನಸುಗಳ
ತಯಾರಿ ಮಾಡುವ ಪಾಠ ಶಾಲೆ .

Monday, October 26, 2009

ಕಲಿಯುಗದಲ್ಲಿ "ಕನಸು"

ಏ ಕನಸೇ ..
ನಿನ್ನ ಒಳ -ಹೊರ ಮನಸ್ಸು
ಕಣ್ಮುಚ್ಚಿದಾಗಲೇ ಬಲು ಚಂದು
ಕಣ್ಣ ಬಿಟ್ಟರೆ ಸಾಕು
"ನೀ ಬಲು ದ್ವಂದ್ವ"



ಹುಟ್ಟಿದ ಮರುಗಳಿಗೆಯಿಂದ ನಮಗರಿವಿಲ್ಲದೆ
ಅಪ್ಪ - ಅಮ್ಮನ ಕನಸುಗಳ ಹೊತ್ತು ಬಾಳ ನೂಕುವೆವು ...
ಬುದ್ದಿ ಬಂದು ನಮ್ಮ ಬದುಕ ಸಾಗಿಸುವಾಗ
ಮಕ್ಕಳ ನಾಳಿನ ಕನಸುಗಳ ಹೊತ್ತು ಬಾಳ ದೂಡುವೆವು ...
ಕೊನೆಗೊಂದು ದಿನ !!!! ಸಾಕರಗೊಳ್ಳದ
ನಮಸ್ಟೂ ಕನಸುಗಳ ಸಾಕಾರಗೊಳಿಸಲು
ಮತ್ತೆ ಹುಟ್ಟಿ ಬರುವ ಕನಸ ಹೊತ್ತು ಮಣಲ್ಲಿ ಮಣ್ಣಾಗುವೆವು ....


ಕನಸೇ ಆಗೆ .,
ಧೋ ಎಂದು ಸುರಿಯೋ ಮಳೆಯ ಆಗೆ !!
ಬೇಡದಿದ್ದರೂ ಬಂದು ಮನಕೆ ತಂಪೆರೆಯುವುದು.
ಕೆಲವೊಮ್ಮೆ ಮಳೆಯು ಬದುಕ ದುಸ್ತರವಾಗಿಸುವಂತೆ .,
ಕನಸು ಮನದ ನೆಮ್ಮದಿ ಹಾಳುಗೆಡವುವುದು !!



ಚೆಲುವೆಯ ಚೆಂದುಟಿಯ ನಗು
ಹುಡುಗನ ಹಾಲ್ಗಡಲ ಮನಸಿನಲಿ
ಹೊಸದೊಂದು ಕನಸ ಹುಟ್ಟುಹಾಕುವುದು,
ಆ ನಗು ಮೊಗದಿ ಮಾಯವಾಗುವಸ್ಟರಲ್ಲೇ
ಹುಡುಗನ ಹಾಲ್ಗಡಲ ಮನಸ
ಕದಡಿ ಕೊಚ್ಚೆಯಾಗಿಸುವುದು.



ಕಾಣುವ ಪ್ರತಿಕನಸು ನನಸಾದರೆ
ಆ ಕನಸಿಗೆ ಬೆಲೆಯುಂಟೆ ??
ಇಡುವ ಪ್ರತಿ ಹೆಜ್ಜೆ ಸುಗಮವಾಗಿರಲು
ಆ ದಾರಿಗೆ ಬೆಲೆಯುಂಟೆ ??
ಪಟ್ಟರೂ ಕಷ್ಟವ ಪ್ರತಿಗಳಿಗೆ
ಅರೆ ಸುಖವೂ ದೊರೆಯದಿದ್ದರೆ
ಆ ಕಷ್ಟಕ್ಕೆ ಅರ್ಥವುಂಟೇ ??

Friday, July 31, 2009

ಬುಡುಬುಡಿಕೆಯವರಂತೆ ಬಡಬಡಾಯಿಸಿ ಸುಮ್ಮನಾಗೋ ನಮ್ಮ ಮಾಧ್ಯಮದೋರು !!

೨೬ ಜುಲೈ ೧೯೯೯,ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆ ಹಾರಿಸಿದ ದಿನ.




ಆಗಷ್ಟೇ ನಾವು ಶಾಲ ದಿನಗಳನ್ನ ಮುಗಿಸಿ ಕಾಲೇಜಿನತ್ತ ಹೆಜ್ಜೆ ಇಟ್ಟಿದ್ದ ಕಾಲ ಅದು.
ಯುದ್ಧ ಅಂದ್ರೆ ಆಗ ನಮಗೆ ತಿಳಿದದ್ದು ಕಳಿಂಗ ., ಮೊದಲ ಮಹಾಯುದ್ಧ ., ಎರಡನೇ ಮಹಾಯುದ್ಧ .. ಹೀಗೆ ಅನೇಕ ., ಅಂದ್ರೆ ನಮ್ಮ ೭ ರಿಂದ ೧೦ ನೇ ತರಗತಿಯ ಪಠ್ಯಗಳಲ್ಲಿದ್ದ Chronologically arranged ಯುದ್ಧಗಳಷ್ಟೇ ., ಇವುಗಳ ಬಗ್ಗೆ ಓದಿ ಪರೀಕ್ಷೆ ಬರೆದು ., ತದನಂತರ ಅವುಗಳ ಮರೆತವರೇ ಹೆಚ್ಚು ., !!

ಆದ್ರೆ ೧೯೯೯ ರಲ್ಲಿ "ಪಾಕ್ - ಭಾರತ"ದ ನಡುವೆ ನಡೆದ "ಕಾರ್ಗಿಲ್ ಯುದ್ಧ" ಮಾತ್ರ ೨೦ ನೇ ಶತಮಾನದಲ್ಲಿದ್ದ ಪ್ರತಿಯೊಬ್ಬರ ಮನಸ್ಸಿನಲ್ಲಿ ಮರೆಯಲಾರದ ಕಹಿ ನೆನಪಾಗಿ ಉಳಿದಿದೆ.(ಕೆಲ ಭ್ರಷ್ಟ ಮನಸುಗಳಲ್ಲಿ ಬಿಟ್ಟು).


ಆ ಯುದ್ಧದ ಚಿತ್ರಣ ಮಾಧ್ಯಮದವರಿಂದಾಗಿಯೇ ಪ್ರತಿಯೊಬ್ಬರಿಗೂ ತಲುಪಿತು ., ಯುದ್ಧ ಅಂದ್ರೆ ಹೀಗೂ ಇರುತ್ತೆ ., ಅದರ ತೀವ್ರತೆ ., ಸಾವು ನೋವುಗಳು ಹೀಗಿರುತ್ತವೆ ಅಂತ ತೋರಿಸಿಕೊಟ್ಟವರು ಅವರೇ ..
ಎಲ್ಲವನ್ನ ಎಲ್ಲರಿಗೂ ತಿಳಿಸಿಕೊಟ್ಟವರೂ ಅವರೇ .,

ಆ ಯುದ್ಧದಲ್ಲಿ ನಡೆದ ತ್ಯಾಗ ಬಲಿದಾನಗಳು - ನಂತರದ ನೋವಿನ ಕ್ಷಣಗಳು - ಜೊತೆಗೇ ಹುಟ್ಟಿಕೊಂಡ ನಮ್ಮ ಭ್ರಷ್ಟ ರಾಜಕಾರಣಿಗಳ ಹಗರಣಗಳು .. ಹೀಗೆ ಎಲ್ಲವೂ ಎಲ್ಲರಿಗೇ ತಿಳಿದೇ ಇದೆ .

ಆ ಯುದ್ಧದ ನಂತರ ನಡೆದದ್ದು ಸಂತಾಪ ಸೂಚಿಸುವ ಕಾರ್ಯಕ್ರಮಗಳು ಜೊತೆಗೆ ನಮ್ಮ ರಾಜಕಾರಣಿಗಳ ಪೊಳ್ಳು ಆಶ್ವಾಸನೆಯ ಸಾಲು ಭಾಷಣಗಳು .,

ಅಂದು ಆ ಯುದ್ಧದಲ್ಲಿ ಹುತಾತ್ಮರಾಗಿದ್ದು ೫೩೩ ವೀರ ಯೋಧರು.,

ಆ ಯುದ್ಧ ಗತಿಸಿ ಇಂದಿಗೆ ೧೦ ವರ್ಷಗಳೇ ಕಳೆದಿವೆ !!!

ಆದರೆ ಅದೆಷ್ಟೋ ಸೆನಾನಿಗಳ ಕುಟುಂಬಕ್ಕೆ ಸರ್ಕಾರದಿಂದ ಸಲ್ಲಬೇಕಿದ್ದ ಸವಲತ್ತುಗಳು ಇನ್ನೂ ತಲುಪಿಲ್ಲ ., ಅಷ್ಟೂ ಕುಟುಂಬದವರ ದೈನಂದಿನ ಬದುಕು ದುಸ್ತರವಾಗಿದೆ .,
ಸಾರ್ವಜನಿಕರು ಹಾಗು ಕೆಲ ಸಂಘ ಸಂಸ್ಥೆಗಳು ಮಾಡಿದಷ್ಟು ಸಹಾಯ, ಸರ್ಕಾರ ಇನ್ನೂ ಕೆಲ ಯೋಧರ ಕುಟುಂಬಕ್ಕೆ ಮಾಡಿಲ್ಲ ಎಂಬುದು ಸತ್ಯ ಸಂಗತಿ .,

ಮೇಲಿನ ಆಷ್ಟೂ ವಿಚಾರಗಳು ನಮ್ಮಗೆ ತಿಳಿದಿರುವವೆ ., ಇವುಗಳ್ಳನ್ನೂ ನಮ್ಮ ಮಾಧ್ಯಮದವರು ಇನ್ಚಿಂಚೂ ಚಿತ್ರಿಸಿ ತೊರಿಸಿ ., ಮುದ್ರಿಸಿದ್ದೂ ಆಗಿದೆ.

ಸಮಾಜದ ಎಲ್ಲ ಮುಖಗಳನ್ನ ಜನತೆಗೆ ತೋರಿಸಿ,ತಿಳಿಸಿ ಹೇಳಿ., ಪ್ರತಿ ಘಟನಾವಳಿಗಳನ್ನ ಪ್ರತಿಯೊಬ್ಬರಿಗೂ ತಲುಪಿಸಿ ಕೆಲವೊಮ್ಮೆ ಆದರ್ಶ ಮೆರಿತಾರೆ .,
ಕೆಲವೊಮ್ಮೆ ತಮ್ಮ ಪ್ರಭಾವದ ಮೂಲಕ ಎಲ್ಲವೂ ಸುಸೂತ್ರವಾಗಿ ಮುಗಿಸಿ,ಒಬ್ಬರ ಬಾಳ ಬೆಳಗುವಾಗ ಮಾತ್ರ
ಕೈಕಟ್ಟಿ ಕುಳಿತು ಆ ಕ್ಷಣವನ್ನ ಕಣ್ಣ ಮುಂದೆ ತಂದಾಗೆ ಮಾಡಿ,ಬುಡುಬುಡಿಕೆಯವರಂತೆ ಬಡಬಡಾಯಿಸಿ ಸುಮ್ಮನಾಗುತ್ತಾರೆ.ನಮ್ಮ ಭ್ರಷ್ಟ ರಾಜಕಾರಿಗಳಿಗೆ ಪುಗುಸಟ್ಟೆ ಆಹಾರವಾಗಿಸಿ ., ಆಶ್ವಾಸಾನೆಯ ಮಾಹಪೋರ ಹರಿಸಲಿಕ್ಕೆ ಎಡೆಮಾಡಿ ಕೊಡುತ್ತಾರೆ !!

ಈ ಕಾರ್ಗಿಲ್ ಯುದ್ಧದ ನಂತರವೂ ನಡೆಯುತ್ತಿರುವುದೂ ಇದೆ ., !!


ಏಲ್ಲಿ ಎನು ತಪ್ಪಾಗಿದೆ ., ಎಲ್ಲಿ ಯಾವ ಯೋಧರ ಕುಟುಂಬಕ್ಕೆ ಸರಿಯಾದ ಪರಿಹಾರ ದೊರೆತಿಲ್ಲ ಎಲ್ಲ ವಿಚಾರಗಳನ್ನ ಕಲೆಹಾಕಿ ಅವರ ಗೋಳಿನ ಕತೆಗಳನ್ನ ಚಿತ್ರ ವಿಚಿತ್ರವಾಗಿ ಚಿತ್ರಿಸಿ ತೊರಿಸುತ್ತಾ ಇದಾರೆ ವಿನಃ , ಅವರಿಗಿರೋ ಪ್ರಭಾವವನ್ನ ಬಳಸಿಕೊಂಡು ಆ ಯೋಧರ ಕುಟುಂಬಕ್ಕೆ ಸಲ್ಲಬೇಕಾದ ಸರ್ಕಾರಿ ಸವಲತ್ತುಗಳನ್ನ ತಲುಪಿಸುವಲ್ಲಿ ಮಾತ್ರ ಜಾಣ-ದಡ್ಡರಂತೆ ವರ್ತಿಸುತ್ತಿದ್ದಾರೆ !!

ವರ್ಷಕ್ಕೊಮ್ಮೆ ಶೋಕಾಚರಣೆ ., ವಿಜಯೋತ್ಸವ ಆಚರಿಸಿ ಸುಮ್ಮನಾಗೋ ಸರ್ಕಾರಗಳು ., !!
ಆ ವೇಳೆಯಲ್ಲಿ ಅದ್ಬುತವಾದ ತಲೆ ಬರಹದಡಿ ಕೆಲ ಲೇಖನಗಳನ್ನ ( ಉದಾ: "ಕಾರ್ಗಿಲ್ ಕಲಿಗಳಿಗೆ ನಮನ" . "ಪಾಕ್ ವಿರುದ್ದ ಭಾರತ ಜಯಗಳಿಸಿದ ದಶಕದ ಸ್ಮರಣೆ")ಗೀಚಿ ಸುಮ್ಮನೆ ಆಗೋ ಪತ್ರಿಕೆಯವರು ಹಾಗೂ ಸುಂದರ ಕಾರ್ಯಕ್ರಮಗಳನ್ನ ಚಿತ್ರಿಸಿ ,ಅಂದೊಂದು ದಿನ ಒಬ್ಬರ ಯೋಧರ ಕರೆಸಿ ಅವರ ಅನುಭವಗಳನ್ನ ಹಂಚಿಕೊಳ್ಳುವ ನಮ್ಮ ದೃಷ್ಯ ಮಾಧ್ಯಮದವರು ಇನ್ನಾದರೂ ಇಂತ ಕಾರ್ಯಗಳತ್ತ ಕಣ್ಣು ಹಾಯಿಸ್ತಾರ ?
ಇಂತ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುತ್ತಾರ ? ಅವರ ಗೌರವ ಕಾಪಾಡುತ್ತಾರ ? ವೀರ ಯೋಧರ ತ್ಯಾಗ-ಬಲಿದಾನಗಳನ್ನ ಅವರ ಆದರ್ಶಗಳನ್ನ ಮುಂದಿನ ಪೀಳಿಗೆಗೆ ಇನ್ನೂ ಉತ್ತಮ ರೀತಿಯಲ್ಲಿ ತಲುಪಿಸುತ್ತಾರ? ಮುಂದಿನ ತಲೆಮಾರ ಆದರ್ಶಮಯವಾಗಿಸುತ್ತಾರ? ಹ್ಮ್ಮ್ ಎಲ್ಲವಕ್ಕೂ ಕಾಲವೇ ಉತ್ತರ ನೀಡಬೇಕಿದೆ .,

ಸಿಹಿ ಹನಿ

"ಸಮಾನ್ಯ ನಾಗರಿಕರೂ ದೇಶಕ್ಕೆ ಜೀವ ಬಲಿದಾನ ಮಾಡಿದ ಕುಟುಂಬಗಳ ಸಂಕಷ್ಟದಲ್ಲಿ ಭಾಗಿಗಳಾಗಬೇಕು"
ನಿಮಗೆನಾದ್ರು ಯೋಧರ ಕುಟುಂಬಕ್ಕೆ ಸಹಾಯ ಮಾಡೊ ಮನಸಿದ್ರೆ ಈ ಕೆಳಗಿನ ಲಿಂಕ್ ನೋಡಿ .,

ಹುತ್ತಾತ್ಮ ಸೈನಿಕರ ಕುಟುಂಬಕ್ಕೆ ನೆರವಾಗಲೆಂದೆe ಹುಟ್ಟಿಕೊಂಡಿರುವ ಹೊಸ ಸಂಸ್ಥೆ .
"Flags of Honour "!!

Tuesday, July 28, 2009

Funatics: ಉತ್ತಮ ಸಮಾಜ ನಿರ್ಮಾಣದತ್ತ ನನ್ನ ಗೆಳೆಯರ ಮಹತ್ತರ ಹೆಜ್ಜೆ ..,




Funatics ಬಗ್ಗೆ
ಎಲ್ಲವನ್ನಾ ಇಲ್ಲೇ ತಿಳಿಸಿಬಿಡಬೇಕೆಂಬ ಹಂಬಲ .. ಅತ್ಯುತಾಸಹ !!
ಆದರೆ ನಮ್ಮ ಶ್ರಮ - ನಮ್ಮ ನಿಲುವುಗಳು ನಿಮಗೆ ತಲುಪುವುದಿಲ್ಲ ..

V'll Never Walk Alone ...!!!


ಆದ್ದರಿಂದ ದಯಮಾಡಿ ಈ ಲಿಂಕ್ ನೋಡಿ www.funatics.co.in


ನಿಮ್ಮ ಸಲಹೆ ಹಾಗು ಅಭಿಪ್ರಾಯಗಳನ್ನ : Friends@Funatics.co.in ಇಲ್ಲಿಗೆ ಕಳುಹಿಸಿ .








Saturday, July 25, 2009

ಆತ್ಮಾಭಿಮಾನ/ಆತ್ಮಸಂತೃಪ್ತಿ ಬೆಳಸಿಕೊಳ್ಳಿ ., ಜೊತೆಗೊಂದಿಸ್ಟು ಪ್ರೀತಿ/ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಿ.!!

ದೊರೆವ ಜೀತಕೆ ದುಡಿತ, ಮರುದಿನ ಚಿಂತೆ ಮತ I
ಹೊರೆಯ ಹಗುರಾಗಿಸುವ ಕೆಳೆಯರರೊಡನಾಟ II
ಸರಳತೆಯ ಪರಿತುಷ್ಟಿ, ಪರಮಾರ್ಥ ದ್ರುಷ್ಟಿಯವು I
ಸರಿಗೂಡೆ ಸುಕೃತವದು - ಮಂಕುತಿಮ್ಮ II



ಈ ಮೇಲಿನ ಸಾಲುಗಳು ಮಾನ್ಯ ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗದಿಂದ ಆಯ್ದಂತವು.
ಡಿ.ವಿ.ಜಿ ಯವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಕೃತಿಗಳನ್ನ ರಚಿಸಿದ್ದರು.




ಅವುಗಳಲ್ಲಿ ಅತ್ಯಂತ ಅದ್ಭುತವಾದಂತಹ ಕೃತಿ "ಮಂಕುತಿಮ್ಮನ ಕಗ್ಗ". ಇದು ೧೯೪೩ ರಲ್ಲಿ ಪ್ರಕಟವಾಗಿತ್ತು.

ಅಂದರೆ ಇಂದಿಗೆ ಸರಿಸುಮಾರು ೬ ದಶಕಗಳ ಹಿಂದೆ.

ಕವಿಗಳು ಹಾಗು ಲೇಖಕರು ಏನೇ ಬರೆದರೂ, ಅದು ಅವರ ಜೀವಿತಾವಧಿಯಲ್ಲಿ ನಡೆದ ಘಟನಾವಳಿಗಳೋ, ಅವರ ಕಲ್ಪನೆಯಲ್ಲಿ ನಾಳೆಗಳೋ ಆಗಿರುತ್ತವೆ., ಇಲ್ಲ ತಮ್ಮ ಅನುಭವದಿಂದ ತಮ್ಮ ಮುಂದಿನವರ ಬಾಳ ಬೆಳಗಲು/ ಹದಗೊಳಿಸಲು ಎನನ್ನೊ ಸಿದ್ದಗೊಳಿಸಿದಂತೆ ಇರುತ್ತವೆ.



ಈ ಮೇಲಿನ ಕಗ್ಗದ ಸಾಲುಗಳು ಅಂತೇ., ಮಾನ್ಯ ಡಿ.ವಿ.ಜಿ.ಯವರ ಅನುಭವದ ಮಾತು, ನಮ್ಮ ಬಾಳು ಸುಖವಾಗಿರಲೆಂದು ಅವರು ಸೃಷ್ಟಿಸಿದ ಬ್ರಹ್ಮ ಲಿಪಿ ಅಂದ್ರೂ ತಪ್ಪಾಗಲಾರದು.

"ನಾವು ಪ್ರತಿದಿನವೂ ಮಾಡುವ ಕೆಲಸಕ್ಕೆ ಸರಿಯಾದ ಸಂಬಳ, ನಾಳೆಯ ಚಿಂತೆ ಅಷ್ಟಿಲ್ಲ, ಜೀವನದ ಭಾರವನ್ನ ಕಡಿಮೆಯಾಗಿಸುವ ಸ್ನೇಹಿತರ ಜೊತೆ ಆಟ-ಪಾಟಗಳು. ಈ ಬಗೆಯ ಸರಳ ರೀತಿಯ ಜೀವನದಲ್ಲಿ ಸಂತೃಪ್ತಿಯನ್ನ ಹೊಂದಿರುವುದು ಮತ್ತು ಪರಮಾರ್ಥವನ್ನು ಗಳಿಸುವುದರಲ್ಲಿ ದೃಷ್ಟಿ ಇರಿಸಿಕೊಂಡಿರುವುದು., ಇವುಗಳೆಲ್ಲವೂ ಕೂಡಿ ಬಂದರೆ ಅದು ನಮ್ಮ ಅದೃಷ್ಟದ ಫಲ ಎನ್ನಬಹುದು".- ಇದು ಮೇಲಿನ ಕಗ್ಗದ ತಾತ್ಪರ್ಯ .

ಇಂದಿನ ಯಾಂತ್ರಿಕ ಜೀವನವನ್ನ ಬಿಂಬಿಸುವಂತೆ ಹಾಗೂ ಆ ಬದುಕಿಗೆ ಹೇಗೆ ಮುಕ್ತಿ ಕಂಡುಕೊಳ್ಳಬೇಕು ., ಏನು ಮಾಡಿದರೆ ನಮ್ಮ ಬದುಕು ಸಾರ್ತಕವೆನಿಸುವುದು ಎಂಬುದನ್ನ ಈ ಕಗ್ಗದ ಮೂsಲಕ ಮಾನ್ಯ ಡಿ.ವಿ.ಜಿ ಯವರು ಅವಾಗಲೇ ಚಿತ್ರಿಸಿದ್ದಾರೆ.


ಇಂದಿನ ಬದುಕಿನಂತೆ ಅಂದಿನ ಬದುಕಿತ್ತ ? ಇಂದಿನ ಯಾಂತ್ರಿಕ ಜೀವನ ಆಗಲೇ ಸೃಷ್ಟಿಯಾಗಿತ್ತ ? ಇಲ್ಲ ಡಿ.ವಿ.ಜಿ ಯವರ ಆಲೋಚನೆಗಳು ಇಂದಿನ ದಿನಗಳನ್ನ ಸೃಷ್ಟಿಸಿ ತೋರಿಸಿದ್ದವ ?


ಅವರ ಮೇಲಿನ ಕಗ್ಗ ಓದುತ್ತಾ ಇದ್ದರೆ .,ಮೇಲಿನಂತೆ ಬರೀ ಪ್ರಶ್ನೆಗಳೇ ಉದ್ಬವಿಸುತ್ತವೆ ವಿನಃ ಉತ್ತರ ಸಿಗೋದು ಒಂದೊ ಎರಡೋ ಪ್ರಶ್ನೆಗಳಿಗೆ ಮಾತ್ರ!!.

ಆ ಮೇಲಿನ ಕಗ್ಗದ ಸಾಲುಗಳು ಏಕೆ ಹಾಗು ಹೇಗೆ ಹುಟ್ಟಿದವು ಅಂತ ಅದರ ಮೂsಲ ಹುಡುಕೋದಕ್ಕಿಂತ., ಆ ಸಾಲುಗಳು ಏನನ್ನ ಬಿಂಬಿಸ್ತಾ ಇವೆ ., ಅದರಿಂದ ನಮಗೆ ಏನಾದ್ರು ಸಹಾಯ ಆಗುತ್ತಾ ಅಂತ ನೋಡೋಣ ., ಆ ಸಾಲುಗಳನ್ನ ಅರ್ಥ ಮಾಡಿಕೊಳ್ಳೋಣ .,ಸಾಧ್ಯವಾದರೆ ಅವುಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ .,

ಈ ಯಾಂತ್ರಿಕ ಜೀವನದಲ್ಲಿ ದಿನ ಉರಿಳಿದಂತೆ ಮಾನವನ ಒಳ್ಳೇ ಆಲೋಚನೆಗಳು .,ಉತ್ತಮ ತತ್ವಗಳು/ಮಾರ್ಗಗಳು ನೆಲ ಕಚ್ಚುತಾ ಇವೆ.,


ಹಿಂದಿನ ದಿನಗಳಲ್ಲಿ ಅವನು ಇರಿಸಿಕೊಂಡಿದ್ದ ಮಧುರ ಭಾವನೆಗಳು ., ಪ್ರೀತಿ - ಬೆಸುಗೆಗಳು, ಸ್ನೇಹ - ಬಾಂಧವ್ಯಗಳು ನೆಲ ಸೆರ್ತಾ ಇವೆ .,

ಹಣ-ಅಂತಸ್ತು , ಅಧಿಕಾರ-ಪ್ರತಿಷ್ಟೆ ಈ ನಾಲ್ಕು ಅವನ ಬಾಳ ಪ್ರತಿ ಹೆಜ್ಜೆಯನ್ನ ಆವರಿಸುತ್ತಾ ಬರುತ್ತಿವೆ ., ಈ ನಾಲ್ಕಕ್ಕಾಗಿ ಏನನ್ನಾದರೂ ಮಾಡಲು ಸಿದ್ದನಿದ್ದಾನೆ., ಯಾರನ್ನಾದರು ತುಳಿಯಲು, ಕಿತ್ತು ತಿನ್ನಲು ., ಹ್ಮ್ಮ್ ಉಪಯೋಗಿಸಿ ಬಿಸಾಡಲು ಸಿದ್ದನಿದ್ದಾನೆ .,


ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕಂದ್ರೆ., ಹಣ-ಅಂತಸ್ತು , ಅಧಿಕಾರ-ಪ್ರತಿಷ್ಟೆ, ಇಸ್ಟೂ ಬಾಳಲ್ಲಿ ಇರಬೇಕು ಅಂದರೆ ಯಾರ ಒಡನಾಟ ಇರಬೇಕು ., ಏಲ್ಲಿ ಏನನ್ನ ಸೃಷ್ಟಿ ಮಾಡಬೇಕು ., ಏಲ್ಲಿ ಏನನ್ನ ನಾಶಮಾಡಬೇಕು ., ಇವೆಲ್ಲವನ್ನ ಕರಗತ ಮಾಡ್ಕೋತಾ ಇದಾನೆ ., ಎಲ್ಲವೂ ಕರಗತವಾಗ್ತಾ ಇದೆ ., ಅವನಂದುಕೊಂಡಂತೆ ಸಾಗ್ತಾ ಇದೆ .,

ಎಲ್ಲವನ್ನ ಎಲ್ಲರನ್ನ ಬದಿಗೊತ್ತಿ ., ಅವನಂದುಕೊಂಡಂತೆ ಹಣ-ಅಂತಸ್ತು , ಅಧಿಕಾರ-ಪ್ರತಿಷ್ಟೆ ಇಸ್ಟೂ ಸಿಕ್ತು ಮುಂದೆ?

ಆಗ ಖಂಡಿತ ಮನುಷ್ಯ ಪ್ರೀತಿ ಬೇಡ್ತಾನೆ ., ಕೆಲವರ/ಉತ್ತಮರ ಸಂಗ ಬೇಡ್ತಾನೆ, ಉತ್ತಮ ಬಾಂಧವ್ಯಗಳನ್ನ ಬೇಳೆಸೋಕೆ ಖಂಡಿತ ಪ್ರಯತ್ನ ಪಡ್ತಾನೆ ., ಆದ್ರೆ ಅವುಗಳ್ಯಾವು ಅವನ ಬಾಳಲ್ಲಿ ಮತ್ತೆ ಸೃಷ್ಟಿಯಾಗೊಲ್ಲ, ಸೃಷ್ಟಿಯಾದ್ರು ಮಧುರಾನುಭವ ನೀಡೋಲ್ಲ .,

ಮಾನವನ ಬದುಕು ಇಗೂ ಆಗುತ್ತೆ ., ಅವನ ಆಲೋಚನೆಗಳು ಅವನ ನೆಮ್ಮದಿ ಹಾಳುಗೆಡವುತ್ತವೆ, ಮಾನವ ಜೀವನದಲ್ಲಿ ಸಾಮರಸ್ಯ ಕಳೆದುಕೊಳ್ತಾನೆ ಅಂತ ಡಿ.ವಿ.ಜಿ ಯವರಿಗೆ ಹೊಳೆದಿತ್ತಾ ? ಅವರನ್ನ ಸರಿದಾರಿಯಲ್ಲಿ ನೆಡೆಸಲೆಂದೇ ಅವರು ಇಂತ ಸಾಲುಗಳನ್ನ ತಮ್ಮ ಕಗ್ಗದ ಮೂಲಕ ಚಿತ್ರಿಸಿದ್ರ ?

ಉತ್ತರ ನೀಡೋಕೆ ಅವರಿಲ್ಲ ., ಆದ್ರೆ ಅವರು ರಚಿಸಿರುವ ಕಗ್ಗಗಳನ್ನ ಓದಿದರೆ ನಿಜ ಅನ್ನಿಸುತ್ತೆ .,


ಸ್ವಾರ್ತ ಸಾಧನೆಯಲ್ಲಿ ಬೇರೆಯವರ ಬಾಳು ನರಕವಾಗಿಸುತ್ತಿರುವ ಇಂದಿನ ಯಾಂತ್ರಿಕ ಮಾನವ ., ಮುಂದಿನದಿನಗಳಲ್ಲಾದರು ಇಂತ ಮಹಾತ್ಮರ ಹಿತನುಡಿಗಳನ್ನ ಜೀವನದಲ್ಲಿ ಅಳವಡಿಸಿಕೊಳ್ತಾನಾ? ., ಮುಂದಿನವರ ಬಾಳ ಬೆಳ್ಗತಾನಾ? ಕಾದು ನೊಡಬೇಕಿದೆ !!





ಸಿಹಿ ಹನಿ :

ಆತ್ಮಾಭಿಮಾನ/ಆತ್ಮಸಂತೃಪ್ತಿ ಬೆಳಸಿಕೊಳ್ಳಿ ., ಜೊತೆಗೊಂದಿಸ್ಟು ಪ್ರೀತಿ/ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಿ .ಇತಿಂಸ್ಟೇ ಸಾಕು ನಮ್ಮ ಬದುಕು ಸಾರ್ತಕವೆನಿಸಲು !! ., ನಮ್ಮ ಬದುಕು ಹಸನಾಗಲು !!.,


Friday, July 10, 2009

ದೇವರೂ ಎನಿಸಿಕೊಂಡಿರುವ ಆ Invisible Legendಗೆ !!! ನಾಲ್ಕು ಪ್ರಶ್ನೆಗಳು

ಪ್ರತಿ ಕಷ್ಟದ ಕ್ಷಣಗಳನ್ನ
ಪ್ರೀತಿಯಿಂದಲೇ ಸ್ವೀಕರಿಸುತ್ತಿರುವರು .,
ಪ್ರತಿ ನೋವನ್ನು ತಂತಾವೇ ನುಂಗಿಕೊಳ್ಳುತ್ತಿರುವರು
ಎಲ್ಲವೂ ನಿನ್ನ ನಡೆ.., ಎಲ್ಲವೂ ನಿನ್ನ ಲೀಲೆ ., ಎನ್ನುತ್ತಿರುವರು !!
ನಿನ್ನನ್ನೇ ಜಗದೋದ್ದಾರಕನೆನ್ನುತಿಹರು !!
ಇವೆಲ್ಲವಕ್ಕೂ ಅರ್ಥವುಂಟೇ ???
ಅವರ ನಂಬಿಕೆಗೆ ನಿನ್ನಲ್ಲಿ ಬೆಲೆಯುಂಟೆ ????



ಕಾಣುವ ಪ್ರತಿಯೊಂದನ್ನ
ಪರೀಕ್ಷಿಸಿ ನಂಬುವ ಮಾನವ !!
ಕಾಣದ ನಿನ್ನ ಅದೇಗೆ
ನಂಬುವನೋ / ನಂಬಿಹನೋ ??



ಆಸೆ ಕನಸುಗಳ ಜೊತೆಗೊಂದಿಸ್ಟು
ಆಶಾಭಾವನೆಗಳು ., ಇಷ್ಟು ಸಾಕೆ ?
ಮಾನವನ ಬದುಕು ಹಸನಾಗಲು ?
ಅವನ ಬದುಕು ಸಾರ್ಥಕವೆನಿಸಲು ??




ಎಲ್ಲವನ್ನೂ ಕೊಟ್ಟಾಗೆ ಮಾಡಿ
ಬಾಳ ಬೆಳಗುತ್ತಿಯ .. ?
ಅವೆಲ್ಲವಕ್ಕಿಂತ ಮಿಗಿಲಾದ ಆಸೆಕೊಟ್ಟು
ಬಾಳ ಹಿಂಡುತ್ತಿಯಾ ., ?



ಹೊಟ್ಟೆಗೆ ಹಿಟ್ಟು,ಕಣ್ಣಿಗೆ ನಿದ್ದೆ ,ಮನಸಿಗೆ ನೆಮ್ಮದಿ
ಇಷ್ಟು ಸಾಕಿತ್ತಲ್ಲವೇ ಮಾನವನ ಬಾಳ ಬೆಳಗಲು ??
ಹಣ , ಅಂತಸ್ತು,ಘನತೆ ಇಂತಿಸ್ಟು ಬೇಕಿತ್ತೆ ?
ಅವನ ಬಾಳ ಕತ್ತಲಾಗಿಸಲು.,



ಎಲ್ಲರನ್ನ ಒಟ್ಟಿಗಿಟ್ಟು ಪ್ರೀತಿ ಬೆಳೆಯ ಬಿಡುತ್ತೀಯ.,??
ಎಲ್ಲರನ್ನ ಒಟ್ಟಿಗಿಟ್ಟು ಬಾಳಕೊಂಡಿಗಳು ಬಿಗಿಗೊಳ್ಳಲು ಬಿಡುತ್ತೀಯ .,??
ಕೊನೆಗೊಂದು ದಿನ ಒಂದೊಂದು ಕೊಂಡಿ ಕಳಚಿ
ಬಾಳ ದಾರಿಯಲ್ಲಿ ಯಾರು ಇಲ್ಲದಾಗಿಸುತ್ತೀಯ ??

ಪ್ರತಿ ಹನಿಯನ್ನ ಪ್ರೀತಿಸುವವರು ಅವರು,ಅ ಹನಿಯನ್ನೇ ದೂಶಿಸುವವರು ನಾವು.,

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..
ಸುರಿವ ಒಲುಮೆಯಾ ಜಡಿ ಮಳೆಗೆ..ಪ್ರೀತಿ ಮೂsಡಿದೆ ........!!!!







ಇಂತ ಅದ್ಭುತ ಸಾಲುಗಳನ್ನ ಯೋಗರಾಜ್ ಭಟ್ರು ಒಬ್ಬ ಪಟ್ಟಣವಾಸಿಯಗಿದ್ದರೆ ಖಂಡಿತವಾಗಿಯೂ ಗೀಚುತ್ತಿರಲಿಲ್ಲ .,
ಅವರು ಹಳ್ಳಿಯ ವಾತಾವರಣದಲ್ಲಿ ಬೆಳೆದು ., ಅಲ್ಲಿನ ಸುಂದರ ಹಸಿರಿನ ಮಧ್ಯೆ ಓಡಾಡಿ .,
ಮುಂಗಾರು ಮಳೆಯಲ್ಲಿ ತೊಯ್ದು ., ಅದರ ಪ್ರತಿ ಹನಿಯನ್ನ ತಮ್ಮ ಮನಸಿನಲ್ಲಿ ತುಂಬಿಕೊಂಡು .,
ಮುಂದೊಂದು ದಿನ ಆ ಮಳೆಯ ಮಧುರ ಕ್ಷಣಗಳನ್ನ ಕನವರಿಸಿದಾಗಲೇ ಇಂತ ಸಾಲುಗಳು ಹುಟ್ಟಿರುವುದು .,

ಹೌದು ಒಬ್ಬ ಪಟ್ಟಣವಾಸಿಯಾದರೆ(ಹುಟ್ಟು ಪಟ್ಟಣಿಗ) ಮಳೆ ಬಂದ್ರೆ ಸಾಕು ಇದು ಯಾಕಾದ್ರು ಬರುತ್ತೆ ? !! ನಮ್ಮ ನಿತ್ಯ ಬದುಕನ್ನ ಹಾಳುಗೆಡವಲು ಎಂದು ಸದಾ ಶಪಿಸುತ್ತಲೇ ಇರ್ತಾನೆ ., ಅವನಿಗೆ ಅದರ ಮಹತ್ವ .,ಅದರ ಪ್ರಯೋಜನ ಬಗ್ಗೆ ತಿಳುವಳಿಕೆ ಕಡಿಮೆ ಅಂದ್ರು ತಪ್ಪಾಗಲಾರದು ., ಇನ್ನ ಅದರ ಪ್ರತಿ ಹನಿಯನ್ನ ಪ್ರೀತಿಸುವ ಗೋಜಿಗೆ ಹೋಗುವುದೆಲ್ಲಿ ?? !!.

ಅವನಿಗೆ ಮಳೆಯ ಮಹತ್ವ ತಿಳಿವುದು ಒಂದೋ ತಮ್ಮ ಮನೆ ಬಾಗಿಲಿಗೆ ಬಾರೋ ಕುಡಿಯೋ ನೀರು(ಬೆಂಗಳೂರಿಗೆ ಬರೋ ಕಾವೇರಿ) ನಿಂತಾಗ ., ಇಲ್ಲ ತಾನಿರೋ ಗಲ್ಲಿಯಲ್ಲಿ ಪವರ್ ಕಟ್/ ಲೋಡ್ ಶೆಡ್ಡಿಂಗ್ ಶುರು ಆದಾಗ ., ಇಲ್ಲವಾದಲ್ಲಿ ಪತ್ರಿಕೆಯಲ್ಲಿ ಹಾಗು ದೂರದರ್ಶನದಲ್ಲಿ ಬಿತ್ತರವಾಗುವ ಕೆಲ ಸುದ್ದಿಗಳತ್ತ (ಉದಾ : ಕೇವಲ ೧೧ ದಿನ ಮಾತ್ರ ವಿದ್ಯುತ್ ಉತ್ಪಾದನೆ ಸಾಧ್ಯ : ರಾಜ್ಯಕ್ಕೆ ಕಗ್ಗತ್ತಲೆಯ ಭೀತಿ ., ವರುಣ ದೇವನೇ ಗತಿ )ಕಣ್ಣು ಹಾಯಿಸಿದಾಗ.

ಮಳೆಗಾಲ ಶುರುವಾದ್ರೆ ಸಾಕು , ಮುsಲೆ ಸೇರಿದ್ದ ರೈನ್ ಕೊಟ್ ಹಾಗು ಛತ್ರಿಯನ್ನ ಹೊಂದಿಸಿ ಕುರ್ತಾನೆ ., ಮಳೆಯಲ್ಲಿ ನೆನದ್ರೆ ಶೀತ, ತಲೆ ನೋವು ಹೀಗೆ ಅನೇಕ ವ್ಯಾಧಿಗಳು ಹುಟ್ಟುತ್ವೆ ಅಂತ ಒ]ಷಧಿಗಳನ್ನ ರೆಡಿ ಮಾಡ್ಕೋತಾನೆ ., ಮಳೆಗಾಲ ಶುರುವಾಗೊದನ್ನ ಹಾಗು ಮುಗಿಯೋದನ್ನ ಸುದ್ದಿ ಮಾಧ್ಯಮಗಳ ಮುಖೇನ ತಿಳಿದುಕೊಳ್ತಾನೆ ., ಹೀಗೆ ಬದುಕೋ ಅವನಲ್ಲಿ ಮಳೆ ಬಗ್ಗೆ ಪ್ರೀತಿ ಹುಟ್ಟು ಅಂದ್ರೆ ಎಲ್ಲಿಂದ ತಾನೇ ಹುಟ್ಟುತ್ತೆ ?? ಅಲ್ವ !!! ??

ಅದೇ ಮಳೆ ಬಿದ್ರೆ ಸಾಕು ಹಿರಿ ಹಿರಿ ಹಿಗ್ಗುವ ನಮ್ಮ ಹಳ್ಳಿಯವ.ಅದರ ಹನಿಗಳು ಇನ್ನಷ್ಟು ರಭಸವಾಗಿ ಹಾಗೂ ಇನ್ನಷ್ಟು ದಪ್ಪನಾಗಿ ಬೀಳಲಿ ಎಂದು ಸದಾ ಬೇಡುವ .,


ಬಿಡದೇ ಸುರಿದರೂ ಬೇಸರಗೊಳ್ಳದೆ ಅದರ ಪ್ರತಿ ಹನಿಯನ್ನ ಪ್ರೀತಿಸುವ ., ಪೂಜಿಸುವ ., ನಮ್ಮ ಹಳ್ಳಿಯವ .






ಅವನಿಗೆ ಮಳೆಯೇ ಜೀವಾಳ ., ಅವನಿಗೆ ಮಳೆಯೇ ಎಲ್ಲ!!! ., ಅವನಿಗೆ ಮಳೆಗಾಲ ಯಾವಾಗ ಶುರುವಾಗುತ್ತೆ .,
ಆ ಕಾಲದಲ್ಲಿ ಎಷ್ಟು ಮಳೆ ಬಿಳುತ್ವೆ (ರೋಯಿಣಿ,ಭರಣಿ ಹೀಗೆ .,) ಯಾವ ಮಳೆ ಯಾವಾಗ ಹುಟ್ಟಿ ಯಾವಾಗ ಕೊನೆ ಆಗುತ್ತೆ !! ಹೊಸ ಮಳೆ ಯಾವಾಗ ಆರಂಭವಾಗುತ್ತೆ ಹೀಗೆ ಎಲ್ಲವನ್ನ ಸುದ್ದಿ ಮಾಧ್ಯಮಗಳಿಲ್ಲದೆ ತಿಳಿಯುವವ ., ಮಳೆಯನ್ನೇ ತನ್ನ ಒಂದು ಅಂಗವಾಗಿಸಿಕೊಂಡಿರುವ .,ಆ ಮಳೆಯನ್ನೇ ತನ್ನ ಪ್ರಾಣವಾಗಿಸಿಕೊಂಡಿರುವ .,

ಮಳೆ ಶುರುವಾದ್ರೆ ಸಾಕು ತಲೆ ಮೇಲೆ ಗೊಪ್ಪೆ(ಗೋಣಿ ಚೀಲ /ತಾಟು) ಹಾಕಿಕೊಂಡು ತನ್ನ ನಿತ್ಯ ಕಾರ್ಯದತ್ತ(ವ್ಯವಸಾಯದತ್ತ) ಹೆಜ್ಜೆ ಹಾಕ್ತಾನೆ , ಬೆಳಗಿನಿಂದ ಸಂಜೆವರೆಗೂ ಅದೇ ಮಳೆಯಲ್ಲಿ ಮಿಂದು ತನ್ನ ಅಸ್ಟು ಕೆಲಸವನ್ನ ಮುಗುಸ್ತಾನೆ., ರಾತ್ರಿ ಬೀಳೋ ಮಳೆಯನ್ನೂ ಹೆಂಡತಿ ಮಕ್ಕಳೊಂದಿಗೆ ಕೂತು ನೋಡಿ ಆನಂದ ಪಡ್ತಾನೆ ., ತನ್ನ ಮಕ್ಕಳಿಗೆ ಅದರ ಬಗ್ಗೆ ನೀತಿ ಪಾಠ ಹೇಳಿ ಆದರ್ಶ ಮೆರಿತಾನೆ ., ಮಕ್ಕಳೂ ಮಳೆಯನ್ನ ಪ್ರೀತಿಸಿ ., ಪೂಜಿಸುವಂತೆ ಮಾಡ್ತಾನೆ !!

ಹೀಗೆ ಮಳೆಯ ಪ್ರತಿ ಹನಿಯನ್ನ ಪ್ರೀತಿಸುವವರು ಅವರಾಗ್ತಾರೆ ., ಅ ಹನಿಯನ್ನೇ ದೂಶಿಸುವವರು ನಾವಾಗ್ತೇವೆ ...






ಸಿಹಿ ಹನಿ :


"ಬೇರೆಯವರಿಗೆ ಸಹಾಯ ಮಾಡಲಾಗದಿದ್ದರೂ ಅವರಿಗೆ ಕಷ್ಟ ಕೊಡಲೇಬಾರದು" !!
ಈ ಮಾತು ತಲತಲಾಂತರದಿಂದ ಬಂದದ್ದು ., ಈ ಮಾತನ್ನ ಮುಂದಿನ ತಲೆಮಾರಿಗೂ ಬಿಡಿ .,

ಮಳೆಯೇ ಹಳ್ಳಿಗನಿಗೆ ಜೀವಾಳ ., ಅದು ಸದಾ ಸುರಿಯಲು ಬಿಡಿ !! ಅದಕ್ಕಾಗಿ ಮರಗಳನ್ನ ಉಳಿಸಿ ., ಬೆಳಸಿ ., !!

ಸುರಿಯೋ ಮಳೆ ., ಅದನ್ನ ಪ್ರೀತಿಸುವ ಜೀವಕ್ಕೆ ಸಹಾಯ ಮಾಡಿ ., ಅದರ ನೆಮ್ಮದಿ ಬದುಕಿಗೆ ನೆರವಾಗಿ !!!

Monday, June 22, 2009

ಟಿಪ್ಪು ಸುಲ್ತಾನ್ !! .. ಹಾಗು ಅವನ ಬೆಂಗಳೂರಿನ "ಬೇಸಿಗೆ ಅರಮನೆ"



"ಟಿಪ್ಪು ಸುಲ್ತಾನ್" ಹೆಸರು ಕೇಳುತ್ತಲೇ ಎಲ್ಲರೂ ಓ ಅವರ ಬಗ್ಗೆ ಶಾಲಾ ದಿನಗಳಲ್ಲಿ ತುಂಬಾ ಓದಿದ್ದೇವೆ ಎಂದು ಉದ್ಗರಿಸುತ್ತಾರೆ ., ಈ ಸಾಲಿನಲ್ಲಿ ನಾನು ಸಹ ಇದ್ದೆ !! .,
ಆದರೆ ಬೆಂಗಳೂರಿನಲ್ಲಿರುವ ಅವರ ಬೇಸಿಗೆ ಅರಮನೆ ನೋಡಿದ ನಂತರವೇ ನನಗೆ ಅರಿವಿಗೆ ಬಂದದ್ದು ನಾ ಅವರ ಬಗ್ಗೆ ತಿಳಿದಿರುವುದು ಅಲ್ಪ ಮಾತ್ರ
(ಈ ಲೇಖನ ಓದಿ ಮುಗಿಸುವುದರಲ್ಲಿ ನಿಮಗೂ ಈ ಭಾವನೆ ಬರಬಹುದು ) .,

ಅಲ್ಲಿ ತಿಳಿದ , ಕಲೆ ಹಾಕಿದ ಕೆಲ ಮಾಹಿತಿಗಳು ನಿಮ್ಮ ಮುಂದೆ .,


ಟಿಪ್ಪುವಿನ ಘಟನೆಗಳ ಕಾಲ ಸೂಚಿ (Histroy)
-----------------------------------------


1.1750 - ದೇವನಹಳ್ಳಿಯಲ್ಲಿ ಫ್ಹಕ್ರುನ್ನಿಸ್ಸಾ ಮತ್ತು ಹೈದರ್ ಆಲಿ ದಂಪತಿಗಳಿಗೆ ಮಗನಾಗಿ ಜನನ
2.1767 - ತಂದೆ ಹೈದರ್ ಆಲಿ ಜೊತೆ ಮೊದಲ ಆಂಗ್ಲೋ - ಮೈಸೂರು ಯುದ್ಧದಲ್ಲಿ ಹೋರಾಡಿ ಆಂಗ್ಲರನ್ನು ಸೋಲಿಸಿದರು.
3.1780 - ಎರಡನೇ ಆಂಗ್ಲೋ - ಮೈಸೂರು ಯುದ್ಧದಲ್ಲಿ ತಂದೆ ಹೈದರ್ ಆಲಿ ಜೊತೆ ಸೇರಿ ಪೋಲಿಲುರ್ ಬಳಿ ಕರ್ನಲ್ ಬೇಯಲಿಯನ್ನು ಸೋಲಿಸಿದ್ದರು.
4. 1782 - ಚಿತ್ತೂರು ಮೊಕ್ಕಾಂ ಬಳಿ ತಂದೆ ಹೈದರ್ ಆಲಿಯ ಮರಣ
5. 1783 - ಮೇ ೪ ರಂದು ಬಿದನೂರಿನ ಸರಳ ಸಮಾರಂಭದಲ್ಲಿ ಮೈಸೂರ ಅರಸನಾಗಿ ಅಧಿಕಾರ ಸ್ವೀಕಾರ .,
6. 1784 - ಮಂಗಳೂರು ಒಪ್ಪಂದಕ್ಕೆ ಸಹಿ
7. 1790-92 - ಮೂರನೆಯ ಆಂಗ್ಲೋ - ಮೈಸೂರು ಯುದ್ಧದಲ್ಲಿ ಪರಾಜಯ ಹಾಗೂ ಶ್ರೀರಂಗಪಟ್ಟಣದ ಒಪ್ಪಂದಕ್ಕೆ ಸಹಿ
8. 1792 - ಲಾರ್ಡ್ ಕಾರ್ನ್ ವಾಲಿಸ್ ಸಾರಿದ ಶಾಂತಿ ಒಪ್ಪಂದಕ್ಕೆ ಸಹಿ .
ತಮ್ಮ ಇಬ್ಬರು ಮಕ್ಕಳನ್ನ (ಅಬ್ದುಲ್ ಖಾಲಿಖ್ ಮತ್ತು ಮ್ರುಜುಹುದ್ದೀನ್ ) ಆಂಗ್ಲರಿಗೆ ಒಪ್ಪಿಸಿದ
9. 1799 - ನಾಲ್ಕನೇ ಆಂಗ್ಲೋ - ಮೈಸೂರು ಯುದ್ಧದಲ್ಲಿ ಪರಾಜಯ
10. 1799 - ಮೇ ೪ ರಂದು ವೀರ ಮರಣ

ಇಂತಿಸ್ಟು ಅವನ ಚರಿತ್ರೆ .,

ಇನ್ನ ಅವನ ಚಾರಿತ್ರ್ಯದ ಬಗ್ಗೆ .......,


೧. ಪ್ರಜೆಗಳ ಆರ್ಥಿಕ ಹಿತರಕ್ಷಣೆ ಮತ್ತು ತನ್ನ ರಾಜ್ಯದ ಸಂಪನ್ಮೂಲಗಳ ಅಭಿವೃದ್ದಿ ಮತ್ತು ಪ್ರಗತಿ ಟಿಪ್ಪುವಿನ ಮುಖ್ಯ ಧ್ಯೇಯಗಳಾಗಿದ್ದವು.

೨. ಟಿಪ್ಪು ತನ್ನ ಸಕ್ರಿಯ ಕೃಷಿ ಕಾರ್ಯನೀತಿಯ ಮೂಲಕ ಮೈಸೂರಿನ ಬಹುಭಾಗ ಜಮೀನುಗಳನ್ನ ಆರ್ಥಿಕ ಸಂವೃದ್ದಿಗೆ ಒಳಪಡಿಸಿದ್ದನು.ಸ್ವಾರ್ತಿಗಳಾದ ಸಾಹುಕಾರನನ್ನ ತೆಗೆದು ಹಾಕಿ, ರಾಜ್ಯಕ್ಕೆ ನ್ಯಾಯವಾಗಿ ಸಲ್ಲ ತಕ್ಕ ಭಾಗವನ್ನು ನಿಗದಿಪಡಿಸ್ಸಿದ್ದನು.

೩. ಸುಗಂದಭರಿತ ಶ್ರೀಗಂಧದ ಮರಗಳನ್ನ ರಾಜ್ಯದ ಸ್ವಾಮ್ಯತಗೆ ತಂದವನು ಟಿಪ್ಪು .

೪. ಟಿಪ್ಪು ತೇಗದ ಮರದ ಬೆಳವಣಿಗೆಗೆ ಪ್ರೋತ್ಸಾಹ ನೀಡಿ ರಾಜ್ಯಕ್ಕೆ ಅದರ ಏಕಸ್ವಾಮ್ಯತೆ ತಂದನು.

೫. ಟಿಪ್ಪು ಟರ್ಕಿ,ಫ್ರಾನ್ಸ್,ಪರ್ಶಿಯಾ ಮತ್ತು ಆಫ್ಗನಿಸ್ತಾನ್ ರಾಜ್ಯಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದನು.ಈ ವ್ಯಾಪಾರ ಒಪ್ಪಂದಗಳ ಕಾರ್ಯನಿರ್ವಾಹಣೆಗಾಗಿ ವಾಣಿಜ್ಯ ರಾಯಭಾರಿ ಮತ್ತು ಪ್ರತಿನಿಧಿಗಳನ್ನ ನೇಮಿಸಿದ್ದನು. ವಿದೇಶಗಳಲ್ಲಿ ಕಾರ್ಖಾನೆಗಳನ್ನ ಸ್ಥಾಪಿಸಿ. ಸರಕು ಮಳಿಗೆಗಳನ್ನ ತೆರೆದು,ವ್ಯಾಪಾರ ಕೇಂದ್ರಗಳನ್ನ ಯಶಸ್ವಿಯಾಗಿ ನಡೆಸುವುದು ಅವರ ಜವಾಬ್ದಾರಿಯಾಗಿತ್ತು.

೬.ಮೈಸೂರಿನಲ್ಲಿ ಪ್ರಪ್ರಥಮವಾಗಿ ಹಿಪ್ಪನೇರಳೆ ಸಾಗುವಳಿ ಹಾಗು ರೇಷ್ಮೆ ಹುಳುಗಳ ಸಾಗಾಣಿಕೆ ಪ್ರಾರಂಭಿಸಿದ ಯಶಸ್ಸು ಟಿಪ್ಪುವಿನದ್ದು.

೭.ತೋಟಗಾರಿಕೆಗೆ ಟಿಪ್ಪುವಿನ ಕಾಣಿಕೆ ಗಮನಾರ್ಹವಾದುದ್ದು. ಹೈದರ್ ಆಲಿ ಆರಂಭಿಸಿದ ಲಾಲ್ ಬಾಗ್ ತೋಟವನ್ನ ಟಿಪ್ಪು ಬಹು ದಕ್ಷತೆಯಿಂದ ಪೋಶಿಸಿದ್ದ.,

೮.1797ರಲ್ಲಿ, ಶ್ರೀರಂಗಪಟ್ಟಣದ ಪಶ್ಚಿಮಕ್ಕೆ ಕೆಲವು ಕಿ.ಮಿ. ದೂರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ,ಎಪ್ಪತ್ತು ಅಡಿ ಎತ್ತರದ ಸೇತುವೆಯನ್ನ ನಿರ್ಮಿಸಿದ್ದು ಟಿಪ್ಪು.

೯.ಟಿಪ್ಪು ವ್ಯವಸಾಯವನ್ನ ಅಭಿವೃದ್ದಿ ಪಡಿಸಿ ವ್ಯಾಪಾರ ಮತ್ತು ಕೈಗಾರಿಕೊದ್ಯಮವನ್ನು ಪ್ರವರ್ತಿಸಿದ್ದನು. ರಸ್ತೆಗಳನ್ನು ನಿರ್ಮಿಸಿದ್ದನು.ಮಲಬಾರ್ ನ ರಸ್ತೆ ನಿರ್ಮಾಣದ ಕತೃ ಟಿಪ್ಪು.

೧೦. ಟಿಪ್ಪು ಅಪೂರ್ವ ಅಂಚೆ ಮತ್ತು ಸುದ್ದಿ ಇಲಾಖೆಗಳನ್ನ ಸ್ಥಾಪಿಸಿ, ಅಂಚೆ ರನ್ನರ್ ಗಳನ್ನ ಮತ್ತು ಗೂಢಚಾರರನ್ನು ನೇಮಿಸಿದ್ದನು. ಈ ರೀತಿ ನೇಮಿಸಲ್ಪಟ್ಟವರಲ್ಲಿ ಬೇಹುಗಾರರು ಒಬ್ಬರು. ಸಂದೇಶಗಳನ್ನು ನೇರವಾಗಿ ತಲುಪಿಸುವುದು, ಇತರ ಅಧಿಕಾರಿಗಳ ಮೇಲೆ ನಿಗಾವಹಿಸುವುದು, ಶತ್ರುಗಳ ಚಲನವಲನಗಳನ್ನ ಗಮನಿಸಿ ಸೂಕ್ತ ಸಲಹೆಗಳನ್ನ ನೀಡುವುದು ಅವರ ಮುಖ್ಯ ಕೆಲಸವಾಗಿತ್ತು .,

೧೧. ಫ್ರೆಂಚ್ ನ ರಾಜಕಾರಣ ಸಂಸ್ಥೆಯ ಜಕೊಬಿಯನ್ ಕ್ಲಬ್ ಗೆ ಗೌರವ ಸದಸ್ಯನಾದ ಭಾರತದ ಪ್ರಥಮ ವ್ಯಕ್ತಿ ಟಿಪ್ಪು


ಟಿಪ್ಪು ಮತ್ತು ರಾಕೆಟ್ ತಂತ್ರಜ್ಞಾನ ....,

ತಂತ್ರೋದ್ಯಮದಲ್ಲಿ ಅತ್ಯಾಸಕ್ತನಾಗಿದ್ದ ಟಿಪ್ಪು ಸುಲ್ತಾನ್ ., ತನ್ನ ತಂದೆ ಹೈದರ್ ಆಲಿ ಪರಿಚಯಿಸಿದ ಬಾಣ ಬಿರುಸುಗಳ ತಯಾರಿಕೆಯನ್ನ ಉತ್ತೇಜಿಸಿ ಪ್ರವರ್ತಿಸಿದ್ದರು. ಅಧಿಕಾರಕ್ಕೆ ಬಂದ ನಂತರ, ಟಿಪ್ಪು ತನ್ನ ಬಾಣ ಬಿರುಸುಗಳ ಸೈನ್ಯ ಸಂಖ್ಯೆಯನ್ನ ೫೦೦೦ಕ್ಕೆ ಹೆಚ್ಚಿಸಿದ್ದನು. ಟಿಪ್ಪು ಕೈಗೊಂಡ ವಿವಿಧ ಯುದ್ದಗಳಲ್ಲಿ ಈ ಬಾಣ ಬಿರುಸುಗಳನ್ನ ಅತ್ಯಂತ ಪರಿಣಾಮಕಾರಿಯಾಗಿ ಬಳಸಲಾಗುತ್ತಿತ್ತು. ಈ ಬಾಣ ಬಿರುಸುಗಳ ನಿಪುಣರು,ಗುರಿಯ ದೂರ ಮತ್ತು ಬಾಣಗಳ ಗಾತ್ರವನ್ನ ಆಧರಿಸಿ, ಗಾಲಿಗಾಡಿಗಳ ಬಳೆಕೆಯಿಂದ, ಬಾಣಗಳ ಕೊನಗಳನ್ನ ಸರಿಹೊಂದಿಸುವ ಸಾಮರ್ಥ್ಯ
ಪಡೆದಿದ್ದರು. ಈ ಆಕಾಶ ಬಾಣಗಳ ಗುರಿ ೨.೪ ಕಿ ಮಿ ದೂರವಿದ್ದು ಅವುಗಳ ಹೊದಿಕೆಗೆ ಕಬ್ಬಿಣ ಬಳಸಿದ್ದರಿಂದ ಅವು ಆಗಿನ ಕಾಲಕ್ಕೆ ಅತ್ಯುನ್ನತ ಮಟ್ಟದ ಕಾರ್ಯವೆಂದು ಪ್ರಸಿದ್ದಿ ಪಡೆದಿತ್ತು.

ಈ ಕಾರ್ಯದ ಬಗ್ಗೆ ನಮ್ಮ ಡಾ||ಎ.ಪಿ.ಜೆ.ಅಬ್ದುಲ್ ಕಲಾಂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ., ಲಂಡನ್ ನ ವೂಲ್ ವಿಚ್ ಮ್ಯೂಸಿಯಂನಲ್ಲಿ "ಭಾರತದ ವಾರ್ ರಾಕೆಟ್ " ಎಂಬ ತಲೆಬರಹದ ಅಡಿಯಲ್ಲಿ ಇದರ ವಿವರಗಳನ್ನ ದಾಖಲಿಸಿದ್ದಾರೆ .,ಇದು ನಮಗೆ ಹೆಮ್ಮೆಯ ವಿಷಯ ಎಂದಿದ್ದಾರೆ.,





ಟಿಪ್ಪುವಿನ ಬಗ್ಗೆ ತಿಳಿಯಲೇಬೇಕಾದ ಕೆಲ ಮುಖ್ಯ ವಿಚಾರಗಳು .,

೧. ದಕ್ಷಿಣದ ದಿಂಡಿಗಲ್ ನಿಂದ ಉತ್ತರದ ಧಾರವಾಡದ ವರಗೆ ಹಾಗು ಪಶ್ಚಿಮದಲ್ಲಿ ಕೊಂಕಣದ ಕರಾವಳಿಯಿಂದ ಪೂರ್ವದಲ್ಲಿ ಬಳ್ಳಾರಿ ಮತ್ತು ಕರ್ನೂಲ್ (ಆಂದ್ರ) ಬಯಲು ಸೀಮೆವರೆಗೆ ಅವನ ಸಾಮ್ರಾಜ್ಯ ವ್ಯಾಪಿಸಿತ್ತು.,

೨. ಲಂಚ ರುಶುವತ್ತುಗಳನ್ನ ತಡೆಗಟ್ಟಲು ಅಧಿಕಾರಿಗಳು ಸೇವೆಗೆ ಸೇರುವಾಗ ತಮ್ಮ ಆಸ್ತಿ-ಪಾಸ್ತಿಗಳನ್ನ ಗೊಷಿಸುವಂತೆ ಒತ್ತಾಯಿಸುತ್ತಿದ್ದ., (Asset Declaration) (ಇದು ಸರಿಯಾಗಿ ಮುಂದುವರೆದಿದ್ದಲ್ಲಿ "ಬ್ರಷ್ಟಾಚಾರ" ಎಂಬ ಪದ ನಮಗೆ ತಿಳಿಯುತ್ತಲೇ ಇರಲಿಲ್ಲ ).

೩. "Tippus Tiger Organ"



ಟಿಪ್ಪು ಕುತೂಹಲ ಯಾಂತ್ರಿಕ ಆಟಿಕೆಯೊಂದನ್ನ ಹೊಂದಿದ್ದ., ಹುಲಿಯ ಪ್ರತಿಕೃತಿ ಬ್ರಿಟಿಷ್ ಅಧಿಕಾರಿಯೊಬ್ಬನ ಮೇಲೆ ಧಾಳಿ ನಡೆಸುತ್ತಿರುವ ದೃಶ್ಯವನ್ನ ಅದು ಪ್ರದಿನಿಧಿಸುತ್ತದೆ ., ಈ ಪ್ರತಿಕೃತಿ ಲಂಡನ್ ವಿಕ್ಟೋರಿಯ ಮತ್ತು ಆಲ್ಬರ್ಟ್ ಮ್ಯೂಸಿಯಂ ನಲ್ಲಿ ಅತ್ಯಮೂಲ್ಯ ಸಂಗ್ರಹವೆನಿಸಿದೆ .,



೪. ಹುಲಿಯ ಪಟ್ಟೆಯನ್ನ ಟಿಪ್ಪು ತನ್ನ ರಾಜ ಚಿಹ್ನೆ ಹಾಗು ಲಾಂಛನವಾಗಿ ಗುರುತಿಸಿದ., ಈ ಚಿಹ್ನೆ ಮೈಸೂರ ಹುಲಿ ಎಂದು ಪ್ರಸಿದ್ಧನಾದ ಟಿಪ್ಪುವಿನ ಸಂಕೆತವಾಗಿತು., ತನ್ನ ಕನಸು ಮನಸುಗಳಲ್ಲೂ ಆತ ಹುಲಿಯ ಸಂಗಡವೇ ಇರುತ್ತಿದ್ದ ., ಹುಲಿಯ ಛಾಯೆ ಅವನ ಮನಸಿನಲ್ಲಿ ಎಷ್ಟರಮಟ್ಟಿಗೆ ಬೇರೂರಿತೆಂದರೆ ಫಿರಂಗಿ,ಬಂದೂಕು, ವಸ್ತ್ರ ಹಾಗು ಬಾವುಟಗಳ ಮೇಲೆ ಹುಲಿ ಚಿಹ್ನೆ ಚಿತ್ರಿತವಾಗುತ್ತಿತ್ತು ., ಇದನ್ನ ಅರಮನೆಯ ಅಲಂಕಾರದಲ್ಲಿಯು ಬಳಸಲಾಗುತ್ತಿತ್ತು . ಹುಲಿ , ಚಿರತೆಗಳನ್ನ ಅರಮನೆಯಲ್ಲಿ ಸರಪಳಿಯಿಂದ ಕಟ್ಟಿಹಾಕಲಾಗುತ್ತಿತ್ತು ಹಾಗು ಹುಲಿ ಬೇಟೆ ಅವನ ಮೆಚ್ಚಿನ ಕ್ರೀಡೆಯಾಗಿತ್ತು .,



ಇನ್ನ ಅವನ "ಬೆಂಗಳೂರಿನ ಬೇಸಿಗೆ ಅರಮನೆ" ಬಗ್ಗೆ .....



ಈ ಅರಮನೆ ೧೭೮೧ರಲ್ಲಿ ಹೈದರ್ ಆಲಿ ಆರಂಭಿಸಿದ ., ಆದರೆ ದಶಕದ ನಂತರ ಟಿಪ್ಪುವಿನಿಂದ ಅದು ಪೂರ್ಣಗೊಂಡಿತು .,
ಬೇಸಿಗೆಯ ತಾಣವಾಗಿಸುವುದಲ್ಲದೆ ಈ ಅರಮನೆಯ ನಿರ್ಮಾಣದ ಉದ್ದೇಶ ಆಡಳಿತ ಹಾಗೂ ದರ್ಬಾರ್ ಗೆ ಸಂಭಂದಪಟ್ಟ ಕಾರ್ಯಗಳನ್ನ ನಿರ್ವಯಿಸುವುದು ಸಹ ಆಗಿತ್ತು .,


ಅರಮನೆಯು ೧೭ ನೇ ಶತಮಾನದಲ್ಲಿ ೧ ನೇ ಚಿಕ್ಕದೇವರಾಜ ಒಡೆಯರ್ ರವರಿಂದ ನಿರ್ಮಿತವಾದ ಮಣ್ಣಿನ ಕೋಟೆಯಿಂದ ಸುತ್ತುವರೆದಿತ್ತು .,ಆದ್ದರಿಂದ ಮರಾಠರು ಕೊಳ್ಳೆ ಹೊಡೆಯದಂತೆ ಬೆಂಗಳೂರು ಸುರಕ್ಷಿತವಾಗಿತ್ತು ., ಇದು ಟಿಪ್ಪುವಿನ ಮರಣದ ನಂತರ ಆಂಗ್ಲರ ಕೈ ಸೇರಿ ., ಅನಂತರ ರಾಜವಂಶದ ಒಡೆಯರ ವಶಕ್ಕೆ ಬಂತು .
----------------------------------------------$$$$$-------------------------------------------

'' ಇಂತ ಇತಿಹಾಸ ಉಳ್ಳ ಕಟ್ಟಡವನ್ನ ಸರ್ಕಾರ ನಿರ್ಲಕ್ಷಿಸಿತ್ತು ., ಅದರ ಸಂರಕ್ಷಣೆ ಬಗ್ಗೆ ದಿವ್ಯ ನಿರ್ಲಕ್ಷ ತೋರಿತ್ತು ., ಕೆಲ ತಿಂಗಳುಗಳ ಹಿಂದೆ ಪತ್ರಿಕೆಗಳಲ್ಲಿ ಇದರ ಬಗ್ಗೆ ತಿಳಿಸಿದಾಗ ಹೆಚ್ಚೆತ್ತ ಸರಕಾರ ಅದನ್ನ ಪೋಷಿಸುವ ಕಾರ್ಯಕ್ಕೆ ಕೈ ಹಾಕಿದೆ ., ತಕ್ಕ ಮಟ್ಟಿಗೆ ಅದರ ಪೋಷಣೆ ನಡೆದಿದೆ ., ಇನ್ನ ಅಭಿರುದ್ದಿ ಕಾರ್ಯಗಳು ಅಲ್ಲಿ ನಡೆಯಬೇಕಿದೆ '' .,


ಅರಮನೆ ವೀಕ್ಷಣೆಗೆ :-
ಭಾರತೀಯರಿಗೆ - ೫ ರೂ ಶುಲ್ಕ ನಿಗದಿಪಡಿಸಲಾಗಿದೆ
ನ.ರ.ಹೈ ಗೆ - ೧೦೦ ರೂ ಶುಲ್ಕ ನಿಗದಿಪಡಿಸಲಾಗಿದೆ (ಇದು ಮಹಾ ಮೋಸವೇ ಸರಿ., ನೀವು ಅಲ್ಲಿಗೆ ಹೋಗಿ ಬಂದರೆ ನೀವೇ ಉದ್ಗರಿಸುವಿರಿ "ಇದು ಮಹಾ ಮೋಸವೇ ಅಂತ" ).,


ಇತಿಹಾಸ ಬೇಕು ., ಇತಿಹಾಸ ನಿರ್ಮಿಸೋಕೆ .,
ಇತಿಹಾಸ ಬೇಕು ., ಒಳ್ಳೆ ವಿಚಾರಗಳನ್ನ ತಿಳಿದು ಸಾಧನೆ ಎಡೆ ಹೆಜ್ಜೆ ಇಡೋಕೆ .,
ಇತಿಹಾಸ ಬೇಕು ., ನಮ್ಮ ಬಗ್ಗೆ ನಾವು ಹೆಮ್ಮೆ ಪಡೋಕೆ ., ಗರ್ವ ಪಡೋಕೆ .,

ಇತಿಹಾಸ ಬೇಕು ., ನಮನ್ನ ನಾವು ತಿದ್ದಿಕೊಳೋಕ್ಕೆ.,
ಇತಿಹಾಸ ಬೇಕು ., ನಮ್ಮ ಮಕ್ಕಳ/ ನಮ್ಮ ಮುಂದಿನವರ ಬಾಳ ಬೆಳಗೋಕೆ .,


ಇತಿಹಾಸ ತಿಳಿಯಿರಿ ಹಾಗೂ ತಿಳಿಸಿರಿ ., ಬಿಡುವಿದ್ದಾಗ ನಿಮ್ಮ ಸುತ್ತ-ಮುತ್ತ ಇರೋ ಇಂತ ಸ್ಮಾರಕಗಳನ್ನ ವೀಕ್ಷಿಸಿ ., ಅದನ್ನ ಸಂರಕ್ಷಿಸಲು ಸಹಕರಿಸಿ ಎಂದು ತಿಳಿಸುತ್ತ .,


ನಿಮ್ಮ ನೆಲ್ಮೆಯ
ಚಾರ್ಲಿ .,





Tuesday, June 9, 2009

ನನ್ನ ಬದುಕಿನ ಪ್ರತಿ ಹೆಜ್ಜೆಯನ್ನ ತಿದ್ದಿ ತೀಡಿದ(ತೀಡುತ್ತಿರುವ) ನನ್ನ ಮುದ್ದು ಗೆಳೆಯರಿಗೆ., ಹಾಗು ಕೆಲ ಗೆಳತಿಯರಿಗೆ .,

ನಾ ಈ " ಬ್ಲಾಗ್ ದುನಿಯಾಗೆ " ಕಾಲಿಟ್ಟು ಜೂನ್ 17ಕ್ಕೆ ಸರಿ ಸುಮಾರು ಒಂದು ವರ್ಷ .,


ಈ ಬ್ಲಾಗ್ ದುನಿಯಾಗೆ ಕಾಲಿಟ್ಟಿದ್ದು ನನ್ನ ಗೆಳೆಯ DPಯ ಬ್ಲಾಗ್ ನೋಡಿ ., ಅವನ ಕೆಲ ಲೇಖನಗಳಿಂದ Inspire ಆಗಿ .,ಆದರೆ ನಾ ಗೀಚಿದ್ದು ಮಾತ್ರ ಶೂನ್ಯ !!!

ಪ್ರೀತಿಯ ಹಿಂದೆ ಬಿದ್ದಿದ್ದ ನನ್ನ ಮನಸ್ಸು ., ಸದಾ ಅದರ ಅಲೆಯಲ್ಲೇ ತೇಲುತ್ತಿದ್ದ ನನ್ನ ಆಲೋಚೆನಗಳು ., ಹೀಗಿರುವಾಗಲೇ ಗೀಚಲು ಕೂತು ಬರಿ "ಪ್ರೀತಿ" ಅದರ ಜೊತೆಗಿರುವ "ಭಾವನೆಗಳಲ್ಲೇ" ಮುಳುಗಿ ಹೋಗುತ್ತಿದ್ದೆ .,
ಅಪ್ಪಿ-ತಪ್ಪಿ ಎಲ್ಲೋ ಒಂದು ಘಟನೆಯೋ ., ಒಂದು ನೋವೂ ...,ಆಳವಾಗಿ ನನ್ನ ಮನಸಲ್ಲಿ ನೆಟ್ಟಲ್ಲಿ ಅದರ ಬಗ್ಗೆ ಗೀಚಿ ಒಂದು ಉತ್ತಮ ಲೇಖನವೋ / ಕವಿತೆಯೋ ಆಗಿಸಿರುವೆ ., ಮಿಕ್ಕಂತೆ ನಾನು , ನನ್ನ ಕೊರಗುವ ಮನಸ್ಸು ., ಅದರಿಂದ ಹೊರಬಂದ "ಸದಾ ಅಳುವ ನನ್ನ ಕವಿತೆಗಳು/ ಕವನಗಳು".,

ಹೀಗೆ ನನ್ನ ಭಾವನೆಗಳನ್ನ ಹೊರಹಾಕಿದಾಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು ., ಕೆಲವರು ಹೊಗಳಿದರು ., ತುಂಬಾ ಮಂದಿ ಉಗಿದರು ., ಇನ್ನ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ತುಂಬಾ ನೀತಿ ಪಾಠ ಹೇಳಿದರು ..
ಕೆಲವರ ಪ್ರತಿಕ್ರಿಯೆಗಳು, ಕೆಲವರ ಹಿತನುಡಿಗಳು ನನ್ನ ಮನಸಿಗೆ ತುಂಬಾ ಆಳವಾಗಿ ನಾಟಿ ., ನನ್ನನ್ನ ಆಲೋಚನೆಗೆ ದೂಡಿದವು .,

ಪ್ರತಿ ಗಳಿಗೆಗೆ ಬದಲಾಗೋ ಮನಸುಗಳು, ಪ್ರತಿ ದಿನವೂ ಹೊಸ ಸಾಧನೆಗಳು., ಅಂತೇ ಪ್ರತಿ ದಿನವೂ ಕ್ರೂರ ಘಟನಾವಳಿಗಳು .,

ಲೋಕದಲ್ಲಿ ಹಿಗಿಂತಿರುವಾಗ ., ನನ್ನಲ್ಲೂ ಹೊಸತನ, ನನ್ನಲ್ಲೂ ಬದಲಾವಣೆಗಳು ದಿನದಿಂದ ದಿನಕ್ಕೆ ಆಗಲೇಬೇಕಲ್ಲವೇ ... ??

ಖಂಡಿತವಾಗಿಯುs ನನ್ನಲ್ಲೂ ಬದಲಾವಣೆಗಳಾಗಿವೆ ., ನನ್ನಲ್ಲೂ ಹೊಸತನ ., ಹೊಸ ಕನಸುಗಳು ಹಾಗೆ ಹೊಸ ಸವಾಲುಗಳ ಚಕ್ರವ್ಯೂಹ ನಿರ್ಮಾಣವಾಗಿದೆ .,


ಒಳಗಿರುವ ಎಲ್ಲವನ್ನೂ ಹೊರಹಾಕಿ ., ನಿಮ್ಮ ಆಶಯದಂತೆ ಒಂದು ಉತ್ತಮ ಮಾರ್ಗದಲ್ಲಿ ನಡೆಯಬೇಕು ., ಒಂದು ಉತ್ತಮ ಕಾರ್ಯದತ್ತ ಮುನ್ನುಗ್ಗಲೆಂದೇ ಈ ಮೇಲಿನ ಪೀಠಿಕೆ .,


ಹೆಣ್ಣು ಮಕ್ಕಳಿಲ್ಲ ಎಂದು ಸದಾ ಕೊರಿಗಿಕೊಂಡೆ ತಮ್ಮ ಸರ್ವಸ್ವವನ್ನೂ ನಮ್ಮ ವಿದ್ಯಾಭ್ಯಾಸಕ್ಕಾಗಿ, ನಮ್ಮ ಸುಂದರ ನಾಳೆಗಾಗಿ ದಾರೆಯೆರದ ಅ ನನ್ನ ತಂದೆ-ತಾಯಿಗೆ ಸಮನಾದ ಹಾಗೂ ಅಣ್ಣ ಯಾಕಾದರೂ ಇದ್ದಾನೆ, ಅವನಿಗೇ ಮೊದಲ ಆದ್ಯತೆ, ಅವನು ಉಪಯೋಗಿಸಿಬಿಟ್ಟ ಎಲ್ಲವೂ ನನಗೆ ಬರುತ್ತೆ ನಾ ಸದಾ "Second Hand" :) ಎಂದು ತಂತಾನೇ ದೂಶಿಸಿಕೊಳ್ಳುವ, ಸದಾ ನನ್ನ "ಕರಿಯ" ಎಂದೇ ಉದ್ಗರಿಸುವ ಆ ನನ್ನ ಮುದ್ದು ತಮ್ಮನಸ್ಟೇ ಪ್ರೀಯರಾದ ಓ ನನ್ನ ಗೆಳೆಯರೇ/ಕೆಲ ಗೆಳತಿಯರೇ !!!

ಹುಟ್ಟಿದ್ದು ಅಮ್ಮನ ಮಡಿಲಲ್ಲೇ ., ನನ್ನಪ್ಪನ ಊರಲ್ಲೇ ., ಆದರೆ ಬೆಳದದ್ದು, ಓದಿದ್ದು ಮಾತ್ರ ನನ್ನ ದೊಡ್ಡಮ್ಮನ ಮನೆ ಅಂಗಳದಲ್ಲಿ ., ಬೆಳೆ ಬೆಳೆಯುತ್ತಾ ವಿದ್ಯಾಭ್ಯಾಸ ನಿಮಿತ್ತ ಅಲ್ಲಿಂದಲೇ ಬೇರೆ ಕಡೆ ಹೋಗಿದ್ದೆ ಹೆಚ್ಚು .,
ಹೀಗೆ ಅಪ್ಪ-ಅಮ್ಮನಿದ್ದ ದೂರವೇ ಇದ್ದ (Almost not Completely) ನನಗೆ, ಹೋದಲೆಲ್ಲ ಸಿಕ್ಕಿದ್ದು ನಿಮ್ಮಂತ ದೊಡ್ಡ ಗೆಳೆಯ-ಗೆಳತಿಯರ ದಂಡು .,
ಎಲ್ಲರಿಗೂ ತಿಳಿದಂತೆ School Days ಹಾಗು Degree Friends ಅಸ್ಟೇ ನಮ್ಮ Life ಅಲ್ಲಿ ಸ್ವಲ್ಪ Settled :) ಮತ್ತೆ Best Friends ಆಗೋದು ., :) ನನ್ನ ಬಾಳು ಇದಕ್ಕೆ ಬಿನ್ನವೇನಲ್ಲ !!

ನನ್ನ ಜೀವನದ ಈಗಿನ ಸ್ಥಿತಿಗೆ ನನ್ನ ತಂದೆ-ತಾಯಿ,ಕೆಲ ಬಂಧುಗಳು,ನನ್ನ ಇಬ್ಬರು ತಂಗಿಯರು(Smitha-Cousin Sis, Lavanya - Rental Sis) :) ಹಾಗೆ ನಿಮ್ಮಂತ ನೂರಾರು ಗೆಳೆಯರು,ಅಂತೇ "ಅ ಹುಡುಗಿಯ" Silenceನ ಸಂಗವಿದೆ .,
ನನ್ನ ಈ ಕ್ಷಣದ ಬದುಕಲ್ಲಿ ಎಲ್ಲಾ ಇದೆ., ನ ಬಯಸಿದ ಪ್ರೀತಿ ಬಿಟ್ಟು !!!., ಆದರೂ ಬೇಜಾರಿಲ್ಲ, ಆ ಪ್ರೀತಿ ಕಲಿಸಿದ ಪಾಠಗಳು, ಅ ಪ್ರೀತಿ ಬಯಸಿದ ಕೆಲ Qualities ನನ್ನಲ್ಲಿ Build ಆಗಿ ನಾನು Almost Complete Man ಆಗಿದೀನಿ.,ಈ ಕ್ಷಣದಲ್ಲಿ ಅ ಪ್ರೀತಿಗೆ ಕೃತಜ್ಞತೆ ಅರ್ಪಿಸಿ., ನನ್ನ ಮನದಲ್ಲೇ ಗೊರಿಯಾಗಿಸಿದ್ದ ಅ ಪ್ರೀತಿಗೆ ತಿಲಾಂಜಲಿ ಬಿಟ್ಟು (Most of my Friends needs this .,Respecting their Feel here .,Put the full stop to tht)

ಸದಾ ನನ್ನ ಮುಖದಲ್ಲಿ ನಗು, ಸದಾ ನನ್ನ ಬಾಳಲ್ಲಿ ಹೊಸತನ ನೋಡಲು ಆತೊರೆಯುತ್ತಿರುವ ಆ ನನ್ನ ಗೆಳೆಯರ ಹಾಗು ಕೆಲ ಗೆಳತಿಯರ ಅಣತಿಯಂತೆ ಸಾಗುತ್ತೇನೆ .,ಅವರೆಲ್ಲರ ಭಾವನೆಗಳಿಗೆ ಸ್ಪಂದಿಸಿ ನನ್ನ ಸುತ್ತಲಿರುವ ಸಮಾಜಕ್ಕೆ ಹಾಗು ಜನತೆಗೆ ನನ್ನಲ್ಲಿರುವ ಸ್ವಲ್ಪ Creative Ideas/Things/Thoughts ಇಂದ ಸಹಾಯ ಮಾಡ್ತೇನೆ , ಒಂದು ಆದರ್ಶಮಯ ಬಾಳತ್ತ ದಾಪುಗಾಲು ಹಾಕುತ್ತೇನೆ ., ಎಂದು ತಿಳಿಸುತ್ತಾ !!

ಮುದ್ದು ಗೆಳೆಯರೇ/ಕೆಲ ಗೆಳತಿಯರೆ., ಸದಾ ನನ್ನ ಬಾಳಲ್ಲಿ ನೀವು ಹಸಿರಾಗಿರಿ ., ಸದಾ ನನ್ನ ಕಂಗೊಳಿಸುವಂತೆ ಮಾಡಿ ., ನಿಮ್ಮ Feedback ನಿಂದ ನನ್ನ ಬಾಳ ಹಾದಿಯ ಸುಗಮಗೊಳಿಸಿ ಎಂದು ಬೇಡುತ್ತಾ .,

ನೀವು ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಸದಾ ನಾ ಋಣಿಯಾಗಿರುತ್ತೇನೆ ಎಂದು ತಿಳಿಸುತ್ತಾ !!

ನಿಮ್ಮ ನೆಲ್ಮೆಯ
ಚಾರ್ಲಿ ., ಬಾಳ ಅಂಗಳದಲಿ ಸ್ನೇಹವೇ ನನಗೆಲ್ಲ !!!

Wednesday, May 27, 2009

ಆ ನನ್ನ ಗುರುವಿಗೆ ., !!

ಏ ಹುಡುಗಿ .,
ನಿನ್ನ " Charming Beautiful Face" ಇರುವಾಗ
ರಾತ್ರಿಯ ಚಂದ್ರನೇಕೆ ??
ನಿನ್ನ ನಗುವಿನ ಅಲೆಗಳಿರಲು
ಕಡಲ ಅಲೆಗಳೇಕೆ ?? ತೊರೆಗಳೇಕೆ ??
ಈ ಭೂಮಿಮೇಲೆ ನೀನಿಂತಿರುವಾಗ .,
ಅಮವಾಸೆ ಕತ್ತಲಿನಂತೆ ನನಿನ್ನೇಕೆ ???



ಏ ಹುಡುಗಿ .,
ನೀ ಕರಗುವ ಮೇಣದ ಬತ್ತಿಯುs ಅಲ್ಲ .,
ಆಕರ್ಷಣ ಶಕ್ತಿಯಿರುವ ಅಯಸ್ಕಂತವೂ ಅಲ್ಲ .,
ನೀ ಕಲಿಯುಗದ "Kidnapped ಸೀತೆ"
Kidnapped by your
thoughts and Mind Sets !!!





ಸತತ 7 ವರ್ಷಗಳಿಂದ
ಸದಾ ಶ್ರದ್ಧೆ ಭಕ್ತಿಗಳೊಂದಿಗಿದ್ದ ನನ್ನ ಪ್ರೀತಿ
ಕೊನೆಗೂ ಹೋಮಕ್ಕೆ ಆವುತಿಯಾಯಿತು !
ಏ ಹುಡುಗಿ ನಿನ್ನ ಸುಂದರ ಬಾಳ
ನೋಡಲು ನೈವೇದ್ಯವೂ ಆಯ್ತು !!






ಹುಡುಗಿ ನಿನ್ನ ಮೇಲಿನ ಅಸ್ಟೂ ಪ್ರೀತಿಯ
ಒತ್ತಿ ಹಿಡಿಯುತ್ತಿರುವೆ .,
ನನಗಾಗುತ್ತಿರುವ ನೋವು, ಸಂಕಟ
ಹೊರಹಾಕದೆ ಒಬ್ಬನೇ ಅನುಭವಿಸುತ್ತಿರುವೆ .,
ರಾತ್ರಿಯ ನಿದಿರೆ ಬಿಟ್ಟು ., Pen Pad ಹಿಡಿದಿರುವೆ .,
ಹೀಗೆ ಮುಂದುವರೆದರೆ ಖಂಡಿತ
ನ Waste Fellow ಆಗಿಬಿಡುವೆ !!




ಇಂತಿ
ಚಾರ್ಲಿ .,

" Last Fact " :)

ನನ್ನ ಮನಸ್ಸು ಎಸ್ಟೇ ವಿಚಾರಗಳ
ಹಿಂದೆ ಹೋದರೂ ., ಅವುಗಳ ಕುರಿತು ಎಸ್ಟೇ ಗೀಚಿದರೂ.,
ಕೊನೆಗೆ ಪ್ರೀತಿಯ ಬುಡಕ್ಕೆ ಬಂದು ಹೊರಗಿ ನಿಲ್ಲುತ್ತದೆ ., :(
ಓ ದೇವರೇ ., ಬಾಳ ದಾರಿಯಲ್ಲಿ ನೆಲೆಹುಡುಕುವವನಿಗೆ
ಈ "ಪ್ರೀತಿಯ" ಸೆಲೆ ಸರಿಯೇ ., ???

ಏ ಮಾನವ ......... !!!

ಧರೆಯ ಅಸ್ಟೂ ಸೌಂದರ್ಯವ
ನೀ ವಿಕೃತಗೊಳಿಸುತ್ತಲೇ ಇರುವೆ .,
ಧರೆಯ ಅಸ್ಟೂ ವೈಶಿಷ್ಟ್ಯಗಳ
ನೀ ಹಾಳುಗೆಡವುತ್ತಲೇ ಇರುವೆ.,
ತಿಳಿದೂ ತಿಳಿದು ನಿನ್ನ ಬಾಳ
ನೀನೆ ಅವಸಾನದತ್ತ ಕೊಂಡೊಯ್ಯುತ್ತಿರುವೆ !!


ಇರುವುದೆಲ್ಲವೂ ನಿನಗೆ ಸಕಾದರೆ
ನಿನ್ನ ಮಕ್ಕಳಿಗೇನು ಬಿಡುವೆ.,??
ಹುಟ್ಟಿಸಿ ಬಿಟ್ಟರೆ ಸಾಲದು .,
ಅವರಿಗೂ ಒಂದು ಸುಂದರ ನಾಳೆ
ಕಟ್ಟಿ ಕೊಡಬೇಕು .,


ಜಗದ ಅಸ್ಟೂ ಸೃಷ್ಟಿಗಳಲ್ಲಿ ನೀನು ಒಬ್ಬ
ಸರ್ವರಂತೆ ಬಾಳುವ ಗೋಜಿಗೆ ನೀ ಹೋಗದೆ
ಎಲ್ಲರನ್ನ ಮೆಟ್ಟಿ ನಿಂತು ಬೀಗುತ್ತಲೇ ಇರುವೆ.,
ಮಿಕ್ಕ ಜೀವ - ಜಂತುಗಳ ಬಾಳ ನರಕವಾಗಿಸುತ್ತಲೇ ಇರುವೆ .,


ನಿಮ್ಮ ಸ್ವಾರ್ತ ಸಾಧನೆಗಾಗಿ
ಮುಂದಿನವರ ಬಾಳ ಹಾಳುಗೆಡುವುತ್ತಿರುವ.,
ನಿಮ್ಮ ಈ ಬದುಕು ಇದ್ದರೆಷ್ಟು ಬಿಟ್ಟರೆಷ್ಟು ??
ಆದರ್ಶಗಳೇ ಇಲ್ಲದ ನಿಮ್ಮ ಈ
ಬದುಕು "Full Waste" !!



ಅರಿಯದೇ ಮಾಡುವ ತಪ್ಪಿಗೆ ಕ್ಷಮೆಯುಂಟು .,
ತಿಳಿದೂ ತಿಳಿದು ಮಾಡುವ ತಪ್ಪಿಗೆ
ನರಕದ ಬಾಗಿಲು ಸದಾ ತೆರೆದುಂಟು !!!



ಇತರರಿಗೆ ಕಲಿಸಲಾಗದ ನಿನ್ನ ವಿದ್ಯೆ .,
ಪರರಿಗಾಗದ ನಿನ್ನ ಸ್ವತ್ತು .,
ಸರ್ವರಿಗೂ ಮಾದರಿಯಾಗದ ನಿನ್ನ ಬದುಕು .,
ಸದಾ ಸ್ವಾರ್ಥ ಸಾಧನೆಯಲ್ಲೇ
ಮೈಮರೆತ ಆ ನಿನ್ನ ಮನಸ್ಸು!!
ಇವು ಅಂದಂದಿನ ಆಟಕ್ಕೆ ಉಂಟೇ ವಿನಃ .,
ಮುಂದೊಂದು ದಿನದ ಲೆಕ್ಕಕ್ಕಲ್ಲ !!



ಹಣ - ಅಂತಸ್ತು
ಅಧಿಕಾರ - ಪ್ರತಿಸ್ಟೆಗಳ
ಸುಳಿಯಲ್ಲಿ ಸಿಲುಕಿ ನಲುಗುವೆಯಲ್ಲ .,
ಸ್ನೇಹ - ಪ್ರೀತಿ
ನಂಬಿಕೆ - ವಿಶ್ವಾಸ
ನಿನ್ನ ತಲೆ ಕಾಯುತ್ತವೇ ವಿನಃ
ನಿನ್ನ ಘನತೆ - ಗೌರವಗಳಲ್ಲ !!
ನೀನು ಗಳಿಸಿ ಕೂಡಿಟ್ಟ ಹಣ - ಅಂತಸ್ತಲ್ಲ !!!



ಎಲ್ಲರಂತ ಅಸಡ್ಡೆ ಬದುಕು ನಮಗೆ ಬೇಡ
ಇರುವುದನ್ನ ಉಳಿಸೋಣ .,
ಮತ್ತೊಂದಿಷ್ಟು ಬೆಳೆಸೋಣ .,
ಮುಂದಿನ ಪೀಳಿಗೆಗಾಗಿ
ಒಂದು ಸುಂದರ ನಾಳೆ ಕಟ್ಟಿ ಕೊಡೋಣ !!


ಇಂದಿರುವುದು ನಮ್ಮದೇ ಬಾಳು
ಮುಂದೆ ಬರುವುದೂ ನಮ್ಮ ಮಕ್ಕಳದೇ ಬಾಳು
ನಾವು ಅನುಭವಿಸಿದ ಸುಂದರತೆಯ
ಅವರಿಗೂ ಸ್ವಲ್ಪ ಬಿಟ್ಟು ಸಾಗೋಣ
.,

Monday, May 11, 2009

ನನ್ನ ಪ್ರೀತಿ .... ನಿಮ್ಮ ಪ್ರೀತಿ.......... ಅವುಗಳ ಜೊತೆಗಿರುವ ಭಾವನೆಗಳ ಬಗ್ಗೆ !!!

ಭಾವನ ಲೋಕದ ಬಣ್ಣದ ಚಿಟ್ಟೆಗಳೇ
ಗೊತ್ತು ಗುರಿಯಿಲ್ಲದ ಪ್ರೀತಿ ಹಿಂದೇಕೆ ಹಾರುವಿರಿ
ಸುತ್ತು ಸುಳಿದೇಕೆ ಬಸವಳಿಯುವಿರಿ
"ಪ್ರೀತಿ" ಮಾಯೆ ... ಬಾಳ ಹಿಂಡುವ ಹೊಸ Way


"ಪ್ರೀತಿ" ನೀ ಗೋಸುಂಬೆ
ಒಮ್ಮೆ ಅಂದ - ಚೆಂದಕೆ ಹುಟ್ಟುವೆ
ಮತ್ತೊಮ್ಮೆ ಹಣ - ಅಂತಸ್ತಿಗೆ
ಮಗದೊಮ್ಮೆ ಘನತೆ - ಗೌರವಕ್ಕೆ
ಏ ಪ್ರೀತಿ ಒಮ್ಮೆಯಾದರು ಹೇಳು
"ಮನಸ್ಸು" ನಿನಗ್ಯಾವ ಲೆಕ್ಕಕ್ಕೆ... ??



ಜಗದ ಮೇಲೆ ಎಲ್ಲದಕ್ಕೂ ನೆಲೆಯುಂಟು
ಎಲ್ಲದಕ್ಕೂ ಎಲ್ಲೆಯುಂಟು
ಓ ಭಾವನೆಗಳೇ .......
ನಿಮಗೆಲ್ಲಿದೆ ನೆಲೆ ?
ನಿಮಗೆಲ್ಲಿದೆ ಎಲ್ಲೆ ?
ಸದಾ ಪ್ರೀತಿಯ ಜೊತೆ ನಿಮ್ಮ ನಡೆ ಸರಿಯೇ ??



ಬಾಳದಾರಿಯಲ್ಲಿ ಪ್ರೀತಿ ಹೊಸ ಕನಸ ಹುಟ್ಟು ಹಾಕುತಿವುದು
ಇರುವ ಕನಸ ನುಚ್ಚು ನೂರಾಗಿಸುತಿವುದು
ಭಾವನೆಗಳ ಕೊಲ್ಲುತಿವುದು
ಭಾವನ ಜೀವಿಗಳ ಕಲ್ಲಾಗಿಸುತಿವುದು



ಮನಸ್ಸು ಭಾವನೆಗಳ ಜೊತೆ
ಸದಾ ಹರಿಯುತ್ತಿದ್ದ ಪ್ರೀತಿ
ಇಂದು ಎಲ್ಲಿಗೆ ಬಂದಿವುದೋ .. ?
ಆಸ್ತಿ - ಅಂತಸ್ತುಗಳ ಜೊತೆ
ರೆಕ್ಕೆ ಕಟ್ಟಿಕೊಂಡು ಹಾರುತಿವುದೋ.... ?

"ಪ್ರೀತಿ" ಬಣ್ಣದ ಚಿಟ್ಟೆಯಾಗಿ
ಭಾವನೆಗಳ ಮಧುವ ಹೀರಿ
ಮನಸಿನಿಂದ ಮನಸ್ಸಿಗೆ ಹಾರುತಿವುದು
ಮುಗ್ದ ಹೂವಿಗರಿವಿಲ್ಲದೆ ಚಿಟ್ಟೆ ಹೇಗೆ
ಅದರ ಶೀಲ ಕೆಡಿಸುವುದೋ ಹಾಗೆ
ಮನಸ್ಸಿಗರಿವಿಲ್ಲದೆ ಪ್ರೀತಿ ಅದರ ಅಸ್ಟು
ನೆಮ್ಮದಿಯ ಹಾಳುಗೆಡವುತ್ತಿರುವುದು !!!!

ಪ್ರೀತಿ ಕಾಡ್ಗಿಚ್ಚಿನಂತೆ ...
ಭಾವನೆಗಳ ಜೊತೆಗೂಡಿ
ಕ್ಷಣಾರ್ದದಲ್ಲಿ ಮನಸೆಲ್ಲ ಹಬ್ಬುವುದು....
ಏನಾಯಿತು ಎಂದರಿಯುವಲ್ಲೇ
ಮನಸಿನ ಅಸ್ಟು ನೆಮ್ಮದಿಯ
ಸುಟ್ಟು ಕರಕಲಾಗಿಸುವುದು...

"ಪ್ರೀತಿ" ಹುಟ್ಟುವಾಗ ದೋ ಎಂದು ಸುರಿವ ಮಳೆ
ಅದೇ ಮನಸ ಬಿಟ್ಟು ಹೋಗುವಾಗ ಜಡಿ ಮಳೆ
"ಭಾವನೆಗಳು" ಮಾತ್ರ
ಪ್ರತಿ ಮಳೆಯಲ್ಲೂ ತೋಯುವ ಇಳೆಯ ಹಾಗೆ ...

ಇಂತಿ

ಚಾರ್ಲಿ ...............


ಎಲ್ಲರೂ ಪ್ರೀತಿಯನ್ನ
ಸುಂದರ ಕಲಾಕೃತಿಗಳನ್ನಾಗಿಸಿ
ಜಗದಲ್ಲಿ ಸಾರುತಿಹರು
ನ ಮಾತ್ರ ಪ್ರೀತಿಯನ್ನ
ನನ್ನೆದೆಗೂಡಲ್ಲಿ ಗೋರಿಯಾಗಿಸಿರುವೆ

Thursday, April 30, 2009

ಅ ಎರಡು ಬೆಸುಗೆಗಳು ., ಜೊತೆಗೆ ಒಂದಿಸ್ಟು ಅವಲೋಕನ !!!!

April 19 ಹಾಗು 20 ನನ್ನ ಜೀವನದ ಅತಿ ಮಧುರ ದಿನಗಳು ...

ನನ್ನ Engineering Daysನ Best Friend Pavani ಹಾಗು ಲೇಟಾಗಿ ಸಿಕ್ರು Latest ಆಗಿ ಸಿಕ್ಕ Patil ಮದ್ವೆ.

ವಿಧಿ ಬರಹ ಇಬ್ಬರ ಮದ್ವೆ ಒಂದೇ ಡೇಟ್ ಅಲ್ಲಿ Clash ಆಗಿತ್ತು ., ಇದು ನಮಗೆ ತುಂಬಾ ಬೇಸರ ತರಿಸಿತ್ತು .,
Patil ಮದ್ವೆಗೆ Trip ತರ plan ಮಾಡಿ Big Team ಹೋಗಬೇಕು ಎನ್ನೋ ಕೆಲ ಗೆಳೆಯರ Plan ಫೈಲ್ ಆಯ್ತು.
ಏನೂ ಮಾಡುವ ಆಗಿಲ್ಲ ನಮ್ಮ ಜೀವನದಲ್ಲಿ ನಾವು ಕಂಡ ಬಲು ಅಪರೂಪದ ವ್ಯಕ್ತಿಗಳು ಅಂದ್ರೆ ಪಾವನಿ ಹಾಗು ಪಾಟೀಲ್ .,
ಇಬ್ಬರು ನೋಡೋಕೆ ಒಂದೇ ಸೈಜ್ ಆದ್ರು :) ಪಾವನಿ ಬೆಳ್ಗೆ ಪಾಟೀಲ್ ನನ್ನಾಗೆ ಕರ್ರಗೆ :) :) ಆದರೆ ಇಬ್ಬರೂ ವಿಶಾಲ ಹೃದಯದವರು,ತುಂಬಾ ಆತ್ಮೀಯರು ಸಹ ಹೌದು ...ಹೀಗಾಗಿ ಇಬ್ಬರ ಮದುವೆಗೆ ಹೋಗಲೇಬೇಕಾದ ಪರಿಸ್ಥಿತಿ..

ಪಾವನಿ ಮದ್ವೆ ಬೆಂಗಳೂರಿನ ವಿಜಯನಗರದಲ್ಲಿ ., ಪಾಟೀಲ್ದು ದೂರದ ರಾಯಚೂರು ಜಿಲ್ಲೆಯ ಗೂಗಲ್ ನಲ್ಲಿ .
ಅಂತು ಇಂತೂ ಗೆಳೆಯರ ಜೊತೆ ಕೂತು ಮಾತನಾಡಿ ಎರಡು ಮದುವೆಗೆ ಹೋಗೋ ಬ್ಲೂ ಪ್ರಿಂಟ್ ರೆಡಿ ಮಾಡಿದ್ವಿ ... ದೂರದ ರಾಯಚೂರಿಗೆ ಹೊರಟದ್ದು ರಾಜೇಶ್ , ರಾಕೇಶ್ , ಸತೀಶ್ ಹಾಗು ನಾನು ಮಾತ್ರ .,ಮಿಕ್ಕಂತೆ ಎಲ್ಲರು ಕೈ ಕೊಟ್ರು .. ಚಿತ್ರ ವಿಚಿತ್ರವಾಗಿ ಕಾರಣ ಕೊಟ್ಟು ಬರೋಲ್ಲ ಅಂದ್ರು !!!!.,

ನಾಲ್ಕು ಜನ ಮಾತನಾಡಿ April 19 ರಾತ್ರಿ ಪಾವನಿ ಮದ್ವೆ Reception ಗೆ ಹೋಗೋದು April 20 ಸೋಮವಾರ ಆಫೀಸ್ ಗೆ ರಜ ಹಾಕಿ ಪಾಟೀಲ್ ಮದ್ವೆಗೆ ಹೋಗೋ ಪ್ಲಾನ್ ಮಾಡಿದ್ವಿ. ಎಂದಿನಂತೆ ನಮ್ಮ ರಾಜೇಶ್ ಟಿಕೆಟ್ ಬುಕ್ ಮಾಡಿಸಿದ (ಇ ಬಾರಿ ಟ್ರೈನ್ ಪ್ರಯಾಣ : ಹಂಪಿ Express) .. [ರಿಟರ್ನ್ ಟಿಕೆಟ್ ಸಹ ಮಾಡಿಸಿಬಿಟ್ಟ 20 ದಿನ ಮುಂಚೆನೇ :) ] ...

April 19th :
ರಾತ್ರಿ 7.30ರ ಸುಮಾರಿಗೆ ಎಲ್ಲರೂ ಪಾವನಿ ಮದ್ವೆ Receptionಗೆ ಹೋದ್ವಿ .,As Expected FUN@TICS Full Gang ಅಲ್ಲಿ ಇತ್ತು ., ಆದ್ರೆ ನ Expect ಮಾಡಿದ Ambedkar College Friends ಹಾಗು SBMSIT Friends ಬಂದಿರಲಿಲ್ಲ .,ಇದಕ್ಕೆ ಪಾವನಿ Negligency ನೇ ದೊಡ್ಡ ಕಾರಣ .,ಎಲ್ಲರಿಗೂ ಮೇಲ್ ಹಾಕಿ ಕರೆದರೆ ಸಾಕು ಎಲ್ಲ ಬರ್ತಾರೆ ಎಂಬ Feel Workout ಆಗಿರಲಿಲ್ಲ .,
ಅಲ್ಲಿ ಇದ್ದದ್ದು Team FUN@TICS ಬಿಟ್ರೆ 2-3 other Friends ಅಸ್ಟೆ ..

ಮನುಷ್ಯ ಎಸ್ಟೇ ಬೆಳೆದ್ರೂ ಸ್ನೇಹದ ಮುಂದೆ ಚಿಕ್ಕವನೇ ........
ನಾವು ಹೇಗೆ ನಮ್ಮ ಮೂsಗಿನ ನೇರಕ್ಕೆ ನೋಡಿ ನೆಡೆಯುತ್ತೇವೋ .. ಬೇರೆಯವರೂ ಹಾಗೆ ...
ಪ್ರೀತಿ ವಿಶ್ವಾಸ ನಾವು ತೋರಿಸಿದಸ್ಟು ನಮಗದು ವಾಪಾಸ್ ದೊರೆಯುತ್ತೆ ..ಇಲ್ಲವಾದರೆ ಏನೂ ಇಲ್ಲ ... !!! ನಮ್ಮ ಬಾಳು ಖಾಲಿ ಖಾಲಿ ...!!

ಬಿಟ್ಟಾಕಿ Blade ಶುರುಮಾಡಿದರೆ Never Ending Story ಆಗಿಬಿಡುತ್ತೆ ..
ಎಲ್ಲ ಅವರರವರ ಬಾವಕ್ಕೆ ಬಿಟ್ಟುಬಿಡೋಣ ... ಕರೆದರೆ ಊಟಕ್ಕೆ ಹೋಗಿ ಬರೋಣ ... :)

ಎಲ್ಲರೊಂದಿಗೆ ಪಾವನಿ ಮದ್ವೆ Reception Enjoy ಮಾಡಿದ್ವಿ ..ಪಾವನಿ ಹಾಗು ವೆಂಕಟೇಶ್ ಬಾಬುರವರಿಗೆ Wish ಮಾಡಿ ... ಎಲ್ಲ ಗೆಳೆಯರನ್ನ ಮೊದಲು ಚೌಲ್ಟ್ರಿ ಇಂದ ಕಳಿಸಿ ಕೊನೆಗೆ ರಾಖಿ , ರಾಜೇಶ್ , ಸತಿ ಹಾಗು ನಾನು Yeshwanthpura Railway Stationಗೆ ಹೊರೆಟ್ವಿ .,




Sorry I missed a Great Part of April 19th Evening :- Here I Go...

Team FUN@TICSನ ಎಲ್ಲಾರು Plan ಮಾಡಿ (Areawise)ಮದ್ವೆಗೆ ಬರುವಲ್ಲಿದ್ದರು :) ..
Mathikere/BEL Surrounding Team Santosh C ನ ಕಾರಲ್ಲಿ .

ನಾನು ,ರವಿ,ರಾಖಿ ,ರಾಜೇಶ್ ಹಾಗು ಸತಿ ವಿಜಯನಗರ ದಿಂದ ಆಟೋನಲ್ಲಿ ಅನ್ನೋ ಪ್ಲಾನ್ ...

ಪಾವನಿಗೆ ಗಿಫ್ಟ್ ತಂದು ಆಗಿತ್ತು ಆದರೆ ಪಾಟೀಲ್ ಗೆ ಇಲ್ಲ ... ಇದು ಗೊತ್ತಾಗಿದ್ದು Dec 19th ಸಂಜೆ ,,

ಸರಿ ರಾಜೇಶ್ ನಾನೇ ಮಲ್ಲೇಶ್ವರಂಗೆ ಹೋಗಿ ತರ್ತೀನಿ ಅಂದ ., ರಾಖಿ Apache ಬಿಟ್ರೆ ಬೇರೆ ಏನನ್ನ ಕೇಳಲಿಲ್ಲ, ಯಾರನ್ನು ಕರೆಯಲಿಲ್ಲ ., ನಮಗೂ ಖುಷಿ ಆಯಿತು., ಸದ್ಯ ಬಚಾವ್ ಅಂದುಕೊಂಡು ಮದ್ವೆಗೆ ಹೋದ್ವಿ .,. (ರಾಜೇಶ್ ಗಾಡಿಲ್ಲಿ ಸೀದ ಚೌಲ್ಟ್ರಿ ಗೆ ಬರ್ತೀನಿ ಅಂದ ) .,

ನಾವೆಲ್ಲ ಚೌಲ್ಟ್ರಿಗೆ ಬಂದ್ವಿ ಇನ್ನ ನಮ್ಮ ರಾಜೇಶ್ ಬಂದಿಲ್ಲ ., ಆಮೇಲೆ ಶ್ವೇತ ಹೇಳಿದ ಮೇಲೆ ಸತ್ಯ ದರ್ಶನವಾಯ್ತು .. ಸ್ವಲ್ಪ ಶಾಕ್ .. ತುಂಬಾ ಜೋರ್ ನಗು .,ಒಂತರಾ ಅನುಭವ ಆಗ ... :)

ಹೋಗ್ಲಿ ಬಿಡು ಹುಡುಗ ಆರಾಮಾಗಿ ಇರ್ಲಿ ಅಂತ ಬಿಟ್ವಿ ಅವನು ಬಂದಾಗ ,, ಏಕೆಂದರೆ ಸತ್ಯ ಆಮೇಲೆ ನಮಗೆ ಏಳ್ತಾನೆ ಅಂತ ಗೊತ್ತಿತ್ತು .. SO :) ಬಿಟ್ ಬಿಟ್ವಿ :) ಆಗ ... :)

ಇಂತಿಷ್ಟು ಕತೆಗಳನ್ನ ಮುಗಿಸಿ ., ರೈಲ್ವೆ ಸ್ಟೇಷನ್ ಗೆ ಬಂದ್ವಿ ., Platform Entry ಆಗುತ್ತಿದ್ದಾಗೆ ಜೋರ್ ಮಳೆ ..ಜೊತೆಗೆ ನಮ್ಮ ರಾಜೇಶನ ಸತ್ಯ ಹೊರಬಿಳೋಕೆ ಶುರುವಾಯ್ತು ..
ರಾಜೇಶ್ Dec 18th Evening ನಡೆದ ಹಾಗು Dec 19th Morning ನಡೆದ ಎಲ್ಲ ವಿಚಾರಗಳನ್ನ Reveal ಮಾಡ್ತಾ ಇದ್ದ ., ಹುಡುಗ Dull ಆಗಿರಲಿಲ್ಲ ., ನಾವು ತುಂಬಾನೇ ರೆಗಸ್ತ ಇದ್ವಿ .. ಕೊನೆ ಕೊನೆಗೆ ತುಂಬಾನೇ ಬೇಜಾರ ಆಗ್ತಾ ಇತ್ತು ಅವನ ಮಾತುಗಳಿಂದ ., ನನ್ನ ಕತ್ತು ಮಾತ್ರ ಉ: ಅಂತಿತ್ತು ಮನಸ್ಸು ಮಾತ್ರ ಕೊರಗುತ್ತಿತ್ತು ..ಇದ್ನೆಲ್ಲಾ ಕೇಳದೆ ಇರ್ಲಿ ಅಂತಾನೆ ಮಳೆ ಜೋರ್ ಬರ್ತಿತ್ತಾ ?? ಎನ್ನೋ ಗೊತ್ತಿಲ್ಲ ., ಮಳೆ ಶಬ್ದದಲ್ಲಿ ಕೆಲ ಬೇಡದ ವಿಷಯಗಳು ತೇಲಿಹೋದವು .. ನನ್ನ ತಲೆ ಮನಸಿಗೆ ತಲುಪಲೇ ಇಲ್ಲ ...ಇದು ಅವನ ಅರಿವಿಗೂ ಬಂದಿತ್ತು ಚಾರ್ಲಿ ಒಳಗೊಳಗೇ ಬೈತಾ ಇದಾನೆ ಅಂತಿದ್ದ ... ಪದೇ ಪದೇ ... ಖಂಡಿತ ಇಲ್ಲ ರಾಜೇಶ್ .. ನಾನ್ ಸರಿ ಇದ್ದರೆ ಅಲ್ವ ನಾನ್ ನಿನಗೆ ಬೈಯೋಕೆ :) :)

" ಆದ್ರೂ ಎರಡು ಮಾತು ... ಭಾವನೆಗಳಿಗೆ ಬೆಲೆಕೊಟ್ಟರೆ ಸಾಲದು ... ಭಾವನೆಗಳಿಗೆ Practical Touch ಕೊಡ್ಬೇಕು ., :) Much Happy this time ., you are Quite strong this time .... you are with same josh " Thanks for that :) :) Keep it up :)

Hmmmmmm ಹೀಗೆ ಅದು ಇದು ಕಿತ್ತೊಗಿದ್ದು ., ಕಿತ್ತೊಗ್ಬೇಕಿರೋ Topic ನ ಎತ್ಕೊಂಡು ತುಂಬಾನೇ Enjoy ಮಾಡಿದ್ವಿ ನಾಲ್ಕು ಜನ ,,, 11 Pm ಗೆ ಬಂದ ಹಂಪಿ Express ಹತ್ತಿ ರಾಯಚೂರ್ ಪ್ರಯಾಣ ಶುರು ಮಾಡಿದ್ವಿ ...

April 20th

ಬೆಳಗ್ಗೆ 8ಕ್ಕೆ ಎದ್ವಿ ಟ್ರೈನ್ ನಲ್ಲಿ .., ಆನ್ ದಿ ವೇ ಸಿಕ್ಕ ಮಂತ್ರಾಲಯದಲ್ಲಿ ರಾಯರಿಗೆ ನಮಿಸಿ ಹಾಗೆ ಮುಂದೆ ಪ್ರಯಾಣ ಬೆಳೆಸಿದ್ವಿ .,
ಎಲ್ಲರ ಮುsಡ್ ತುಂಬಾನೇ ಚೆನ್ನಾಗಿತ್ತು ತುಂಬಾನೇ ಎಂಜಾಯ್ ಮಾಡ್ತಾ ಇದ್ವಿ ., ಆದ್ರೆ ಅಲ್ಲಿಗೆ ಬಂದ ಅವನು ಅಲ್ಲದ , ಅವಳು ಅಲ್ಲದ "ಅದು" ತುಂಬಾನೇ ತಲೆ ತಿಂತು ಎಲ್ಲರ್ಗೂ 10-10ರೂ Blade ಹಾಕಿ ಎಲ್ಲರ್ಗೂ ಉರ್ಸಿ ಓಯ್ತು ., ನಮ್ಮ ಮುsಡ್ ಹಾಳಾಗಿ ಹೋಯ್ತು ..ಎಲ್ಲರು "ಅದಕ್ಕೆ" ಬೈಯುತ್ತಲೇ ರಾಯಚೂರ್ ತಲುಪಿದ್ವಿ .,9.30ಕ್ಕೆ .

20th April 2009 "ರಾಯಚೂರ್ ಬಂದ್ " ನಮ್ಮ ಟೈಮ್ ಸರಿ ಇಲ್ಲ ಅಂತ ಟ್ರೈನಲ್ಲಿ "ಅದು" ಸಿಕ್ಕಾಗಲೇ ಅರಿವಿಗೆ ಬಂದಿತ್ತು .. ರಾಯಚೂರ್ ಸಿಟಿಗೆ ಎಂಟ್ರಿ ಕೊಟ್ಟ ಮೇಲೆ ಅದರ ಪೂರ್ತಿ ಚಿತ್ರಣ ಸಿಕ್ತು .,
ಪುಣ್ಯಕ್ಕೆ ಪಾಟೀಲ್ ಲಾಡ್ಜ್ ಬುಕ್ ಮಾಡಿದ್ದ .,
ಗಂಟೆ 10ಕ್ಕೆ ರಾಯಚೂರಿನ ಬಿಸಿಲು 34^ C ಇತ್ತು ., ಸ್ವಲ್ಪ ಕಷ್ಟ ಪಟ್ಟೆ ಲಾಡ್ಜ್ ಹುಡುಕಿ ., ಹಿಂದಿನ ಬಾಗಿಲಿನಿಂದ ಎಂಟ್ರಿ ಕೊಟ್ವಿ(ಬಂದ್ ನಿಂದಾಗಿ ಎಲ್ಲ ಅಂಗಡಿ -ಮುಗ್ಗಟ್ಟುಗಳು ಮುಚ್ಚಿದ್ದವು.... ) ., AC ರೂಂ ಆಗಿದ್ದರಿಂದ ಎಲ್ಲರು ಕೂಲ್ ಅದ್ವಿ ., ಎಲ್ಲ ಬೇಗ ಫ್ರೆಶ್ ಆಗಿ ತಿಂಡಿ ಹುಡುಕಿದ್ವಿ., ಬಂದ್ ಇಂದಾಗಿ ಏನು ಸಿಗ್ಲಿಲ್ಲ .. ಅಲ್ಲೇ ಕಬ್ಬಿನ ಹಾಲು ಕುಡಿದು ಪಾಟೀಲ್ ಮದುವೆ ಜಾಗಕ್ಕೆ ಹೊರೆಟ್ವಿ .,

ಪಾಟೀಲ್ ಮದ್ವೆ ಇದದ್ದು ರಾಯಚೂರಿನಿಂದ 60 ಕಿ ಮೀ ದೂರದ ಗೂಗಲ್ ನಲ್ಲಿ .... ಅಲ್ಲಿಗೆ ತಲುಪೋಕೆ ಪಾಟೀಲ್ ಕಾರ್ ಸಹ ಬುಕ್ ಮಾಡಿದ್ದ ., ಅವನು ಮಾಡಿದ ಎಲ್ಲ ವ್ಯವಸ್ಥೆಗಳ ಬಗ್ಗೆ ರಾಜೇಶ್ ತುಂಬಾ ಹೊಗಳ್ತಾ ಇದ್ದ ., ನಮಗೂ ಖುಷಿ ಇತ್ತು .,
ರಾಯಚೂರ್ ಬಂದ್ ಇದ್ದ ಕಾರಣ ಕಾರ್ ನ ಡ್ರೈವರ್ ಸಿಟಿ ಒಳಗೆ ಬರೋಕೆ ತುಂಬಾ ಬಯ ಪಟ್ಟ ., ನಮ್ಮ ರಾಜೇಶ್ ಅವನನ್ನ Convince ಮಾಡಿ ., ಸಿಟಿ ಹೊರಗೆ ಬರೊ ತರ ಮಾಡಿದ ... ನಾವೆಲ್ಲ ಆಟೋ ಇಡಿದು ಸಿಟಿಯಿಂದ ಆಚೆ ಬಂದ್ವಿ ., ಅಲ್ಲಿಂದ ಮತ್ತೆ ಓಪನ್ ಆಟೋ ನಲ್ಲಿ 10 KM ಮುಂದೆ ಮದ್ವೆ ., ಅಲ್ಲಿಗೆ ಬಂದ ಕಾರ್ ಇಡಿದು ಗೂಗಲ್ ಕಡೆ ಹೊರೆಟ್ವಿ.,

ಅಲ್ಲಿನ ರೋಡ್ ತುಂಬಾನೇ ಚೆನ್ನಾಗಿತ್ತು .. ಅಲ್ಲಲ್ಲಿ ಸ್ವಲ್ಪ ಮಾತ್ರ ಕಿತ್ತೋಗಿತ್ತು ..... ಏಗೋ ನಮ್ಮ ಕಾರ್ ಡ್ರೈವರ್ " ಸ್ವಾಮಿ" ಮಧ್ಯಾಹ್ನ 1 ಗಂಟೆಗೆ ಗೂಗಲ್ ನಲ್ಲಿ ಬಿಟ್ರು .,

ಎಲ್ಲರ್ಗೂ ಹೊಟ್ಟೆ ತುಂಬಾನೇ ಹಸಿದಿತ್ತು !! ... ಪಾಟಿಲ್ಗೆ ವಿಶ್ ಮಾಡಿ ಅವರ ಹೆಂಡತಿಗೆ ಗಿಫ್ಟ್ ಕೊಟ್ಟು :)
ಸೀದ ಊಟಕ್ಕೆ ಹೋದ್ವಿ .,

ಭಾರಿ ಭೋಜನ ನಮಗಾಗಿ ಸಿದ್ಧವಿತ್ತು :) :) ಉತ್ತರ ಕರ್ನಾಟಕದ ಅಸ್ಟೂ Varities ಅಲ್ಲಿ ಇತ್ತು .,
"ಹೊಟ್ಟೆ ಹಸಿದಿತ್ತು ., ಆದ್ರೆ ಊಟ ಬಾಳ ಕಾರಿತ್ತು" ಇದು ರಾಜೇಶ್ ಹಾಗೂ ಸತಿ ಉವಾಚ .. ಆದ್ರೆ ನಮ್ಮ ರಾಖಿ ಊಟನ ತುಂಬಾನೇ Enjoy ಮಾಡ್ದ .,
Except Rakhi ನಮಗ್ಯಾರಿಗೂ ಊಟ ಸರಿ ಹೋಗಲಿಲ್ಲ ... ನೀರು ಕುಡಿದು ತೃಪ್ತಿ ಪಡೋಣ ಅಂದ್ರೆ ., ಅಲ್ಲಿನ ನೀರನ್ನ ಕುಡಿಯುವ ಮನಸ್ಸಿರಲಿಲ್ಲ ...
"ಪಕ್ಕದಲ್ಲೇ ಇದ್ದ ತುಂಗೆಯ ನೀರೆ ಎಲ್ಲದಕ್ಕೂ !!!" ವಿಧಿಯಿಲ್ಲದೆ ಊಟದ ಮಧ್ಯೆ ಅದೇ ನೀರು ಕುಡಿದು ... ಆಚೆ ಬಂದು "Mineral Water" ಕುಡುದ್ವಿ .

"ಸಾರಾಯಿ ಪ್ಯಾಕೆಟ್ ತರ ನೀರನ್ನ 1ರೂ ಗೆ ಮಾರೋ ಜನ .. ವಿಧಿಯಿಲ್ಲದೆ ಅದನ್ನೇ ಕೊಂಡುಕೊಂಡು ಕುಡಿಯೋ ಜನ " Hmmm ತುಂಬಾನೇ ಬೇಜಾರಾಯ್ತು ಅಲ್ಲಿನ ವ್ಯವಸ್ಥೆ ನೋಡಿ .,

ಸಂಜೆ 3.30 ರವರೆಗೆ ಅಲ್ಲಿದ್ದು ..Around 5.30 ಕ್ಕೆ ರಾಯಚೂರಿಗೆ ವಾಪಸ್ ಬಂದ್ವಿ ..Bangaloreಗೆ Return train 7 ಗಂಟೆಗೆ ಇತ್ತು ., ಸ್ವಲ್ಪ City Beat ಹೊಡೆದು 7 ಗಂಟೆಗೆ ಬಂದ ರೈಲ ಏರಿ 21ನೇ ತಾರೀಖು ಬೆಳಗ್ಗೆ ಕ್ಕೆ ಬೆಂಗಳೂರಿಗೆ ವಾಪಾಸ್ ಬಂದ್ವಿ ..,
____________________@@@@@@@@@@@@___________________

ಎಲ್ಲವೂ ಅಂದುಕೊಂಡಂತೆ ನಡೆದಿತ್ತು ., ಆದರೆಲ್ಲೋ ಒಂದು ಕಡೆ ನನ್ನ ಮನಸ್ಸು ತುಂಬಾ ನೊಂದಿತ್ತು ....

ರಾಯಚೂರು ಎಂದಾಕ್ಷಣ ತಲೆಗೆ ಹೊಳೆಯೋದು ಉರಿ ಬಿಸಿಲು ... ನಾವು ಬೇಸಿಗೆಯಲ್ಲೇ ಹೋಗಿದ್ರಿಂದ ಅದರ ಅನುಭವ ಚೆನ್ನಾಗೇ ಇತ್ತು !!
ಅಮ್ಮಮ್ಮಾ ಅಂದ್ರೆ ಬಿಸಿಲು ಬೆವರಿಳಸಬಹುದು ... ಚರ್ಮವನ್ನ ಸ್ವಲ್ಪ ಕಪ್ಪಾಗಿಸಬಹುದು ಎಂದುಕೊಂಡಿದ್ದೆ ., ಆದರೆ ನನ್ನ ಮನಸ್ಸಿಗೂ ಅದರ ಬಿಸಿ ತಲುಪುತ್ತೆ ಅಂತ ಭಾವಿಸಿರಲಿಲ್ಲ .,


ರಾಯಚೂರಿನ ಸುತ್ತಮುತ್ತ ಇರೋ ಊರುಗಳಿಗೆ ಬಸ್ಸಿನ ವ್ಯವಸ್ಥೆ ತಕ್ಕ ಮಟ್ಟಿಗಿದೆ(KSRTC ಬಸ್ಸುಗಳೇ ಸ್ವಲ್ಪ ಜಾಸ್ತಿ ) ., ರೋಡುಗಳು ಪರವಾಗಿಲ್ಲ ., ಆದರೆ ಬಸ್ಸುಗಳಿಗಿಂತ ಅಲ್ಲಿ Jeep,Luggage ಆಟೋಗಳದ್ದೇ ಕಾರುಬಾರು .,

ಅಲ್ಲಿನ ಸುಡುಬಿಸಿಲು ., ಅಲ್ಲಿನ ನೆಲವನ್ನ ನೋಡಿದ್ರೆ ಸಾಕು "ಮಳೆ ಬಂದ್ರೆ ಮಾತ್ರ ಬದುಕು ,ಮಿಕ್ಕಂತೆ ಬರೀ ಬಿಸಿಲ ಧಗೆ " ಅನ್ನೋದು ಎಂತವರಿಗೂ ಅರಿವಿಗೆ ಬರುತ್ತೆ .,

ಈಗಿನ ಮಳೆಗಾಲವೋ ಮಳೆ ಬಂದ್ರೆ ಬಂತು ಇಲ್ಲವಾದಲ್ಲಿ ಹೋಯ್ತು ... ಇ area ಅಲ್ಲಿ ಬಂದ್ರೆ ಪಕ್ಕದ areaದಲ್ಲಿ ಇರೋದೇ ಇಲ್ಲ !!! ಅಲ್ಲಿಯ ಪರಿಸ್ಥಿತಿಯು ಭಿನ್ನವೇನಲ್ಲ !!

ಅಲ್ಲಿಯ ಮಂದಿ ಮಳೆಗಾಲದಲ್ಲಿ ಅಲ್ಲಿದ್ದು , ಮಿಕ್ಕಂತೆ City ಕಡೆ ಗೂಳೆ ಹೋಗೋದೇ ಹೆಚ್ಚು ... ಹೀಗಿರುವಾಗ ಸರ್ಕಾರೀ ಬಸ್ಸುಗಳಿಗೆ ದುಬಾರಿ ಹಣ ಕೊಟ್ಟು ಓಡಾಡೋಕೆ ಆಗುತ್ತಾ .... ????


ಆಗಾಗೆ ಅಲ್ಲಿ Jeep ,Luggauge ಆಟೋಗಳದ್ದೇ ಆಟಾಟೋಪ !!!


ಅಲ್ಲಿನ ಜನರನ್ನ Crazy ಅನ್ನಲೋ ಅಥವಾ ಅವರ ಬಾಳಲ್ಲಿ ಬೇರೆ ಮಾರ್ಗವೇ ಇಲ್ಲ ಎನ್ನಲೋ ತಿಳಿಯುತ್ತಿಲ್ಲ !!Jeep ಅಥವಾ Luggagr ಆಟೋ ಪೂರ್ತಿ ಆಗಿದ್ದರೂ ...ಆಟೋ ಮೇಲೆ ಹಾಗು Jeepನ ಬಿಸಿ Banet ಮೇಲೆ ಕೂತು ಪ್ರಯಾಣ ಮಾಡ್ತಾರೆ ., ಗಂಡಸರು ಹೆಂಗಸರು ಎನ್ನದೆ ಎಲ್ಲರೂ ಅ ಉರಿ ಬಿಸಿಲಿನಲ್ಲೂ Banet ಮೇಲೆ ಕೂತು ಪ್ರಯಾಣ ಮಾಡ್ತಾರೆ ., ಮೊದಲೇ ಕೆಟ್ಟ ಬಿಸಿಲು ., ಅದರಲ್ಲಿ ಅ ಬಿಸಿ Banet ಮೇಲೆ ಕೂತು ಪ್ರಯಾಣ !!! ., ತುಂಬಾನೇ ಬೇಜಾರಾಗ್ತಾ ಇತ್ತು ಅಲ್ಲಿನ ದೃಶ್ಯವಳಿಗಳಿಂದಾಗಿ ....

ಇನ್ನ ಅಲ್ಲಿನ ಶಾಲೆಗಳ ಬಗ್ಗೆ ಹೇಳ್ಬೇಕು ಅಂದ್ರೆ .,
ಕಮ್ಮಿ ಅಂದ್ರೆ ಊರಿಂದ 2 ಕಿ ಮೀ ದೂರ ಇದ್ದ ಶಾಲೆಗಳೇ ಹೆಚ್ಚು ., ಪ್ರೈಮರಿ ಹಾಗು ಮಿಡ್ಲ್ ಸ್ಕೂಲ್ ಮಕ್ಕಳಿಗೆ ತುಂಬಾನೇ ಕಷ್ಟಕರ ವಾತವರಣ ., ಪ್ರೌಢ ಶಾಲೆಯವರಿಗೆ ಸೈಕಲ್(ಸರಕಾರ ಕೊಡುತ್ತಿರುವ) ಇರೋದ್ರಿಂದ ಪರವಾಗಿಲ್ಲ .,
ಎಲ್ಲ ಸರಿ ಇದ್ದೆ ನಾವು ಶಾಲೆಗೆ ಹೋಗಿದ್ದು ನಮಗೆ ತಿಳಿದೇ ಇದೆ ., ಇನ್ನ ಅಲ್ಲಿನ ಪರಿಸ್ತಿತಿ ನೋಡಿದ್ರೆ ಹೇಳಬಹುದು ಶಾಲೆಯ Strength ಎಸ್ಟ್ ಇರುತ್ತೆ ಅಂತ .,

ಅಲ್ಲಿನ ತಾಯಂದಿರು ನಾ ನೋಡಿದಂತೆ .,
ತಲೆ ಮೇಲೆ ಹತ್ತಿ ಗಂಟು ., ಇಲ್ಲ ಬ್ಯಾಡಗಿ ಮೆಣಸಿನಕಾಯಿ ಗಂಟು ., ಅವರ ಬಲಗೈ, ಗಂಟ ಮೇಲೆ ., ಎಡಗೈಯಲ್ಲಿ ತಮ್ಮ ಮಗು ಬೆರಳು ., ಅ ಮಗು ಕೈಯಲ್ಲಿ ಒಂದು ನೀರಿನ ದೊಡ್ಡ ಕ್ಯಾನ್ (ಸಂಜೆ ಆಗಿದ್ರಿಂದ ಖಾಲಿ ಕ್ಯಾನ್ )., ಹಾಗು ಬಿಳಿ ಗಂಟು .,
ಗುಂಪು ಗುಂಪಾಗಿ ಮನೆ ಕಡೆ ಹೊರಟಿದ್ರು ಸಿಕ್ಕ ಎಲ್ಲರೂ ....

ಇನ್ನ ಅಲ್ಲಿನ ನೀರಿನ ಪರಿಸ್ತಿತಿ ., ಇದ್ರೆ ಊರಿಗೆ ಒಂದು ಕೈ ಪಂಪು ಇಲ್ಲವಾದಲ್ಲಿ ನೀರಿಗಾಗಿ ಕಿಲೋಮೀಟರು ಹೋಗಬೇಕಾದ ಪರಿಸ್ತಿತಿ .,
ಒಟ್ಟಾರೆಯಾಗಿ ಅಲ್ಲಿಯ ಜನರ ಬದುಕು ತೀರ ಕಷ್ಟಕರ . , ಈ ರಾಯಚೂರ ಪ್ರಯಾಣ ನನಗೊಂದು ಪಾಠ ಕಳಿಸಿತ್ತು ., ಮನಸಿನಲ್ಲಿ ಒಂದು ದೊಡ್ಡ ಗಾಯ ಮಾಡಿತ್ತು .,

"ಸದಾ ನಮಗಿಂತ ಮೇಲಿನವರನ್ನ (ಶ್ರೀಮಂತರನ್ನ) ನೋಡಿ ಅಯ್ಯೋ ನಮಗೆ ಅದಿಲ್ಲ ., ನಾವು ಅಲ್ಲಿರಬೇಕು .,ಎಂದು ಸದಾ ಕೊರಗುವ ನಾವು ಅಲ್ಲಿನ ಬದುಕ್ಕನ್ನ ನೋಡಿದರೆ ಖಂಡಿತವಾಗಿ ದೇವರಲ್ಲಿ ನಮಗೇನು ಬೇಡೋಲ್ಲ, ನಿ ಕೊಟ್ಟಿರಿವುದು ಸಾಕು, ಅಲ್ಲಿನ ಜನರಿಗೂ ಸ್ವಲ್ಪ ನೆಮ್ಮದಿ ಬದುಕ ಕೊಡು ಅಂತ ಖಂಡಿತ ಬೇಡುತ್ತೇವೆ "

"ನನ್ನ ಜೀವನದಲ್ಲಿ ಅದಿಲ್ಲ ಇದಿಲ್ಲ ., ನನಗೆ ಇನ್ನೂ ಬೇಕು .,ನನ್ನ ಜೀವನದ ಹಾದಿ ಸರಿಯಿಲ್ಲ ಎನ್ನುವ ಮನಸುಗಳು " ಒಮ್ಮೆಯಾದರು ರಾಯಚೂರಿಗೆ ಹೋಗಲೇಬೇಕು !!!


ಕೊನೆಯದಾಗಿ "ದೇವರು" ಎನಿಸಿಕೊಂಡಿರುವ ಆ "Invisible Legend"ಗೆ

ಓ ದೇವರೇ ..,
ಇರುವವರಂತೂ ನಿನ್ನ ಬೇಡುವುದಿಲ್ಲ .,
ಬೇಡದಿದ್ದರೂ ಎಲ್ಲವನ್ನೂ ಮತ್ತೆ ಮತ್ತೆ ಅವರಿಗೇ ನೀಡುತ್ತಿಯ .,
ಇಲ್ಲದವರು ನಿನ್ನ ಕಾಡಿ ಬೇಡಿದರು .,
ನೀ ಅವರಿಗೇನು ನೀಡುತ್ತಿಲ್ಲ .,
ದಯಮಾಡಿ ಅವರ ಬದುಕಿಗೆ ಆಸರೆಯಾಗು .,
ಅವರ ಪ್ರತಿ ಹೆಜ್ಜೆಗೆ ಬೆಳಕಾಗು !!!















Monday, April 27, 2009

ಮನದಾಳದ ಮಾತು ಅ ನನ್ನ ಗುರುವಿಗೆ ( ಭಾಗ - ೩ )

ನನ್ನ ಪ್ರೀತಿಯ ಅರಿವಿದ್ದೂ ನಟಿಸುತ್ತಿರುವೆಯೋ
ಅರಿವಿಲ್ಲದೆ ನಟಿಸುತ್ತಿರುವೆಯೋ
ನಾ ಕಾಣೇ ....
ಏನೂ ಅರಿಯದ ಮುಗ್ದ ಮಗುವಿಗೆ ಹೊಲಿಸಲೋ
ತಿಳಿದು ನಟಿಸುವ ರಂಗ ನಾಯಕಿಗೆ ಹೊಲಿಸಲೋ
ನಾ ಅರಿಯೇ ....



ನಿನ್ನ ಪ್ರೀತಿಗಾಗಿ ಹಂಬಲಿಸಿ
ನಾ ಕಾದ ಅಸ್ಟೂ ವರ್ಷಗಳು
ಮಣ್ಣಿನಲ್ಲಿ ಮಣ್ಣಾಗಿಹವು.,
ನಿನ್ನಿಂದ ನಾ ಕಲಿತ ಪಾಠಗಳು
ಅ ಮಣ್ಣಲ್ಲೇ ಕುಡಿವಡೆದು ಹುವಾಗಿಹವು .,



ನಿನ್ನ ಮನಸಲ್ಲಿ ಏನುಂಟು ಏನಿಲ್ಲ ?
ಅದನ್ನರಿಯಲು ನಾ ಎಂದೂ ಯತ್ನಿಸಲಿಲ್ಲ .,
ಎಲ್ಲರಂತೆ ನನ್ನ ಪ್ರೀತಿಯು "ಕುರುಡು"
ಅದಕ್ಕೆ ಕಣ್ಣಿಲ್ಲ ., ಏನಿಲ್ಲ ..,


ಸಾಲು ಸಾಲು ಕವಿತೆಗಳ ಗೀಚಿ
ನಿನ್ನ ನೋಯಿಸುವ ಉದ್ದೇಶ ಎನಗಿಲ್ಲ .,
ನನ್ನ ಮನಸಲ್ಲಿರುವ ನಿನ್ನ ತಿಳಿನೀರಿನಲ್ಲಿ
ತೇಲಿಬಿಡುವಾಸೆ..,
ನಿನ್ನ ಮೇಲಿನ ನನ್ನ ಪ್ರೀತಿಯನ್ನ ಬಿಡಿಬಿಡಿಯಾಗಿ
ಚಿತ್ರಿಸುವಾಸೆ ., ಅಸ್ಟೆ



ನಿನ್ನ ಜೀವನದ ಭಾರಿ
ಆಸೆ-ಕನಸುಗಳು ಹಾಗು ಧ್ಯೇಯಗಳು
ನನ್ನನ್ನ ಚಿಂತನೆಗೆ ದೂಡಿವೆ.,
ಮಧ್ಯ-ರಾತ್ರಿಯಲಿ ಭೂತ- ಪ್ರೇತಗಳಾಗಿ
ನನ್ನ ನಿದ್ದೆ ಹಾಳುಗೆಡವುತ್ತಿವೆ



ಒಂದಿಷ್ಟು ಮಾತುಗಳು
ಒಂದಿಷ್ಟು ಕಿತ್ತೋಗಿರೋ ಭಾವನೆಗಳು.,
ಒಂದಿಷ್ಟು ಸಿಹಿ- ಕಹಿ ನೆನಪುಗಳು
ಒಂದಿಷ್ಟು ಒಟ್ಟಿಗೆ ಕಳೆದ ಕ್ಷಣಗಳು.,
ಇಂತಿಸ್ಟೇ ನನ್ನ ಬಾಳಲ್ಲಿ ನೀ
ಉಳಿಸಿರುವ ಶೇಷಗಳು ....



ಇಂದಿರುವವ ನಾಳೆಗೆ ಇರುವನೋ ಇಲ್ಲವೊ ?
ಇಂದಿರುವ ನಮ್ಮದು ನಾಳೆ ಮತ್ತಾರದೋ ??
ಕಾಲಚಕ್ರ ತಿರುಗಿದಂತೆ ನಮ್ಮ ಬಾಳಟ
ಮೇಲಿನವ ಆಡಿಸಿದಂತೆ ನಮ್ಮ ದೊಂಬರಾಟ .,
ಇದ ಅರಿತು ಬಾಳೆ , ಎಲೆ ಬಾಲೆ ..



ಒತ್ತಿ ಹಿಡಿಯುತ್ತಲೇ ಇರುವೆ
ನಿನ್ನ ಮೇಲಿನ ನನ್ನೆಲ್ಲ ಭಾವನೆಗಳ
ಕಟ್ಟುತ್ತಿರುವೆ ನೀನಿಲ್ಲದ ಹೊಸ ಕನಸುಗಳ
ನನಗರಿವಿಲ್ಲದೆ ನಾ ಹಿಡಿದಿರುವೆ
ಸುಖದ ಹಾದಿಯ .,


ಇಂತಿ
ಚಾರ್ಲಿ ., ಕನಸು ಕಾಣುತ್ತಲೇ ಹಾಯಾಗಿದ್ದೆ ., ಭಾವನೆಗಳ ಹೊರಹಾಕಿ ತೋಳಲಾಡುತ್ತಿರುವೆ:(

Friday, April 10, 2009

ಓ ದೇವರೇ .,

ಓ ದೇವರೇ .,
ಜಗತ್ತಿನ ಪ್ರತಿ ಜೀವಿಯ ಕತೃ ನೀನೆ ..
ನಿನ್ನ ಬೇಡದಿದ್ದರೂ ಜೀವ ನೀಡಿ ಧರೆಗಿಳಿಸುತ್ತೀಯ.,
ನಿನ್ನ ಸೃಷ್ಠಿಯ ಅರಿಯಲು ನಾನಾ ಬಗೆಯ ಕಷ್ಟ ಕೊಡುತ್ತೀಯ .,
ಕೊನೆಗೆ ನಿನ್ನ ನೆಲೆ ಅರಸುವಂತೆ ಮಾಡಿ ಅವರ ಪ್ರಾಣ ಹಿಂಡುತ್ತೀಯ.,




ಓ ದೇವರೇ .,
ಸಾಲದೆಂಬಂತೆ ಕಾಯಿ ಕರ್ಪೂರಗಳ ನ್ಯೆವೇದ್ಯ
ಆಹುತಿ ತೆಗುದುಕೊಳ್ಳುತ್ತಿರುವೆಯ
ಜಗದ ಅಸ್ಟೂ ನೆಮ್ಮದಿಯ .,??
ನಿನಗರಿವಿಲ್ಲದೇ ಕಳಚುತ್ತಿರುವೆಯ
ಪ್ರತಿ ಜೀವಿಯ ಬಾಳಕೊಂಡಿಯ ., ??




ಓ ದೇವರೇ .,
ಪ್ರತಿ ಜೀವಿಯ ಸುಧಾರಿಸಲು ಒಬ್ಬನಿಗೆ ಕಷ್ಟವಾದೀತೆಂದು
ನಿನ್ನಂತ ನೂರು ಮಂದಿ ಹುಟ್ಟು ಹಾಕಿದರು
ಆದರೂ ಜೀವಿಗಳ ಕಷ್ಟ ತೀರಲಿಲ್ಲ .,
ನಿಮ್ಮ ಹುಟ್ಟಿಸಿದ ಸಾರ್ಥಕತೆಯ ಅನುಭವವಂತೂ
ಅವರಿಗಾಗಲೇ ಆಗಲೇ ಇಲ್ಲ .,




ಓ ದೇವರೇ .,
ನಿನ್ನ ಇರುವಿಕೆ ನಿಜವಾದರೆ .,
ಒಮ್ಮೆಯಾದರು ಎದ್ದು ಬಾ
ಜಗದ ಅಸ್ಟೂ ದುಷ್ಟ ಶಕ್ತಿಗಳ ಸಂಹರಿಸು ಬಾ
ಜಗದ ಪ್ರತಿ ಜೀವಿಯ ಬಾಳ ಬೆಳಗಿಸು ಬಾ .,



ಓ ದೇವರೇ .,
ಎಸ್ಟೆe ಅರಿಯಲೆತ್ನಿಸಿದರೂ ಮಾನವನಿಂದ ನಿನ್ನ ಅರಿಯಲಾಗಲಿಲ್ಲ.,
ನಿನ್ನ ಎಸ್ಟೆe ಬೇಡಿದರೂ ಅವರ ಜೀವನ ಸಾಕಾರಗೊಳ್ಳಲಿಲ್ಲ .,
ನಿನ್ನ ಎಸ್ಟೆe ಅಂಗಲಾಚಿದರೂ ಅವರಸ್ಟೂ ಕನಸುಗಳು ನನಸಾಗಲಿಲ್ಲ .,
ನಿನ್ನೊಂದಿಗೆ ಎಸ್ಟೆe ಹೊಡೆದಾಡಿದರು ಪರಿಪೂರ್ಣ ಸ್ಥಿತಿಗೆ ಅವ ತಲುಪಲೇ ಇಲ್ಲ.,
ನೀ ಮಾತ್ರ ಅವರ ನಂಬಿಕೆ ಮೇಲೆ ಸಮಾಧಿ ಕಟ್ಟಿ ಭದ್ರ ನೆಲೆಮಾಡಿಕೊಂಡಿರುವೆ !!!



ಓ ದೇವರೇ .,
ಎಲ್ಲರೂ ನಿನ್ನ ಸೂರ್ಯ ಚಂದ್ರ
ನಕ್ಷತ್ರಗಳಿಗೆ ಹೋಲಿಸುತ್ತಾರೆ .,
"ನಂಬಿದವರ ಬೆನ್ನಿಗೆ ಚೂರಿ ಹಾಕುವ ನಿನ್ನ"
ನಾ ಮಾತ್ರ "ಗುಳ್ಳೆ ನರಿಗೆ" ಹೊಲಿಸುವೆ .,




ಓ ದೇವರೇ .,
ಬಾಳದಾರಿಯಲಿ ಏಕಿಂತ ಯಾತನೆ .,
ಕೆಲವರಿಗಸ್ಟೆ ಏಕೆ ಸುಖದಾ ಹೊಳೆ .,
ಮಿಕ್ಕ ಎಲ್ಲರಿಗೇಕೆ ಕಷ್ಟಗಳ ಸರಮಾಲೆ .,
"ಒಂದು ಕಣ್ಣಿಗೆ ಬೆಣ್ಣೆ -ಮತ್ತೊಂದಕ್ಕೆಸುಣ್ಣ"
ನಿನ್ನ ಈ ನಡತೆ ಸರಿಯೇ ???



ಓ ದೇವರೇ .,
ನಿನ್ನ ಕಾಡಿ ಬೇಡಿ ನ ಪಡೆದದ್ದಾದರು ಏನು .,
ನಿನ್ನ ಸೇವೆ ಮಾಡಿ ನ ಗಳಿಸಿದ್ದಾದರೂ ಏನು .,
"ಅಂತೂ ಇಲ್ಲ - ಇಂತೂ ಇಲ್ಲ "
ನೆಲೆ ಕಾಣದಂತೆ ಮಾಡಿರುವೆ .,
ನನ್ನ ಬಾಳಬೆಳಗಿದ್ದವರನೆಲ್ಲ ನೀ ದೂರಮಾಡಿರುವೆ !!!

Tuesday, April 7, 2009

ಮತ್ತೆ ಮತ್ತೆ ತೆಗಳದಿರು ಗೆಳೆಯ(DP) ಎಲ್ಲವನ್ನ ಕೊನೆಗಾಣಿಸುವೆ.,ಇಸ್ಟರಲ್ಲೇ !!!

---------- Forwarded message ----------From: harish d p haricreativity@gmail.com Date: 2009/4/6Subject: Re: ಚಿತ್ರ ವಿಚಿತ್ರವೀ ಜೀವನ., ಸುತ್ತು ಸುಳಿದು ಭಾವನೆಗಳ ಜೊತೆ ನಮ್ಮ ಪಯಣ .,!!!To: Sridhara C B sridharacb@gmail.com

Avalna bittu muchkondu beredu baredu aramaagi iru Sumne hegella baredu baredu NIMHANS entry thagobeda..Ee nam hudugaru adu yavaag uddara aagthaaro .ThatAgain if u write like this dont send to me ..yaaryaarigo nin talent waste maadtheeyalla , i m pitty about you ..Neenu barebeku andre avaru adanna uliskondirbeku Bye take care

-- --ಜೀವನದ ಹಾದಿಯಲ್ಲಿ ಎಲ್ಲಾ ಕಡೆ ಸಿಕ್ಕಾ ಪಟ್ಟೆ ಟ್ರಾಫಿಕ್ ಜಾಮ್ ಕಣ್ರೀ , ಫ್ಲೈ ಓವರ್ ಕಟ್ಟಲೇ ಬೇಕು ಇಲ್ಲ ಅಂದ್ರೆ ಲೈಫ್ ನ ಮಿಸ್ ಮಾಡ್ಕೊಂಡು ಬಿಡ್ತೀವಿ ..

ನಿಮ್ಮ ಪ್ರೀತಿಯ ಹರೀಶ್


ಮತ್ತೆ ಮತ್ತೆ ತೆಗಳದಿರು ಗೆಳೆಯ
ಎಲ್ಲವನ್ನ ಕೊನೆಗಾಣಿಸುವೆ.,
ಅವಳ ಬಗ್ಗೆ ಗೀಚಿವುದು.,
ಅವಳ ಬಗ್ಗೆ ಚಿಂತಿಸುವುದು .,ಎಲ್ಲವನ್ನ
ದಯಮಾಡಿ ನನ್ನಲ್ಲಿ ಅಡಗಿರುವ ಅಸ್ಟು
ಭಾವನೆಗಳು ಹರಿದುಹೋಗಲು ಎಡೆ ಮಾಡಿಕೊಡು
ನಾ ನೆಮ್ಮದಿಯಾಗಿರಲು ಪ್ಲೀಸ್ ಗೀಚಲು ಬಿಡು .,

ನೀ ಹೇಳಹೊರಟಿರುವ ನೀತಿಪಾಠದ
ಪ್ರತಿ ಸಾಲಿನ ಅರಿವು ಎನಗಿದೆ !!
ನೀ ಅನುಭವಿಸಿದ, ನೀ ಹೊರಳಾಡಿದ
ಪರಿಯು ನನಗೆ ತಿಳಿದಿದೆ !!
ಏನು ಮಾಡಲಿ ಗೆಳೆಯ
ಪರಿಪರಿಯಾಗಿ ಬೇಡಿದರೂ
"ಪ್ರೀತಿಯ ಆಳ" ಅರಿಯಲೆಬೇಕೆಂದು
ನನ್ನ ಮನಸ್ಸು ಹಠಮಾಡಿ ನಿಂತಿದೆ., !!!


ನಾ ಪ್ರತಿ ಬಾರಿ ಗೀಚಲು ಕುಳಿತಾಗ
ಅವಳಂತೆ ನೀನು ನನ್ನ ಮನಸಲ್ಲೇ ಕುತಿರುತ್ತಿ
ಎಸ್ಟೆ ಬೇಡಿದರೂ ಅವಳು ಹೊರಹೋಗಳು
ನೀ ಮಾತ್ರ ನಾ ಬೇಡದೇ ಹೊರನೆಡೆಯುತ್ತಿ
ನೀ ನನ್ನ ಅರಿತ್ತಿದ್ದಿ ಅದಕ್ಕೆ ನೀ ಹಾಗೆ.,
ಅವಳಿನ್ನು ನನ್ನ ಅರಿತಿಲ್ಲ ಅದಕ್ಕೆ ನಾ ಇನ್ನ ಹೀಗೆ !!!


ಮತ್ತೆ ಮತ್ತೆ ಕ್ಷಮಿಸು ಗೆಳೆಯ
ಎಂದು ಕೇಳುವ ಅರ್ಹತೆ ಎನಗಿಲ್ಲ .,
ನೀ ತಿಳಿಸಿದಂತೆ ಬದುಕುವೆ ಎಂದು
ಹೇಳುವ ಗಟ್ಟಿ ಮನಸ್ಸು ಎನಗಿಲ್ಲ .,
ನನಗೇ ತಿಳಿಯದೆ ನಾ ಕರಗುತ್ತಿರುವೆ !!!
ನನಗೇ ತಿಳಿಯದೆ ನಾ ನಿನ್ನ
ನಂಬಿಕೆ ಕಳೆದು ಕೊಳ್ಳುತ್ತಿರುವೆ !!


ನಾ ರಚ್ಚೆ ಹಿಡಿದು ಅಳುವ
ಹಠಮಾರಿ ಮಗುವಿನ ಹಾಗೆ .,
ನೀ ಮಾತ್ರ ನೋವಿನ ಸುಳಿವೂ
ಮಗುವಿದೆ ಸಿಗದಿರಲ್ಲೆಂದು ಹೊರಳಾಡುವ
ತಂದೆ - ತಾಯಿಯರ ಹಾಗೆ ., !!!


ಬೇರೆಯವರ ಜೀವನದಲ್ಲಿ ಹೇಗೋ
ಏನೋ ನಾ ಅರಿಯೇ ...
ನನ್ನ ಬಾಳಲ್ಲಿ ಮಾತ್ರ
ಪ್ರೀತಿ-ಗೆಳೆತನಕ್ಕೆ ಸಮಪಾಲು
ಪ್ರೀತಿ ಅರ್ಧ ಬಾಳ ಬೆಳಗಿದರೆ
ಗೆಳೆತನ ಅದನ್ನ ಪ್ರಜ್ವಲಿಸುವಂತೆ ಮಾಡಿದೆ !!


"ಎಲ್ಲರ ಮಧ್ಯೆ ಬೆಲೆಯಿಲ್ಲದೆ ಬದುಕುವ
ಸ್ಥಿತಿ ತಲುಪುತ್ತಿ, ಅವಳ ಬಗ್ಗೆ ಗೀಚುವುದ ನಿಲ್ಲಿಸು"
ಎಂಬ ನಿನ್ನ ಮಾತು ಸದಾ ಕಿವಿಯಲ್ಲಿ ತೆಲುತಿರುತ್ತದೆ.,
ಎತ್ತ ಸಾಗಲಿ ಗೆಳೆಯ ..,
ನನ್ನ ಈ ಸ್ಥಿತಿಗೆ ನಿನ್ನಂತೆ ಅವಳೂ
ಪಾಲುದಾರಳೆ... ನಿನ್ನೊಂದಿಗೆ ಅವಳೂ ಇದ್ದರೆ !!!
ನನ್ನ ಈ ಬಾಳು ಸದಾ ಹಸಿರಲ್ಲವೇ ???


ನ ಪದೇ ಪದೇ ನಿನಗೆ ತಿಳಿಸುವೆ/ ತಿಳಿಸುತ್ತಿರುವೆ
ನನಗೆ ಅವಳ ಪ್ರೀತಿ ಬೇಡ .,
ಕರುಣೆ, ಅನುಕಂಪ, & ಮಮಕಾರದ
ಅಲೆಗಳು ನನಗೆ ಬೇಡ ., ನನಗೇನು ಬೇಡ !!
"ನಿನಗೂ ಒಳ್ಳೆಯ ಮನಸಿದೆ ., ಅದಕ್ಕೆ
ನನ್ನ ಪ್ರೀತಿಸುವ ಅರ್ಹತೆಯಿದೆ ಎಂದರೆ ಅಸ್ಟೆ ಸಾಕು '' !!!



ಎಲ್ಲರೂ ಬೇರೆಯವರ ಅನುಭವದ
ಮಾತುಗಳನ್ನ ಆಲಿಸಿ - ಅದರಂತೆ ನಡೆದಿದ್ದರೆ
ಎಲ್ಲರೂ ಬಹುಬೇಗ ಮಹಾಪುರುಶರಾಗುತ್ತಿದ್ದರು ..
ಸರಿ -ತಪ್ಪುಗಳು ನಮ್ಮಲ್ಲಿ ನಡೆಯುವವರೆಗೂ
ನಾವೆಲ್ಲ ಹೀಗೆ ., ನಮಗೂ ಅರಿವಾಗಲಿ
......... ನಮಗೂ ಅನುಭವವಾಗಲಿ ಎನ್ನುವವರು ..!!!
ಹಿಗೇಳು ಗೆಳೆಯ ನಿನ್ನ ಅನುಭವದ ಪಾಠ
ನನಗೆಷ್ಟು ತಲುಪೀತು ????


ಇಂತಿ ನಿಮ್ಮ
ಚಾರ್ಲಿ .,



ಓ ಭಾವನೆಗಳೇ .............
ಸದಾ ಸುತ್ತದಿರಿ ವಿದುತ್ ಬೀಸನಿಗೆಯಾಗೆ .,
ಸದಾ ಬಂದಪ್ಪಳಿಸದಿರಿ ಕಡಲ ತೊರೆಗಳ ಹಾಗೆ .,
ಸದಾ ಗು0ಯೆನ್ನದಿರಿ ಹಿಂಡು ನೊಣಗಳ ಹಾಗೆ .,
ನನಗೂ ಒಂದು ಜೀವನವಿದೆ ., ಅದನ್ನ
ಕಟ್ಟಿಕೊಳ್ಳಲು ಅನುವು ಮಾಡಿಕೊಡಿ
ದಯಮಾಡಿ ನನ್ನ ಮನಸ್ಸ ಖಾಲಿ ಮಾಡಿ
/ಬಿಡಿ

Monday, April 6, 2009

ಚಿತ್ರ ವಿಚಿತ್ರವೀ ಜೀವನ ಸುತ್ತು ಸುಳಿದು ಭಾವನೆಗಳ ಜೊತೆ ನಮ್ಮ ಪಯಣ ., !!!

ಬಾಳ ದಾರಿಯಲ್ಲಿ ...
ನಾ ನಿನಗೆ ಎನಾಗದೆ ಇದ್ದರೇನು
ನೀ ನನಗೆಲ್ಲ !!!

ಆದರೂ ನಿ ನನಗೇನಲ್ಲ :( !!!
ಯಾವತ್ತು ನಿ ಪರವಸ್ತು ..
ನನ್ನ ಬಾಳಲ್ಲಿ ನಿ ಜಡವಸ್ತು !!!


ಒತ್ತಿ ಹಿಡಿಯಲೇ ಬೇಕು
ನಿನ್ನ ಮೇಲಿನ ನನ್ನೆಲ್ಲ .,
ಭಾವನೆಗಳ ., ಆಸೆ ಕನಸುಗಳ.,
ಸಾಗಿಸಲೇ.... ಬೇಕು ನೀನಿಲ್ಲದ
ಬಾಳ ಬಂಡಿಯ !!!


ಆಡಿಸುವಾತ ಮೇಲೆತ್ತಿ ಆಡಿಸುವ
ಬೀಳಿಸುವ ಮೇಲೆಳ ಬಿಡದೆ ಮತ್ತೆ ಮತ್ತೆ ಬೀಳಿಸುವ
ನನ್ನ ಭಾವನೆಗಳು ಅಸ್ಟೆ,,,,,
ಕೆಲವೊಮ್ಮೆ ಆಡಿಸುವಾತ!! ಮಗದೊಮ್ಮೆ ಬೀಳಿಸುವಾತ !!
ನಾ ಮಾತ್ರ ಯಾವಾಗಲು ಅನುಭವಿಸುವಾತ...



ಚಿತ್ರ ವಿಚಿತ್ರವೀ ಜೀವನ
ಸುತ್ತು ಸುಳಿದು
ಭಾವನೆಗಳ ಜೊತೆ ನಮ್ಮ ಪಯಣ .,
ಆಸೆ ಕನಸುಗಳೊತ್ತೆ ನಮ್ಮ ಮರಣ !!!



ಹುಟ್ಟುವುದೋ ನಮಗದರ ಅರಿವಿಲ್ಲ

ಸಾವೋ ನಮಗದರ ಸುಳಿವಿಲ್ಲ
"ಅರಿವಿಲ್ಲದ - ಸುಳಿವಿಲ್ಲದ",ನಮ್ಮ ಹುಟ್ಟು- ಸಾವುಗಳ ಮದ್ಯೆ
ಏನನ್ನಾದರೂ ಸಾಧಿಸಿ , ನಮ್ಮ ಮುಂದಿನವರಿಗೆನಾದರು ಒಳಿತು ಬಿಟ್ಟು
ಈ ನಮ್ಮ ಬಳಾಟ ಮುಗಿಸೋಣ.!!!


ಇಂತಿ ನಿಮ್ಮ
ಚಾರ್ಲಿ .....

Wednesday, March 25, 2009

ಅ ನನ್ನ ಮಹಾತಾಯಿಗೆ ., ನನ್ನನ್ ಅಗಲಿದ ನನ್ನ ದೊಡ್ಡಮ್ಮನಿಗೆ .,

ತಾಯಿ .,
ಕನಸಿನ ಗೋಪುರ ಕಟ್ಟಿಸಿ .,
ಅವುಗಳ ಜೊತೆಗಿದ್ದು ನನಸಾಗಿಸಿಬಿಟ್ಟೆ.,
ಪ್ರತಿ ಹೆಜ್ಜೆಯಲ್ಲೂ ನೀತಿ ಪಾಠ ಹೇಳಿ
ಗದರಿಸಿ,ಬೆದರಿಸಿ .,
ತಿದ್ದಿ , ತೀಡಿ.,
ಸಮಾಜದಲ್ಲಿ ನೆಲೆ ಕಲ್ಪಿಸಿಕೊಟ್ಟೆ.,
ಸಮಾಜದಲ್ಲಿನ ಗೌರವ ,ಗಳಿಸಿದ ಹೆಸರು
ಎಲ್ಲವನ್ನ ನಿನಗರ್ಪಿಸಿ ಬಿಡಬೇಕು
ಎನ್ನುವಸ್ಟರಲ್ಲಿ ನೀ
ನಮ್ಮನ್ನ ಅಗಲಿಬಿಟ್ಟೆ.,
ತಾಯಿ
ನೀ ನನ್ನ ಕೂಗುತ್ತಿದ್ದ ಪರಿ
ಇನ್ನ ಕಿವಿಯಲ್ಲಿ ಗುಯೆಂನುತ್ತಿದ್ದೆ .,
"ಲೇ ಕರಿಯ ಏಳೂ ಸಾಕು "'.,
ಎನ್ನುವ ಮಾತೆ.,
ನನ್ನನ್ನ ಈ ಮಟ್ಟಕ್ಕೆ ಎಳೆದು ತಂದಿದೆ .,
ತಾಯಿ
ಎಲ್ಲರನ್ನ ಸಾಲಾಗಿ ಕೂರಿಸಿ
ನೀ ಮಾಡಿ ಬಡಿಸುತ್ತಿದ್ದ
ರಾಗಿ /ಗೋದಿ ಮುದ್ದೆ
ಮೇಲೆ ಗುಂಡಿ ಮಾಡಿ ನೀ
ಹೊಯ್ಯುತ್ತಿದ್ದ ತುಪ್ಪ,ಜೊತೆಗೆ
ಬಡಿಸುತ್ತಿದ್ದ ಹುಣಸೆಹುಳಿ ಸಾರು
ನಾ ಇನ್ನಾ ಮರೆತಿಲ್ಲ .,
ಅದೇಕೋ ಅವೆಲ್ಲವನ್ನ ಈಗ
ನನ್ನಮ್ಮ ಮಾಡಿಬಡಿಸಿದರೆ
ತಿನ್ನುವ ಮನಸಿಲ್ಲ .,
ತಾಯಿ
ನಿನ್ನ ಪ್ರತಿ ಹೆಜ್ಜೆ
ನಿನ್ನ ದೃಷ್ಟಿ ಕೋನ
ನೀ ಕಂಡ ಕನಸುಗಳು
ನೀ ನನ್ನಿಂದ ಬಯಸುತ್ತಿದ್ದ
ಕೆಲ ನಡೆ ನುಡಿಗಳು
ಇನ್ನ ಕಣ್ಣ ಕಟ್ಟಿವೆ .,
ಅದಕ್ಕೆ ಏನೋ ನನ್ನ ಮನಸ್ಸು ಇನ್ನ
"ಸಾಧನೆಯ" ಹಾದಿಯಲ್ಲಿದೆ .,
ತಾಯಿ
ಬದುಕಿಗೆ ರೂಪರೇಷೆ ತೋರಿಸಿ .,
ನನ್ನ ಪ್ರತಿ ದಾರಿಗೆ ದೀಪವಾಗಿ
ಎಲ್ಲಿಯು ಏನು ಕೊರೆತೆಯಾಗಿಸದೆ
ನನ್ನ ಮನಸೆಲ್ಲ ತುಂಬಿ ಕೊಂಡು ಬಿಟ್ಟೆ
ನಾ ನಿನ್ನ ಎಂದೂ ಮರೆಯದಿರಲೆಂದು ?
ನಿನ್ನ ಸಾವ ನೀನೆ ತಂದು ಕೊಂಡು ಬಿಟ್ಟೆ ?
ಇಂತಿ
ಚಾರ್ಲಿ .,.............................. ನೀನಿಲ್ಲದ ಬಾಳು ಅದು ಬೆಂಗಾಡು

Sunday, March 15, 2009

ನನ್ನ ಮನದಾಳದ ಮಾತು ಅ ನನ್ನ ಗುರುವಿಗೆ - ಭಾಗ ೨

ಏನೋ ಪಡೆದು ಸಂತೋಷ ಪಟ್ಟರೆ ಏನುಂಟು Special ಜೀವನದಲ್ಲಿ ...
ಎಲ್ಲಾ (ನಿನ್ನ ) ಕಳೆದುಕೊಂಡೂಮೇಲೂ ........
ಸೊಂತೋಷ ಪಡುವುದೇ Very Special .............. :) :)



ಬೇರೆಯವರ ಅಳು ನಿಲ್ಲಿಸಿ .. ಅವರನ್ನು ನಗುವಂತೆ ಮಾಡುವುದೇ ಜೀವನ ,,,,






ನಿನ್ನ ಹೊಗಳಿ ಬರೆಯುತ್ತೇನೋ .. ತೆಗಳಿ ಬರೆಯುತ್ತೇನೋ ..
ನಿನ್ನ ಮೇಲಿನ ಪ್ರೀತಿ ವ್ಯಕ್ತ ಪಡಿಸುತ್ತೇನೋ .. ಗೊತ್ತಿಲ್ಲ .....
ಆದರೆ ನಿನ್ನ ನೋಯಿಸುವ ಉದ್ದೇಶವಂತೂ ಖಂಡಿತ ಇಲ್ಲ ....
ಈಗೆ ಗೀಚಿದಾಗಲೆಲ್ಲ .. ಮನಸ್ಸು ಹಗುರಾಗುತ್ತದೆ ...
ನಿನ್ನ ಹಣೆಗೆ ಮುತ್ತು ಇಟ್ಟಸ್ತೆ ...ಸಂಭ್ರಮವಾಗುತ್ತದೆ ......... :) :)






ಯಾರೋ ಸಾದನೆ ಮಾಡಿರುವವನ ಕೈ ಇಡಿಯುವ ಅಸೆ ನಿನ್ನದಾದರೆ ..
ನೀ ಸಾದಿಸಿದ್ದಾದರು ಏನು ?
ಅದು ಹೋಗಲಿ .. ಅವನ ಸಾದನೆಯ ಹಾದಿಯಲ್ಲಿ ನಿನ್ನ ಹೆಜ್ಜೆಗಳೇಷ್ಟು ... ನಿನ್ನ ಪಾಲೆಸ್ಟು ???
hmmm ಯಾರದೋ ಸಾದನೆಗೆ ಜೋತು ಬೀಳುವ ಅಸೆ ನಿನಗೇಕೆ ??





ನಿನ್ನ ಮನಸಿನಲ್ಲಿರುವ ಬಹುದೊಡ್ಡ ಬೇಡಿಕೆಗಳು ,, ನನ್ನ ಪ್ರೀತಿಯನ್ನ ಮರೆ ಮಾಡಿವೆ ..
ಬೇಡಿಕೆಗಳ ಪಟ್ಟಿಯನೊಮ್ಮೆ ಸರಿಸಿ ನೋಡು ,,,
ನಿನ್ನ ಮನಸ್ಸು ನನ್ನ ಪ್ರೀತಿಸುತ್ತಿರುತ್ತದೆ .... ಆದರೆ ನನ್ನದಲ್ಲ ....



I Just Stopped Loving You ?? :) :) Hope 99.9 %
(0.1 % ನಿನ್ನ ಮೇಲೆ ನನಗೆ ಕರುಣೆ ಅಸ್ಟೇ .....)
ಕಾರಣ ಇಸ್ಟೇ ... ನೀ ನನ್ನ ಇಂದನ್ನು ಒಪ್ಪಿಕೊಳ್ಳಲು ಸಿದ್ದಳಿಲ್ಲ ....... ನನಗೇ ಅರಿಯದ ನಾಳೆ ಎದುರು ನೋಡುತ್ತಿರುವೆ ....
I just Hate those thoughts ... ನಿನ್ನನ್ನಲ್ಲ , ನಿನ್ನ ಮನಸನಲ್ಲ :):)



ನನ್ನ ನಗು ಮಾಯವಾಗಿ .. ನನ್ನ ಜೀವನದಲ್ಲಿ ಮುಂದೆ ಏನು ? ಎಂಬ ಪರಿಸ್ಥಿಯಲ್ಲಿದ್ದಾಗ ದೊರಕಿದ್ದು ನೀನು ...
ಆಗಲೇ ನನ್ನ ಆಸೆ ಕನಸುಗಳು ಚಿಗುರಿದ್ದು .. ನನ್ನ ಮುಖದ ತುಂಬಾ ನಗು ತೇಲುವನ್ತಾಗಿದ್ದು ..
ಬಾಳಿನ ದಾರಿಯಲ್ಲಿ ನಿನ್ನ ಸರಿಸಮಾನವಾಗಿ ಬೆಳೆದು .. ನಿನ್ನೊಂದಿಗೆ ಬೆಳೆಯುತ್ತಲೇ ಸಾಗಬೇಕೆನ್ದುಕೊಂಡೆ ..
ಆದರೆ ದೇವರಿಗೆ ನನ್ನ ನಗು ಮುಖ ಇಷ್ಟವಾಗಲಿಲ್ಲವೇನೋ .. ಅವ ದಾರಿ ತುಂಬೆಲ್ಲಾ ಕವಲು ದಾರಿಗಳನಿಟ್ಟ ...


"ನೀನಿದ್ದ ಕನಸುಗಳು"

ನನ್ನ ಪುಟ್ಟ ಪುಟ್ಟ ಕನಸುಗಳು ನನಸಾದಾಗ
ನನ್ನ ಅಪ್ಪ - ಅಮ್ಮ ಹಾಗು ಗೆಳೆಯರ ಜೊತೆ
ನೀನು ಇದ್ದೆ ಎಂದುಕೊಂಡೆ .,
ಆದರೆ ನಾ ಹಿಂದೆ ತಿರುಗಿದಾಗಲೇ ಅರಿವಾದದ್ದು
ನೀನಿದ್ದ ಅಸ್ಟೂ ಕನಸುಗಳು ಇನ್ನೂ., Still :)
ಕನಸಾಗಿಯೇ ಇವೆಯೆಂದು !!!




" ದೊಡ್ಡ ಕಾರಣ "
ನನ್ನ /ನಿನ್ನ ಮೇಲಿನ ಪ್ರೀತಿಯನ್ನ ನಿನ್ನ ಮುಂದೆ ಬಿಚ್ಚಿ ಇಡಬೇಕೆಂಬ ಹಂಬಲ .,
ಆದರೆ ಮನದಲ್ಲೇನೋ ತಳ - ಮಳ ., :)
ನಿನ್ನ ಮೇಲಿನ ಬಯಕ್ಕಲ್ಲ ,
ನಿನ್ನ ಸ್ನೇಹವನ್ನು ಕಳೆದುಕೊಳ್ಳುತ್ತೇನೆ ಎಂಬ ಅಂಜಿಕೆ ಇಂದಲ್ಲ .,
ನನ್ನ ಮೇಲೆ ನೀನಿಟ್ಟಿರುವ ಅಭಿಮಾನ,ಅಕ್ಕರೆ,ಸಹಾನುಭೂತಿ
ಎಲ್ಲಿ ಕರುಗುತ್ತದೋ ಎಂಬ " ದೊಡ್ಡ ಕಾರಣಕ್ಕೆ" !!!!




--

ಚಾರ್ಲಿ ... ಭಾವನೆಗಳಿಗೆ ಬಣ್ಣ ಕೊಡುವ ಆಸೆ ನನಗಿಲ್ಲ ... ಭಾವನೆಗಳನ್ನ ವ್ಯಕ್ತ ಪಡಿಸುವಾಸೆ ...... ಅಸ್ಟೆ !!

Saturday, March 14, 2009

ನನಗೇ ಮುಜುಗರ ಉಂಟು ಮಾಡಿದ " ReBorn FUN@TIC$"


ಇಲ್ಲಿರುವ ಪ್ರತಿಯೊಬ್ಬರ ಮನಸನ್ನ ಅವರಿಗಿಂತ ನಿನೇ ತುಂಬಾ ಚೆನ್ನಾಗಿ ಅರಿತ್ತಿದೀ .
ಅವರ ಆಗು - ಹೋಗುಗಳ , ಅಸೆ ಕನಸುಗಳ ಬಗ್ಗೆ Ph.D ಮಾಡಿದ್ದೀ ...
ಆಗಿದ್ದರೂ ಎಲ್ಲರನ್ನೂ ನಿನ್ನ ಸೊಂಟಕ್ಕೆ ಕಟ್ಟಿಕೊಂಡು ಎಳೆಯುವ ಪ್ರಯತ್ನವಾದರೂ ಏಕೆ ??...
ಎತ್ತಣ ನಿನ್ನ ಕನಸು ... ಎತ್ತಣ ಅವರ ಕನಸು .. ಎತ್ತನದಿಂದೆತ್ತ ಸಂಭದವಯ್ಯ ಜೋಗಯ್ಯ ..... ?



ಗೆಳೆಯ ಅ ನೋವಿನ Good Bye ನ ಅವಶ್ಯಕತೆಯಿಲ್ಲ ...
ಎಲ್ಲರೂ ನಿನ್ನ ಕನಸಿಗೆ - ಭಾವನೆಗಳಿಗೆ ಬೆನ್ನು ಕೊಡಲು ..

ನಿನ್ನ ಸಾದನೆ ಯಾದರು ಏನು ?
ಸಮಾಜದಲ್ಲಿ ನೀನು ಗಳಿಸಿರುವ ಹೆಸರಾದರು ಏನು ?
ಮೇಲಾಗಿ ನಿನ್ನ ಗಳಿಕೆ - ಕೂಡಿಕೆ ಎಷ್ಟು ?
ಒಮ್ಮೆ ನೀ ಸಾದಿಸಿ ನೋಡು .. ಗಳಿಸಿ ಕೂಡಿಸಿ ನೋಡು ...
ಇಲ್ಲಿಯ ಪೂರ್ತಿ ಚಿತ್ರಣವೇ ಅದಲು ಬದಲು ...

@@@@@@@ ಜೋಗಯ್ಯ @@@@@@@ Almost 3 ವರ್ಷದ ninna ಎಳೆದಾಟಕ್ಕೆ ತೆರೆಯೇ ..... ??



ಅದೊಂದು ಕಾಲ ಆಗ ಬರೀ ಸಂತೋಷದ ಹೊಳೆ .,
ಸುತ್ತಲೂ ಸ್ವಾರ್ತವಿಲ್ಲದ ಮನಸುಗಳೇ ..

ತದನಂತರದ ಕಾಲ ಆಗ ಬರೀ ಸೂತಕದ ಛಾಯೆ .
ಸುತ್ತಲೂ ಸ್ವಾರ್ತ ತುಂಬಿದ ಮನಸುಗಳೇ .,

ಈಗ ಕಾಲ ಬದಲಾಗಿದೆಯೇ ... ??
ಮತ್ತೆ ಅ ಕಾಲದ ಸಂತೋಷದ ಹೊಳೆ ಹರಿವುದೇ .. ??


ನಾನೆ ಗೀಚಿದ್ದ ಈ ಮೇಲಿನ ಸಾಲುಗಳು ... ., ಇವುಗಳಿಗೆ ಈಗ ಅರ್ಥವಿದೆಯೇ ? ಇಲ್ಲ!!
ನಾನೆ ತಲೆ ತಗ್ಗಿಸಿರುವೆ ., ನಿಮ್ಮ ಈ ಒಗ್ಗಟ್ಟಿಗೆ ., !!!!




" ಎಲ್ಲರಂತ ಸ್ವಾರ್ಥ ಸಾಧನೆ ನಿಮಗೆ ಬೇಡ .,
ಎಲ್ಲರಂತ ನೀತಿಗೆಟ್ಟ ಬದುಕು ನಿಮಗೆ ಬೇಡ .,
ಎಲ್ಲರಂತ ವ್ಯರ್ಥ ಸಾವು ನಿಮಗೆ ಬೇಡ .,
ನಾಲ್ಕು ಜನರ ನೆಮ್ಮದಿ ಬದುಕಿಗಾಗಿ ಹಾಗು
ಸಮಾಜದ ಒಳಿತಿಗಾಗಿ ಮುನ್ನಡೆಯಿರಿ .,
ಸಾಧನೆಯ ಕೀರಿಟವನ್ನೊತ್ತು ಅಮರರಾಗಿ " ..



ಇಲ್ಲಿಯ ಪ್ರತಿಯೊಬ್ಬರ ಕನಸು - ಎಲ್ಲರ ಶ್ರಮ, ಒಗ್ಗಟಿನ ಕೆಲಸದಿಂದ ಹಿಡೇರಲಿ .,
ಎಂದು ಆಶಿಸುವ

ನಿಮ್ಮ ನೆಲ್ಮೆಯ
ಚಾರ್ಲಿ ... ಸದಾ ನಿಮ್ಮೊಂದಿಗೆ !!

Wednesday, February 25, 2009

ಸ್ಲಮ್ ಡಾಗ್ ಗೆ ದೊರೆತ ಆಸ್ಕರ್ ಬೆನ್ನ ಹಿಂದೆ !!! .,


" ಸ್ಲಮ್ ಡಾಗ್ Millioniare" ಚಿತ್ರವನ್ನ ಭಾರತೀಯನೊಬ್ಬ ನಿರ್ದೇಶಿಸಿ,
ತೆರೆಯ ಮೇಲೆ ತಂದಿದ್ದರೆ ಏನಾಗುತ್ತಿತ್ತು .,
ಸ್ಲಮ್ ನ ಬಾಲಕನೋಬ್ಬನನ್ನ ನಾಯಿಗೆ ಹೋಲಿಸಿ ತೆಗೆದ ಚಿತ್ರ ಎಂದು .,
ಚಿತ್ರಮಂದಿರಗಳಿಗೆ ಬೆಂಕಿ,ವಿವಿಧ ಸಂಘಟನೆಗಳಿಂದ ಭಾರಿ ಪ್ರತಿಭಟನೆ ,
ಕೆಲವೆಡೆ ಅ ಚಿತ್ರ ಪ್ರದರ್ಶನವನ್ನು ಕಾಣುತ್ತಿರಲಿಲ್ಲ ,ಆಗೇ ..
Its not going to win an single Oscar too !!! ....


" ಸ್ಲಮ್ ಡಾಗ್ Millioniare" ಚಿತ್ರವನ್ನ ಕನ್ನಡದ ಹೆಸರಾಂತ ನಿರ್ದೇಶಕ
S.ನಾರಾಯಣ್ ನಿರ್ದೆಶಿಸಿದ್ದರೆ ಏನಾಗುತ್ತಿತ್ತು .,:) Sorry ಅದು Mega Serial ಆಗುತಿತ್ತು ಇಲ್ಲವಾದಲ್ಲಿ
" ಸ್ಲಮ್ ಡಾಗ್ Millioniare-1" ," ಸ್ಲಮ್ ಡಾಗ್ Millioniare-2"
ಹೀಗೆ Continue ಆಗುತಿತ್ತೋ ಹೊರೆತು ಒಂದು ಚಿತ್ರವಾಗುತ್ತಿರಲಿಲ್ಲ.
ಹಾಗೆ Jai Ho Song Full Graphics ಮಯವಾಗುತ್ತಿತ್ತು !!!



" ಸ್ಲಮ್ ಡಾಗ್ Millioniare" ಇದೇ ಚಿತ್ರವನ್ನ Bollywoodನ
ಹೆಸರಾಂತ ನಾಯಕ ನಟ/ನಿರ್ದೇಶಕ Amir ನಿರ್ದೆಶಿಸಿದ್ದರೆ ಏನಾಗುತ್ತಿತ್ತು .,:)
ಭಾರತದ ಅಸ್ಟೂ ಪ್ರಶಸ್ತಿಗಳು ., ಎಲ್ಲಾ Categoriesದು
ಅ ಚಿತ್ರಕ್ಕೆ ಲಭಿಸುತ್ತಿತ್ತು Except OSCAR !!!!
Jai Ho Amir .,




" ಸ್ಲಮ್ ಡಾಗ್ Millioniare" ಚಿತ್ರದಲ್ಲಿ ಅಂತ ಹೊಸತನವೇನಿತ್ತು..
Oscar ಮುಡಿಗೇರಿಸುವ ಅಂತ Special thing ಏನಿತ್ತು ..!!!!

Lagaan, Tare Zameen Par ನಲ್ಲಿ ಇದ್ದ ಹಾಗೆ
Bollywoodನ ಖ್ಯಾತ ಕಲಾವಿದರಿದ್ದರು,
ಅ ಚಿತ್ರಗಳಿಗೆ ಸಂಗೀತ ನೀಡಿದ A.R.Rehaman ಕೂಡ ಇದ್ದರು ...
ಅವು ಉತ್ತಮ ಕಥೆಗಳನ್ನ ಹೊಂದಿದ್ದವು ,
ಆದರೆ ಅಲ್ಲೊಬ್ಬ English ನಾಡಿನ ನಿರ್ದೇಶಕನಿರಲಿಲ್ಲ !!!!

An English Director/Producer and
A English Banner are the Special things



" ಸ್ಲಮ್ ಡಾಗ್ Millioniare"ಚಿತ್ರದ ಅಸ್ಟೂ Credit
Co-Director Loveleen Tandanಗೆ ಸಲ್ಲುತ್ತದೆ
ನಮ್ಮ ಮನೆ / ನಮ್ಮ ಊರು ನಮಗೆ ತಾನೇ ಗೊತ್ತು .,
ಪಕ್ಕದ ಮನೆಯವರಿಗೆ / ಊರಿನವರಿಗೆ ಏನು ಗೊತ್ತು ???
Danny Boyle ur for name sake !!
Its Her Movie .,Its her Reality and Creativity
Jai Ho Loveleen offcourse Jai Ho Rehman and Jai Ho Casting Crews !!!





With Regards

Charlie ., Critisiciam in an healthy or Non-Healthy Way I dont Mind .,
Live for a Moment !!! Express Yourself ., !!!

Tuesday, February 24, 2009

ನಮ್ಮ ಬುಲ್ ಬುಲ್ ಗೆ .,


ನಿನಗಾಗೆ ನಾನೇ ಬರೆಯಬೇಕೆಂದಿದ್ದೆ ಆ ಸಾಲುಗಳನ್ನ "ಆಕಾಶದಿಂದ ಧರೆಗಿಳಿದ ರಂಭೆ".,
ಛೀ Sorry, ಅದಲ್ಲ .,
"ಬಂಗಾರಿ ಯಾರೇ ನಿ ಬುಲ್ ಬುಲ್ " .,
ಛೀ very sorry ಇದೂ ಅಲ್ಲ .,"
ಯಾರಿವನು ಈ ಮನ್ಮಥನು ., ವೀರರಲ್ಲಿ ವೀರ " .,!! ವೀರ ವೀರ !! (with lady corousus) :) .,
Yes ಇದೇ ..... :)
ಏನು ಮಾಡಲಿ ನಮ್ಮ Boss ಹಂಸಲೇಖರವರು ಆಗಲೇ ಗೀಚಿಬಿಟ್ಟಿದ್ದಾರೆ .



ನಾ ನಿನ್ನನೊಂದಿಗಿಟ್ಟ ಪ್ರತಿ ಹೆಜ್ಜೆಗಳ ನೆನಪು ಮಧುರ
ನಾ ನಿನ್ನೊಂದಿಗೆ ಕಳೆದ ಪ್ರತಿ ಕ್ಷಣಗಳು ಅತಿ ಮಧುರ
ನಾ ನಿನ್ನೊಂದಿಗೆ ಕಂಡ ಕನಸುಗಳು /ಸಾಧಿಸಿದ ಪುಟ್ಟ ಗಳಿಗೆಗಳು ಇನ್ನೂ ಅಮರ ...
Total ಆಗಿ ಹೇಳಬೇಕೆಂದರೆ ನಿನ್ನೊಂದಿಗಿದ್ದರೆ ಬರೀ ಭಾವನೆಗಳ "ಭಾರಿ ಭೋಜನ"
Not even a Single ಹಕ್ಕಿ , No duet with that ಹಕ್ಕಿ !!! :) :)



ಗೆಳೆಯ ನಿನ್ನಲ್ಲಿ ಇಷ್ಟವಾಗುವ ಕೆಲವು :)
ಅ ನಿನ್ನ ಕೆಟ್ಟ ನಗು , ಅ ನಿನ್ನ ಗೆಡ್ಡೆ ಮುಗು , ಅ ನಿನ್ನ Rajkumar ಮೀಸೆ,
ಅ ನಿನ್ನ Gopalan mall 3/4th , Raviದು IBM T-ಶರ್ಟ್
ನಿ ಕೊಡಿಸೋ ಆಂಟಿ ಅಂಗಡಿ ಪಡ್ದು ,
ನಿ MOvie tickets thru ನಮಗೆ ಅಕೋ bladeಗಳು
ಕಿತ್ತೋಗಿರೋ Apacheಯಲ್ಲಿ ನಿ ಅಕೋ Thribs .,
conferences ಹೀಗೆ ನೂರಾರು !!! :)



ಸ್ನೇಹ, ಸಲುಗೆ,ವಿಶ್ವಾಸ, ನಂಬಿಕೆ,ಪರೋಪಕಾರ,ಪ್ರೀತಿ,
ಅಕ್ಕರೆ ಸಹಾನುಭೂತಿ , ಆತ್ಮೀಯತೆ , ಅನ್ಯೋನ್ಯತೆ,ನಿರಹಂಕಾರ etc., etc.,
ಇಂತ ನೂರಾರು ಪದಗಳಿಗೆ ಒಂದೇ ಉದಾಹರಣೆ :

ಅದು ನೀನೆ ಗೆಳೆಯYeh thats you Bull Bull :o :) :o


ಹಿಂದಿನ ಕಾಲದ ಎಸ್ಟೋ ಗಾದೆಗಳು ವಾಸ್ತವವನ್ನು ಬಿಚ್ಚಿಡುತ್ತವೆ ,
ಜನರ ಹಾಗು-ಹೋಗುಗಳನ್ನ ಹಾಗು ಅವರ ಮನಸನ್ನ ಬಿಂಬಿಸುತ್ತವೆ .,
Case Study : ಗಾದೆ : "ಊರಿಗೇ ಉಪಕಾರಿ . ಮನೆಗೆ ಮಾರಿ" .,
Pratical Example : ನಮ್ಮ ಈ ರಾಖಿ!!!! :)




ಸ್ವಚಂದವಾಗಿ ಹಾರಾಡುವ ಹಕ್ಕಿಯಂತೆ ನೀನು .,


ತಿಳಿನೀರಿನಲ್ಲಿ ತೇಲುವ ಅ ಮೀನಿನಂತೆ ನೀನು .,


ಮೇಲಾಗಿ ಸುತ್ರವರಿಯದ ಗಾಳಿಪಟ ನೀನು .,


ಅಂತೆ ದೃತಿಗೆಡದ ಮಹಾಸಾದು ನೀನು .,


ನಿನಗೇಕೆ ಕವಿತೆ ., ನಿನಗೇಕೆ ಅ ಲತೆ ???


!!!.. ಬೇಡವೋ ಗೆಳೆಯ ಬೇಡ .,










ಸಮಾಜದ ಒಳಿತಿಗಾಗಿಯೋ .,


ನಾಲ್ಕು ಜನರ ಉದ್ದಾರಕ್ಕಾಗಿಯೋ .,


ಇಲ್ಲ ನಾಲ್ಕು ಕಾಸಿಗೋ ಗೀಚೋ .,


ಬದಲು"ಅಂತೂ ಇಲ್ಲದ ಇಂತೂ ಇಲ್ಲದ"


ಈ ಸಿದ್ದಾಂತದ ಮೇಲೆ ಬೇಡವೋ ಗೆಳೆಯ ಬೇಡ .,


ಬೇರೆಯವರ ನೋಡಿ ಕಲಿಯೋ ಗೆಳೆಯ :) :) ನೋಡಿ ಕಲಿಯೋ !!! :)






With Lovely Regards

Charlie ......ರಾಖಿ ನಿನ್ನ ನೋಡಿ ಕಲಿತ ಅ ನಾಲ್ಕು
(ನಂಬಿಕೆ, ವಿಶ್ವಾಸ , ಪರೋಪಕಾರ ಹಾಗು ನಿರಹಂಕಾರ ) ಪದಗಳಿಗೆ ., ನನ್ನೀ
ನೆಮ್ಮದಿ ಬದುಕೇ ಸಾಕ್ಷಿ !!!!