Friday, July 10, 2009

ಪ್ರತಿ ಹನಿಯನ್ನ ಪ್ರೀತಿಸುವವರು ಅವರು,ಅ ಹನಿಯನ್ನೇ ದೂಶಿಸುವವರು ನಾವು.,

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..
ಸುರಿವ ಒಲುಮೆಯಾ ಜಡಿ ಮಳೆಗೆ..ಪ್ರೀತಿ ಮೂsಡಿದೆ ........!!!!







ಇಂತ ಅದ್ಭುತ ಸಾಲುಗಳನ್ನ ಯೋಗರಾಜ್ ಭಟ್ರು ಒಬ್ಬ ಪಟ್ಟಣವಾಸಿಯಗಿದ್ದರೆ ಖಂಡಿತವಾಗಿಯೂ ಗೀಚುತ್ತಿರಲಿಲ್ಲ .,
ಅವರು ಹಳ್ಳಿಯ ವಾತಾವರಣದಲ್ಲಿ ಬೆಳೆದು ., ಅಲ್ಲಿನ ಸುಂದರ ಹಸಿರಿನ ಮಧ್ಯೆ ಓಡಾಡಿ .,
ಮುಂಗಾರು ಮಳೆಯಲ್ಲಿ ತೊಯ್ದು ., ಅದರ ಪ್ರತಿ ಹನಿಯನ್ನ ತಮ್ಮ ಮನಸಿನಲ್ಲಿ ತುಂಬಿಕೊಂಡು .,
ಮುಂದೊಂದು ದಿನ ಆ ಮಳೆಯ ಮಧುರ ಕ್ಷಣಗಳನ್ನ ಕನವರಿಸಿದಾಗಲೇ ಇಂತ ಸಾಲುಗಳು ಹುಟ್ಟಿರುವುದು .,

ಹೌದು ಒಬ್ಬ ಪಟ್ಟಣವಾಸಿಯಾದರೆ(ಹುಟ್ಟು ಪಟ್ಟಣಿಗ) ಮಳೆ ಬಂದ್ರೆ ಸಾಕು ಇದು ಯಾಕಾದ್ರು ಬರುತ್ತೆ ? !! ನಮ್ಮ ನಿತ್ಯ ಬದುಕನ್ನ ಹಾಳುಗೆಡವಲು ಎಂದು ಸದಾ ಶಪಿಸುತ್ತಲೇ ಇರ್ತಾನೆ ., ಅವನಿಗೆ ಅದರ ಮಹತ್ವ .,ಅದರ ಪ್ರಯೋಜನ ಬಗ್ಗೆ ತಿಳುವಳಿಕೆ ಕಡಿಮೆ ಅಂದ್ರು ತಪ್ಪಾಗಲಾರದು ., ಇನ್ನ ಅದರ ಪ್ರತಿ ಹನಿಯನ್ನ ಪ್ರೀತಿಸುವ ಗೋಜಿಗೆ ಹೋಗುವುದೆಲ್ಲಿ ?? !!.

ಅವನಿಗೆ ಮಳೆಯ ಮಹತ್ವ ತಿಳಿವುದು ಒಂದೋ ತಮ್ಮ ಮನೆ ಬಾಗಿಲಿಗೆ ಬಾರೋ ಕುಡಿಯೋ ನೀರು(ಬೆಂಗಳೂರಿಗೆ ಬರೋ ಕಾವೇರಿ) ನಿಂತಾಗ ., ಇಲ್ಲ ತಾನಿರೋ ಗಲ್ಲಿಯಲ್ಲಿ ಪವರ್ ಕಟ್/ ಲೋಡ್ ಶೆಡ್ಡಿಂಗ್ ಶುರು ಆದಾಗ ., ಇಲ್ಲವಾದಲ್ಲಿ ಪತ್ರಿಕೆಯಲ್ಲಿ ಹಾಗು ದೂರದರ್ಶನದಲ್ಲಿ ಬಿತ್ತರವಾಗುವ ಕೆಲ ಸುದ್ದಿಗಳತ್ತ (ಉದಾ : ಕೇವಲ ೧೧ ದಿನ ಮಾತ್ರ ವಿದ್ಯುತ್ ಉತ್ಪಾದನೆ ಸಾಧ್ಯ : ರಾಜ್ಯಕ್ಕೆ ಕಗ್ಗತ್ತಲೆಯ ಭೀತಿ ., ವರುಣ ದೇವನೇ ಗತಿ )ಕಣ್ಣು ಹಾಯಿಸಿದಾಗ.

ಮಳೆಗಾಲ ಶುರುವಾದ್ರೆ ಸಾಕು , ಮುsಲೆ ಸೇರಿದ್ದ ರೈನ್ ಕೊಟ್ ಹಾಗು ಛತ್ರಿಯನ್ನ ಹೊಂದಿಸಿ ಕುರ್ತಾನೆ ., ಮಳೆಯಲ್ಲಿ ನೆನದ್ರೆ ಶೀತ, ತಲೆ ನೋವು ಹೀಗೆ ಅನೇಕ ವ್ಯಾಧಿಗಳು ಹುಟ್ಟುತ್ವೆ ಅಂತ ಒ]ಷಧಿಗಳನ್ನ ರೆಡಿ ಮಾಡ್ಕೋತಾನೆ ., ಮಳೆಗಾಲ ಶುರುವಾಗೊದನ್ನ ಹಾಗು ಮುಗಿಯೋದನ್ನ ಸುದ್ದಿ ಮಾಧ್ಯಮಗಳ ಮುಖೇನ ತಿಳಿದುಕೊಳ್ತಾನೆ ., ಹೀಗೆ ಬದುಕೋ ಅವನಲ್ಲಿ ಮಳೆ ಬಗ್ಗೆ ಪ್ರೀತಿ ಹುಟ್ಟು ಅಂದ್ರೆ ಎಲ್ಲಿಂದ ತಾನೇ ಹುಟ್ಟುತ್ತೆ ?? ಅಲ್ವ !!! ??

ಅದೇ ಮಳೆ ಬಿದ್ರೆ ಸಾಕು ಹಿರಿ ಹಿರಿ ಹಿಗ್ಗುವ ನಮ್ಮ ಹಳ್ಳಿಯವ.ಅದರ ಹನಿಗಳು ಇನ್ನಷ್ಟು ರಭಸವಾಗಿ ಹಾಗೂ ಇನ್ನಷ್ಟು ದಪ್ಪನಾಗಿ ಬೀಳಲಿ ಎಂದು ಸದಾ ಬೇಡುವ .,


ಬಿಡದೇ ಸುರಿದರೂ ಬೇಸರಗೊಳ್ಳದೆ ಅದರ ಪ್ರತಿ ಹನಿಯನ್ನ ಪ್ರೀತಿಸುವ ., ಪೂಜಿಸುವ ., ನಮ್ಮ ಹಳ್ಳಿಯವ .






ಅವನಿಗೆ ಮಳೆಯೇ ಜೀವಾಳ ., ಅವನಿಗೆ ಮಳೆಯೇ ಎಲ್ಲ!!! ., ಅವನಿಗೆ ಮಳೆಗಾಲ ಯಾವಾಗ ಶುರುವಾಗುತ್ತೆ .,
ಆ ಕಾಲದಲ್ಲಿ ಎಷ್ಟು ಮಳೆ ಬಿಳುತ್ವೆ (ರೋಯಿಣಿ,ಭರಣಿ ಹೀಗೆ .,) ಯಾವ ಮಳೆ ಯಾವಾಗ ಹುಟ್ಟಿ ಯಾವಾಗ ಕೊನೆ ಆಗುತ್ತೆ !! ಹೊಸ ಮಳೆ ಯಾವಾಗ ಆರಂಭವಾಗುತ್ತೆ ಹೀಗೆ ಎಲ್ಲವನ್ನ ಸುದ್ದಿ ಮಾಧ್ಯಮಗಳಿಲ್ಲದೆ ತಿಳಿಯುವವ ., ಮಳೆಯನ್ನೇ ತನ್ನ ಒಂದು ಅಂಗವಾಗಿಸಿಕೊಂಡಿರುವ .,ಆ ಮಳೆಯನ್ನೇ ತನ್ನ ಪ್ರಾಣವಾಗಿಸಿಕೊಂಡಿರುವ .,

ಮಳೆ ಶುರುವಾದ್ರೆ ಸಾಕು ತಲೆ ಮೇಲೆ ಗೊಪ್ಪೆ(ಗೋಣಿ ಚೀಲ /ತಾಟು) ಹಾಕಿಕೊಂಡು ತನ್ನ ನಿತ್ಯ ಕಾರ್ಯದತ್ತ(ವ್ಯವಸಾಯದತ್ತ) ಹೆಜ್ಜೆ ಹಾಕ್ತಾನೆ , ಬೆಳಗಿನಿಂದ ಸಂಜೆವರೆಗೂ ಅದೇ ಮಳೆಯಲ್ಲಿ ಮಿಂದು ತನ್ನ ಅಸ್ಟು ಕೆಲಸವನ್ನ ಮುಗುಸ್ತಾನೆ., ರಾತ್ರಿ ಬೀಳೋ ಮಳೆಯನ್ನೂ ಹೆಂಡತಿ ಮಕ್ಕಳೊಂದಿಗೆ ಕೂತು ನೋಡಿ ಆನಂದ ಪಡ್ತಾನೆ ., ತನ್ನ ಮಕ್ಕಳಿಗೆ ಅದರ ಬಗ್ಗೆ ನೀತಿ ಪಾಠ ಹೇಳಿ ಆದರ್ಶ ಮೆರಿತಾನೆ ., ಮಕ್ಕಳೂ ಮಳೆಯನ್ನ ಪ್ರೀತಿಸಿ ., ಪೂಜಿಸುವಂತೆ ಮಾಡ್ತಾನೆ !!

ಹೀಗೆ ಮಳೆಯ ಪ್ರತಿ ಹನಿಯನ್ನ ಪ್ರೀತಿಸುವವರು ಅವರಾಗ್ತಾರೆ ., ಅ ಹನಿಯನ್ನೇ ದೂಶಿಸುವವರು ನಾವಾಗ್ತೇವೆ ...






ಸಿಹಿ ಹನಿ :


"ಬೇರೆಯವರಿಗೆ ಸಹಾಯ ಮಾಡಲಾಗದಿದ್ದರೂ ಅವರಿಗೆ ಕಷ್ಟ ಕೊಡಲೇಬಾರದು" !!
ಈ ಮಾತು ತಲತಲಾಂತರದಿಂದ ಬಂದದ್ದು ., ಈ ಮಾತನ್ನ ಮುಂದಿನ ತಲೆಮಾರಿಗೂ ಬಿಡಿ .,

ಮಳೆಯೇ ಹಳ್ಳಿಗನಿಗೆ ಜೀವಾಳ ., ಅದು ಸದಾ ಸುರಿಯಲು ಬಿಡಿ !! ಅದಕ್ಕಾಗಿ ಮರಗಳನ್ನ ಉಳಿಸಿ ., ಬೆಳಸಿ ., !!

ಸುರಿಯೋ ಮಳೆ ., ಅದನ್ನ ಪ್ರೀತಿಸುವ ಜೀವಕ್ಕೆ ಸಹಾಯ ಮಾಡಿ ., ಅದರ ನೆಮ್ಮದಿ ಬದುಕಿಗೆ ನೆರವಾಗಿ !!!

No comments: