Friday, July 31, 2009

ಬುಡುಬುಡಿಕೆಯವರಂತೆ ಬಡಬಡಾಯಿಸಿ ಸುಮ್ಮನಾಗೋ ನಮ್ಮ ಮಾಧ್ಯಮದೋರು !!

೨೬ ಜುಲೈ ೧೯೯೯,ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆ ಹಾರಿಸಿದ ದಿನ.




ಆಗಷ್ಟೇ ನಾವು ಶಾಲ ದಿನಗಳನ್ನ ಮುಗಿಸಿ ಕಾಲೇಜಿನತ್ತ ಹೆಜ್ಜೆ ಇಟ್ಟಿದ್ದ ಕಾಲ ಅದು.
ಯುದ್ಧ ಅಂದ್ರೆ ಆಗ ನಮಗೆ ತಿಳಿದದ್ದು ಕಳಿಂಗ ., ಮೊದಲ ಮಹಾಯುದ್ಧ ., ಎರಡನೇ ಮಹಾಯುದ್ಧ .. ಹೀಗೆ ಅನೇಕ ., ಅಂದ್ರೆ ನಮ್ಮ ೭ ರಿಂದ ೧೦ ನೇ ತರಗತಿಯ ಪಠ್ಯಗಳಲ್ಲಿದ್ದ Chronologically arranged ಯುದ್ಧಗಳಷ್ಟೇ ., ಇವುಗಳ ಬಗ್ಗೆ ಓದಿ ಪರೀಕ್ಷೆ ಬರೆದು ., ತದನಂತರ ಅವುಗಳ ಮರೆತವರೇ ಹೆಚ್ಚು ., !!

ಆದ್ರೆ ೧೯೯೯ ರಲ್ಲಿ "ಪಾಕ್ - ಭಾರತ"ದ ನಡುವೆ ನಡೆದ "ಕಾರ್ಗಿಲ್ ಯುದ್ಧ" ಮಾತ್ರ ೨೦ ನೇ ಶತಮಾನದಲ್ಲಿದ್ದ ಪ್ರತಿಯೊಬ್ಬರ ಮನಸ್ಸಿನಲ್ಲಿ ಮರೆಯಲಾರದ ಕಹಿ ನೆನಪಾಗಿ ಉಳಿದಿದೆ.(ಕೆಲ ಭ್ರಷ್ಟ ಮನಸುಗಳಲ್ಲಿ ಬಿಟ್ಟು).


ಆ ಯುದ್ಧದ ಚಿತ್ರಣ ಮಾಧ್ಯಮದವರಿಂದಾಗಿಯೇ ಪ್ರತಿಯೊಬ್ಬರಿಗೂ ತಲುಪಿತು ., ಯುದ್ಧ ಅಂದ್ರೆ ಹೀಗೂ ಇರುತ್ತೆ ., ಅದರ ತೀವ್ರತೆ ., ಸಾವು ನೋವುಗಳು ಹೀಗಿರುತ್ತವೆ ಅಂತ ತೋರಿಸಿಕೊಟ್ಟವರು ಅವರೇ ..
ಎಲ್ಲವನ್ನ ಎಲ್ಲರಿಗೂ ತಿಳಿಸಿಕೊಟ್ಟವರೂ ಅವರೇ .,

ಆ ಯುದ್ಧದಲ್ಲಿ ನಡೆದ ತ್ಯಾಗ ಬಲಿದಾನಗಳು - ನಂತರದ ನೋವಿನ ಕ್ಷಣಗಳು - ಜೊತೆಗೇ ಹುಟ್ಟಿಕೊಂಡ ನಮ್ಮ ಭ್ರಷ್ಟ ರಾಜಕಾರಣಿಗಳ ಹಗರಣಗಳು .. ಹೀಗೆ ಎಲ್ಲವೂ ಎಲ್ಲರಿಗೇ ತಿಳಿದೇ ಇದೆ .

ಆ ಯುದ್ಧದ ನಂತರ ನಡೆದದ್ದು ಸಂತಾಪ ಸೂಚಿಸುವ ಕಾರ್ಯಕ್ರಮಗಳು ಜೊತೆಗೆ ನಮ್ಮ ರಾಜಕಾರಣಿಗಳ ಪೊಳ್ಳು ಆಶ್ವಾಸನೆಯ ಸಾಲು ಭಾಷಣಗಳು .,

ಅಂದು ಆ ಯುದ್ಧದಲ್ಲಿ ಹುತಾತ್ಮರಾಗಿದ್ದು ೫೩೩ ವೀರ ಯೋಧರು.,

ಆ ಯುದ್ಧ ಗತಿಸಿ ಇಂದಿಗೆ ೧೦ ವರ್ಷಗಳೇ ಕಳೆದಿವೆ !!!

ಆದರೆ ಅದೆಷ್ಟೋ ಸೆನಾನಿಗಳ ಕುಟುಂಬಕ್ಕೆ ಸರ್ಕಾರದಿಂದ ಸಲ್ಲಬೇಕಿದ್ದ ಸವಲತ್ತುಗಳು ಇನ್ನೂ ತಲುಪಿಲ್ಲ ., ಅಷ್ಟೂ ಕುಟುಂಬದವರ ದೈನಂದಿನ ಬದುಕು ದುಸ್ತರವಾಗಿದೆ .,
ಸಾರ್ವಜನಿಕರು ಹಾಗು ಕೆಲ ಸಂಘ ಸಂಸ್ಥೆಗಳು ಮಾಡಿದಷ್ಟು ಸಹಾಯ, ಸರ್ಕಾರ ಇನ್ನೂ ಕೆಲ ಯೋಧರ ಕುಟುಂಬಕ್ಕೆ ಮಾಡಿಲ್ಲ ಎಂಬುದು ಸತ್ಯ ಸಂಗತಿ .,

ಮೇಲಿನ ಆಷ್ಟೂ ವಿಚಾರಗಳು ನಮ್ಮಗೆ ತಿಳಿದಿರುವವೆ ., ಇವುಗಳ್ಳನ್ನೂ ನಮ್ಮ ಮಾಧ್ಯಮದವರು ಇನ್ಚಿಂಚೂ ಚಿತ್ರಿಸಿ ತೊರಿಸಿ ., ಮುದ್ರಿಸಿದ್ದೂ ಆಗಿದೆ.

ಸಮಾಜದ ಎಲ್ಲ ಮುಖಗಳನ್ನ ಜನತೆಗೆ ತೋರಿಸಿ,ತಿಳಿಸಿ ಹೇಳಿ., ಪ್ರತಿ ಘಟನಾವಳಿಗಳನ್ನ ಪ್ರತಿಯೊಬ್ಬರಿಗೂ ತಲುಪಿಸಿ ಕೆಲವೊಮ್ಮೆ ಆದರ್ಶ ಮೆರಿತಾರೆ .,
ಕೆಲವೊಮ್ಮೆ ತಮ್ಮ ಪ್ರಭಾವದ ಮೂಲಕ ಎಲ್ಲವೂ ಸುಸೂತ್ರವಾಗಿ ಮುಗಿಸಿ,ಒಬ್ಬರ ಬಾಳ ಬೆಳಗುವಾಗ ಮಾತ್ರ
ಕೈಕಟ್ಟಿ ಕುಳಿತು ಆ ಕ್ಷಣವನ್ನ ಕಣ್ಣ ಮುಂದೆ ತಂದಾಗೆ ಮಾಡಿ,ಬುಡುಬುಡಿಕೆಯವರಂತೆ ಬಡಬಡಾಯಿಸಿ ಸುಮ್ಮನಾಗುತ್ತಾರೆ.ನಮ್ಮ ಭ್ರಷ್ಟ ರಾಜಕಾರಿಗಳಿಗೆ ಪುಗುಸಟ್ಟೆ ಆಹಾರವಾಗಿಸಿ ., ಆಶ್ವಾಸಾನೆಯ ಮಾಹಪೋರ ಹರಿಸಲಿಕ್ಕೆ ಎಡೆಮಾಡಿ ಕೊಡುತ್ತಾರೆ !!

ಈ ಕಾರ್ಗಿಲ್ ಯುದ್ಧದ ನಂತರವೂ ನಡೆಯುತ್ತಿರುವುದೂ ಇದೆ ., !!


ಏಲ್ಲಿ ಎನು ತಪ್ಪಾಗಿದೆ ., ಎಲ್ಲಿ ಯಾವ ಯೋಧರ ಕುಟುಂಬಕ್ಕೆ ಸರಿಯಾದ ಪರಿಹಾರ ದೊರೆತಿಲ್ಲ ಎಲ್ಲ ವಿಚಾರಗಳನ್ನ ಕಲೆಹಾಕಿ ಅವರ ಗೋಳಿನ ಕತೆಗಳನ್ನ ಚಿತ್ರ ವಿಚಿತ್ರವಾಗಿ ಚಿತ್ರಿಸಿ ತೊರಿಸುತ್ತಾ ಇದಾರೆ ವಿನಃ , ಅವರಿಗಿರೋ ಪ್ರಭಾವವನ್ನ ಬಳಸಿಕೊಂಡು ಆ ಯೋಧರ ಕುಟುಂಬಕ್ಕೆ ಸಲ್ಲಬೇಕಾದ ಸರ್ಕಾರಿ ಸವಲತ್ತುಗಳನ್ನ ತಲುಪಿಸುವಲ್ಲಿ ಮಾತ್ರ ಜಾಣ-ದಡ್ಡರಂತೆ ವರ್ತಿಸುತ್ತಿದ್ದಾರೆ !!

ವರ್ಷಕ್ಕೊಮ್ಮೆ ಶೋಕಾಚರಣೆ ., ವಿಜಯೋತ್ಸವ ಆಚರಿಸಿ ಸುಮ್ಮನಾಗೋ ಸರ್ಕಾರಗಳು ., !!
ಆ ವೇಳೆಯಲ್ಲಿ ಅದ್ಬುತವಾದ ತಲೆ ಬರಹದಡಿ ಕೆಲ ಲೇಖನಗಳನ್ನ ( ಉದಾ: "ಕಾರ್ಗಿಲ್ ಕಲಿಗಳಿಗೆ ನಮನ" . "ಪಾಕ್ ವಿರುದ್ದ ಭಾರತ ಜಯಗಳಿಸಿದ ದಶಕದ ಸ್ಮರಣೆ")ಗೀಚಿ ಸುಮ್ಮನೆ ಆಗೋ ಪತ್ರಿಕೆಯವರು ಹಾಗೂ ಸುಂದರ ಕಾರ್ಯಕ್ರಮಗಳನ್ನ ಚಿತ್ರಿಸಿ ,ಅಂದೊಂದು ದಿನ ಒಬ್ಬರ ಯೋಧರ ಕರೆಸಿ ಅವರ ಅನುಭವಗಳನ್ನ ಹಂಚಿಕೊಳ್ಳುವ ನಮ್ಮ ದೃಷ್ಯ ಮಾಧ್ಯಮದವರು ಇನ್ನಾದರೂ ಇಂತ ಕಾರ್ಯಗಳತ್ತ ಕಣ್ಣು ಹಾಯಿಸ್ತಾರ ?
ಇಂತ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುತ್ತಾರ ? ಅವರ ಗೌರವ ಕಾಪಾಡುತ್ತಾರ ? ವೀರ ಯೋಧರ ತ್ಯಾಗ-ಬಲಿದಾನಗಳನ್ನ ಅವರ ಆದರ್ಶಗಳನ್ನ ಮುಂದಿನ ಪೀಳಿಗೆಗೆ ಇನ್ನೂ ಉತ್ತಮ ರೀತಿಯಲ್ಲಿ ತಲುಪಿಸುತ್ತಾರ? ಮುಂದಿನ ತಲೆಮಾರ ಆದರ್ಶಮಯವಾಗಿಸುತ್ತಾರ? ಹ್ಮ್ಮ್ ಎಲ್ಲವಕ್ಕೂ ಕಾಲವೇ ಉತ್ತರ ನೀಡಬೇಕಿದೆ .,

ಸಿಹಿ ಹನಿ

"ಸಮಾನ್ಯ ನಾಗರಿಕರೂ ದೇಶಕ್ಕೆ ಜೀವ ಬಲಿದಾನ ಮಾಡಿದ ಕುಟುಂಬಗಳ ಸಂಕಷ್ಟದಲ್ಲಿ ಭಾಗಿಗಳಾಗಬೇಕು"
ನಿಮಗೆನಾದ್ರು ಯೋಧರ ಕುಟುಂಬಕ್ಕೆ ಸಹಾಯ ಮಾಡೊ ಮನಸಿದ್ರೆ ಈ ಕೆಳಗಿನ ಲಿಂಕ್ ನೋಡಿ .,

ಹುತ್ತಾತ್ಮ ಸೈನಿಕರ ಕುಟುಂಬಕ್ಕೆ ನೆರವಾಗಲೆಂದೆe ಹುಟ್ಟಿಕೊಂಡಿರುವ ಹೊಸ ಸಂಸ್ಥೆ .
"Flags of Honour "!!

Tuesday, July 28, 2009

Funatics: ಉತ್ತಮ ಸಮಾಜ ನಿರ್ಮಾಣದತ್ತ ನನ್ನ ಗೆಳೆಯರ ಮಹತ್ತರ ಹೆಜ್ಜೆ ..,




Funatics ಬಗ್ಗೆ
ಎಲ್ಲವನ್ನಾ ಇಲ್ಲೇ ತಿಳಿಸಿಬಿಡಬೇಕೆಂಬ ಹಂಬಲ .. ಅತ್ಯುತಾಸಹ !!
ಆದರೆ ನಮ್ಮ ಶ್ರಮ - ನಮ್ಮ ನಿಲುವುಗಳು ನಿಮಗೆ ತಲುಪುವುದಿಲ್ಲ ..

V'll Never Walk Alone ...!!!


ಆದ್ದರಿಂದ ದಯಮಾಡಿ ಈ ಲಿಂಕ್ ನೋಡಿ www.funatics.co.in


ನಿಮ್ಮ ಸಲಹೆ ಹಾಗು ಅಭಿಪ್ರಾಯಗಳನ್ನ : Friends@Funatics.co.in ಇಲ್ಲಿಗೆ ಕಳುಹಿಸಿ .








Saturday, July 25, 2009

ಆತ್ಮಾಭಿಮಾನ/ಆತ್ಮಸಂತೃಪ್ತಿ ಬೆಳಸಿಕೊಳ್ಳಿ ., ಜೊತೆಗೊಂದಿಸ್ಟು ಪ್ರೀತಿ/ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಿ.!!

ದೊರೆವ ಜೀತಕೆ ದುಡಿತ, ಮರುದಿನ ಚಿಂತೆ ಮತ I
ಹೊರೆಯ ಹಗುರಾಗಿಸುವ ಕೆಳೆಯರರೊಡನಾಟ II
ಸರಳತೆಯ ಪರಿತುಷ್ಟಿ, ಪರಮಾರ್ಥ ದ್ರುಷ್ಟಿಯವು I
ಸರಿಗೂಡೆ ಸುಕೃತವದು - ಮಂಕುತಿಮ್ಮ II



ಈ ಮೇಲಿನ ಸಾಲುಗಳು ಮಾನ್ಯ ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗದಿಂದ ಆಯ್ದಂತವು.
ಡಿ.ವಿ.ಜಿ ಯವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಕೃತಿಗಳನ್ನ ರಚಿಸಿದ್ದರು.




ಅವುಗಳಲ್ಲಿ ಅತ್ಯಂತ ಅದ್ಭುತವಾದಂತಹ ಕೃತಿ "ಮಂಕುತಿಮ್ಮನ ಕಗ್ಗ". ಇದು ೧೯೪೩ ರಲ್ಲಿ ಪ್ರಕಟವಾಗಿತ್ತು.

ಅಂದರೆ ಇಂದಿಗೆ ಸರಿಸುಮಾರು ೬ ದಶಕಗಳ ಹಿಂದೆ.

ಕವಿಗಳು ಹಾಗು ಲೇಖಕರು ಏನೇ ಬರೆದರೂ, ಅದು ಅವರ ಜೀವಿತಾವಧಿಯಲ್ಲಿ ನಡೆದ ಘಟನಾವಳಿಗಳೋ, ಅವರ ಕಲ್ಪನೆಯಲ್ಲಿ ನಾಳೆಗಳೋ ಆಗಿರುತ್ತವೆ., ಇಲ್ಲ ತಮ್ಮ ಅನುಭವದಿಂದ ತಮ್ಮ ಮುಂದಿನವರ ಬಾಳ ಬೆಳಗಲು/ ಹದಗೊಳಿಸಲು ಎನನ್ನೊ ಸಿದ್ದಗೊಳಿಸಿದಂತೆ ಇರುತ್ತವೆ.



ಈ ಮೇಲಿನ ಕಗ್ಗದ ಸಾಲುಗಳು ಅಂತೇ., ಮಾನ್ಯ ಡಿ.ವಿ.ಜಿ.ಯವರ ಅನುಭವದ ಮಾತು, ನಮ್ಮ ಬಾಳು ಸುಖವಾಗಿರಲೆಂದು ಅವರು ಸೃಷ್ಟಿಸಿದ ಬ್ರಹ್ಮ ಲಿಪಿ ಅಂದ್ರೂ ತಪ್ಪಾಗಲಾರದು.

"ನಾವು ಪ್ರತಿದಿನವೂ ಮಾಡುವ ಕೆಲಸಕ್ಕೆ ಸರಿಯಾದ ಸಂಬಳ, ನಾಳೆಯ ಚಿಂತೆ ಅಷ್ಟಿಲ್ಲ, ಜೀವನದ ಭಾರವನ್ನ ಕಡಿಮೆಯಾಗಿಸುವ ಸ್ನೇಹಿತರ ಜೊತೆ ಆಟ-ಪಾಟಗಳು. ಈ ಬಗೆಯ ಸರಳ ರೀತಿಯ ಜೀವನದಲ್ಲಿ ಸಂತೃಪ್ತಿಯನ್ನ ಹೊಂದಿರುವುದು ಮತ್ತು ಪರಮಾರ್ಥವನ್ನು ಗಳಿಸುವುದರಲ್ಲಿ ದೃಷ್ಟಿ ಇರಿಸಿಕೊಂಡಿರುವುದು., ಇವುಗಳೆಲ್ಲವೂ ಕೂಡಿ ಬಂದರೆ ಅದು ನಮ್ಮ ಅದೃಷ್ಟದ ಫಲ ಎನ್ನಬಹುದು".- ಇದು ಮೇಲಿನ ಕಗ್ಗದ ತಾತ್ಪರ್ಯ .

ಇಂದಿನ ಯಾಂತ್ರಿಕ ಜೀವನವನ್ನ ಬಿಂಬಿಸುವಂತೆ ಹಾಗೂ ಆ ಬದುಕಿಗೆ ಹೇಗೆ ಮುಕ್ತಿ ಕಂಡುಕೊಳ್ಳಬೇಕು ., ಏನು ಮಾಡಿದರೆ ನಮ್ಮ ಬದುಕು ಸಾರ್ತಕವೆನಿಸುವುದು ಎಂಬುದನ್ನ ಈ ಕಗ್ಗದ ಮೂsಲಕ ಮಾನ್ಯ ಡಿ.ವಿ.ಜಿ ಯವರು ಅವಾಗಲೇ ಚಿತ್ರಿಸಿದ್ದಾರೆ.


ಇಂದಿನ ಬದುಕಿನಂತೆ ಅಂದಿನ ಬದುಕಿತ್ತ ? ಇಂದಿನ ಯಾಂತ್ರಿಕ ಜೀವನ ಆಗಲೇ ಸೃಷ್ಟಿಯಾಗಿತ್ತ ? ಇಲ್ಲ ಡಿ.ವಿ.ಜಿ ಯವರ ಆಲೋಚನೆಗಳು ಇಂದಿನ ದಿನಗಳನ್ನ ಸೃಷ್ಟಿಸಿ ತೋರಿಸಿದ್ದವ ?


ಅವರ ಮೇಲಿನ ಕಗ್ಗ ಓದುತ್ತಾ ಇದ್ದರೆ .,ಮೇಲಿನಂತೆ ಬರೀ ಪ್ರಶ್ನೆಗಳೇ ಉದ್ಬವಿಸುತ್ತವೆ ವಿನಃ ಉತ್ತರ ಸಿಗೋದು ಒಂದೊ ಎರಡೋ ಪ್ರಶ್ನೆಗಳಿಗೆ ಮಾತ್ರ!!.

ಆ ಮೇಲಿನ ಕಗ್ಗದ ಸಾಲುಗಳು ಏಕೆ ಹಾಗು ಹೇಗೆ ಹುಟ್ಟಿದವು ಅಂತ ಅದರ ಮೂsಲ ಹುಡುಕೋದಕ್ಕಿಂತ., ಆ ಸಾಲುಗಳು ಏನನ್ನ ಬಿಂಬಿಸ್ತಾ ಇವೆ ., ಅದರಿಂದ ನಮಗೆ ಏನಾದ್ರು ಸಹಾಯ ಆಗುತ್ತಾ ಅಂತ ನೋಡೋಣ ., ಆ ಸಾಲುಗಳನ್ನ ಅರ್ಥ ಮಾಡಿಕೊಳ್ಳೋಣ .,ಸಾಧ್ಯವಾದರೆ ಅವುಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ .,

ಈ ಯಾಂತ್ರಿಕ ಜೀವನದಲ್ಲಿ ದಿನ ಉರಿಳಿದಂತೆ ಮಾನವನ ಒಳ್ಳೇ ಆಲೋಚನೆಗಳು .,ಉತ್ತಮ ತತ್ವಗಳು/ಮಾರ್ಗಗಳು ನೆಲ ಕಚ್ಚುತಾ ಇವೆ.,


ಹಿಂದಿನ ದಿನಗಳಲ್ಲಿ ಅವನು ಇರಿಸಿಕೊಂಡಿದ್ದ ಮಧುರ ಭಾವನೆಗಳು ., ಪ್ರೀತಿ - ಬೆಸುಗೆಗಳು, ಸ್ನೇಹ - ಬಾಂಧವ್ಯಗಳು ನೆಲ ಸೆರ್ತಾ ಇವೆ .,

ಹಣ-ಅಂತಸ್ತು , ಅಧಿಕಾರ-ಪ್ರತಿಷ್ಟೆ ಈ ನಾಲ್ಕು ಅವನ ಬಾಳ ಪ್ರತಿ ಹೆಜ್ಜೆಯನ್ನ ಆವರಿಸುತ್ತಾ ಬರುತ್ತಿವೆ ., ಈ ನಾಲ್ಕಕ್ಕಾಗಿ ಏನನ್ನಾದರೂ ಮಾಡಲು ಸಿದ್ದನಿದ್ದಾನೆ., ಯಾರನ್ನಾದರು ತುಳಿಯಲು, ಕಿತ್ತು ತಿನ್ನಲು ., ಹ್ಮ್ಮ್ ಉಪಯೋಗಿಸಿ ಬಿಸಾಡಲು ಸಿದ್ದನಿದ್ದಾನೆ .,


ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕಂದ್ರೆ., ಹಣ-ಅಂತಸ್ತು , ಅಧಿಕಾರ-ಪ್ರತಿಷ್ಟೆ, ಇಸ್ಟೂ ಬಾಳಲ್ಲಿ ಇರಬೇಕು ಅಂದರೆ ಯಾರ ಒಡನಾಟ ಇರಬೇಕು ., ಏಲ್ಲಿ ಏನನ್ನ ಸೃಷ್ಟಿ ಮಾಡಬೇಕು ., ಏಲ್ಲಿ ಏನನ್ನ ನಾಶಮಾಡಬೇಕು ., ಇವೆಲ್ಲವನ್ನ ಕರಗತ ಮಾಡ್ಕೋತಾ ಇದಾನೆ ., ಎಲ್ಲವೂ ಕರಗತವಾಗ್ತಾ ಇದೆ ., ಅವನಂದುಕೊಂಡಂತೆ ಸಾಗ್ತಾ ಇದೆ .,

ಎಲ್ಲವನ್ನ ಎಲ್ಲರನ್ನ ಬದಿಗೊತ್ತಿ ., ಅವನಂದುಕೊಂಡಂತೆ ಹಣ-ಅಂತಸ್ತು , ಅಧಿಕಾರ-ಪ್ರತಿಷ್ಟೆ ಇಸ್ಟೂ ಸಿಕ್ತು ಮುಂದೆ?

ಆಗ ಖಂಡಿತ ಮನುಷ್ಯ ಪ್ರೀತಿ ಬೇಡ್ತಾನೆ ., ಕೆಲವರ/ಉತ್ತಮರ ಸಂಗ ಬೇಡ್ತಾನೆ, ಉತ್ತಮ ಬಾಂಧವ್ಯಗಳನ್ನ ಬೇಳೆಸೋಕೆ ಖಂಡಿತ ಪ್ರಯತ್ನ ಪಡ್ತಾನೆ ., ಆದ್ರೆ ಅವುಗಳ್ಯಾವು ಅವನ ಬಾಳಲ್ಲಿ ಮತ್ತೆ ಸೃಷ್ಟಿಯಾಗೊಲ್ಲ, ಸೃಷ್ಟಿಯಾದ್ರು ಮಧುರಾನುಭವ ನೀಡೋಲ್ಲ .,

ಮಾನವನ ಬದುಕು ಇಗೂ ಆಗುತ್ತೆ ., ಅವನ ಆಲೋಚನೆಗಳು ಅವನ ನೆಮ್ಮದಿ ಹಾಳುಗೆಡವುತ್ತವೆ, ಮಾನವ ಜೀವನದಲ್ಲಿ ಸಾಮರಸ್ಯ ಕಳೆದುಕೊಳ್ತಾನೆ ಅಂತ ಡಿ.ವಿ.ಜಿ ಯವರಿಗೆ ಹೊಳೆದಿತ್ತಾ ? ಅವರನ್ನ ಸರಿದಾರಿಯಲ್ಲಿ ನೆಡೆಸಲೆಂದೇ ಅವರು ಇಂತ ಸಾಲುಗಳನ್ನ ತಮ್ಮ ಕಗ್ಗದ ಮೂಲಕ ಚಿತ್ರಿಸಿದ್ರ ?

ಉತ್ತರ ನೀಡೋಕೆ ಅವರಿಲ್ಲ ., ಆದ್ರೆ ಅವರು ರಚಿಸಿರುವ ಕಗ್ಗಗಳನ್ನ ಓದಿದರೆ ನಿಜ ಅನ್ನಿಸುತ್ತೆ .,


ಸ್ವಾರ್ತ ಸಾಧನೆಯಲ್ಲಿ ಬೇರೆಯವರ ಬಾಳು ನರಕವಾಗಿಸುತ್ತಿರುವ ಇಂದಿನ ಯಾಂತ್ರಿಕ ಮಾನವ ., ಮುಂದಿನದಿನಗಳಲ್ಲಾದರು ಇಂತ ಮಹಾತ್ಮರ ಹಿತನುಡಿಗಳನ್ನ ಜೀವನದಲ್ಲಿ ಅಳವಡಿಸಿಕೊಳ್ತಾನಾ? ., ಮುಂದಿನವರ ಬಾಳ ಬೆಳ್ಗತಾನಾ? ಕಾದು ನೊಡಬೇಕಿದೆ !!





ಸಿಹಿ ಹನಿ :

ಆತ್ಮಾಭಿಮಾನ/ಆತ್ಮಸಂತೃಪ್ತಿ ಬೆಳಸಿಕೊಳ್ಳಿ ., ಜೊತೆಗೊಂದಿಸ್ಟು ಪ್ರೀತಿ/ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಿ .ಇತಿಂಸ್ಟೇ ಸಾಕು ನಮ್ಮ ಬದುಕು ಸಾರ್ತಕವೆನಿಸಲು !! ., ನಮ್ಮ ಬದುಕು ಹಸನಾಗಲು !!.,


Friday, July 10, 2009

ದೇವರೂ ಎನಿಸಿಕೊಂಡಿರುವ ಆ Invisible Legendಗೆ !!! ನಾಲ್ಕು ಪ್ರಶ್ನೆಗಳು

ಪ್ರತಿ ಕಷ್ಟದ ಕ್ಷಣಗಳನ್ನ
ಪ್ರೀತಿಯಿಂದಲೇ ಸ್ವೀಕರಿಸುತ್ತಿರುವರು .,
ಪ್ರತಿ ನೋವನ್ನು ತಂತಾವೇ ನುಂಗಿಕೊಳ್ಳುತ್ತಿರುವರು
ಎಲ್ಲವೂ ನಿನ್ನ ನಡೆ.., ಎಲ್ಲವೂ ನಿನ್ನ ಲೀಲೆ ., ಎನ್ನುತ್ತಿರುವರು !!
ನಿನ್ನನ್ನೇ ಜಗದೋದ್ದಾರಕನೆನ್ನುತಿಹರು !!
ಇವೆಲ್ಲವಕ್ಕೂ ಅರ್ಥವುಂಟೇ ???
ಅವರ ನಂಬಿಕೆಗೆ ನಿನ್ನಲ್ಲಿ ಬೆಲೆಯುಂಟೆ ????



ಕಾಣುವ ಪ್ರತಿಯೊಂದನ್ನ
ಪರೀಕ್ಷಿಸಿ ನಂಬುವ ಮಾನವ !!
ಕಾಣದ ನಿನ್ನ ಅದೇಗೆ
ನಂಬುವನೋ / ನಂಬಿಹನೋ ??



ಆಸೆ ಕನಸುಗಳ ಜೊತೆಗೊಂದಿಸ್ಟು
ಆಶಾಭಾವನೆಗಳು ., ಇಷ್ಟು ಸಾಕೆ ?
ಮಾನವನ ಬದುಕು ಹಸನಾಗಲು ?
ಅವನ ಬದುಕು ಸಾರ್ಥಕವೆನಿಸಲು ??




ಎಲ್ಲವನ್ನೂ ಕೊಟ್ಟಾಗೆ ಮಾಡಿ
ಬಾಳ ಬೆಳಗುತ್ತಿಯ .. ?
ಅವೆಲ್ಲವಕ್ಕಿಂತ ಮಿಗಿಲಾದ ಆಸೆಕೊಟ್ಟು
ಬಾಳ ಹಿಂಡುತ್ತಿಯಾ ., ?



ಹೊಟ್ಟೆಗೆ ಹಿಟ್ಟು,ಕಣ್ಣಿಗೆ ನಿದ್ದೆ ,ಮನಸಿಗೆ ನೆಮ್ಮದಿ
ಇಷ್ಟು ಸಾಕಿತ್ತಲ್ಲವೇ ಮಾನವನ ಬಾಳ ಬೆಳಗಲು ??
ಹಣ , ಅಂತಸ್ತು,ಘನತೆ ಇಂತಿಸ್ಟು ಬೇಕಿತ್ತೆ ?
ಅವನ ಬಾಳ ಕತ್ತಲಾಗಿಸಲು.,



ಎಲ್ಲರನ್ನ ಒಟ್ಟಿಗಿಟ್ಟು ಪ್ರೀತಿ ಬೆಳೆಯ ಬಿಡುತ್ತೀಯ.,??
ಎಲ್ಲರನ್ನ ಒಟ್ಟಿಗಿಟ್ಟು ಬಾಳಕೊಂಡಿಗಳು ಬಿಗಿಗೊಳ್ಳಲು ಬಿಡುತ್ತೀಯ .,??
ಕೊನೆಗೊಂದು ದಿನ ಒಂದೊಂದು ಕೊಂಡಿ ಕಳಚಿ
ಬಾಳ ದಾರಿಯಲ್ಲಿ ಯಾರು ಇಲ್ಲದಾಗಿಸುತ್ತೀಯ ??

ಪ್ರತಿ ಹನಿಯನ್ನ ಪ್ರೀತಿಸುವವರು ಅವರು,ಅ ಹನಿಯನ್ನೇ ದೂಶಿಸುವವರು ನಾವು.,

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..
ಸುರಿವ ಒಲುಮೆಯಾ ಜಡಿ ಮಳೆಗೆ..ಪ್ರೀತಿ ಮೂsಡಿದೆ ........!!!!







ಇಂತ ಅದ್ಭುತ ಸಾಲುಗಳನ್ನ ಯೋಗರಾಜ್ ಭಟ್ರು ಒಬ್ಬ ಪಟ್ಟಣವಾಸಿಯಗಿದ್ದರೆ ಖಂಡಿತವಾಗಿಯೂ ಗೀಚುತ್ತಿರಲಿಲ್ಲ .,
ಅವರು ಹಳ್ಳಿಯ ವಾತಾವರಣದಲ್ಲಿ ಬೆಳೆದು ., ಅಲ್ಲಿನ ಸುಂದರ ಹಸಿರಿನ ಮಧ್ಯೆ ಓಡಾಡಿ .,
ಮುಂಗಾರು ಮಳೆಯಲ್ಲಿ ತೊಯ್ದು ., ಅದರ ಪ್ರತಿ ಹನಿಯನ್ನ ತಮ್ಮ ಮನಸಿನಲ್ಲಿ ತುಂಬಿಕೊಂಡು .,
ಮುಂದೊಂದು ದಿನ ಆ ಮಳೆಯ ಮಧುರ ಕ್ಷಣಗಳನ್ನ ಕನವರಿಸಿದಾಗಲೇ ಇಂತ ಸಾಲುಗಳು ಹುಟ್ಟಿರುವುದು .,

ಹೌದು ಒಬ್ಬ ಪಟ್ಟಣವಾಸಿಯಾದರೆ(ಹುಟ್ಟು ಪಟ್ಟಣಿಗ) ಮಳೆ ಬಂದ್ರೆ ಸಾಕು ಇದು ಯಾಕಾದ್ರು ಬರುತ್ತೆ ? !! ನಮ್ಮ ನಿತ್ಯ ಬದುಕನ್ನ ಹಾಳುಗೆಡವಲು ಎಂದು ಸದಾ ಶಪಿಸುತ್ತಲೇ ಇರ್ತಾನೆ ., ಅವನಿಗೆ ಅದರ ಮಹತ್ವ .,ಅದರ ಪ್ರಯೋಜನ ಬಗ್ಗೆ ತಿಳುವಳಿಕೆ ಕಡಿಮೆ ಅಂದ್ರು ತಪ್ಪಾಗಲಾರದು ., ಇನ್ನ ಅದರ ಪ್ರತಿ ಹನಿಯನ್ನ ಪ್ರೀತಿಸುವ ಗೋಜಿಗೆ ಹೋಗುವುದೆಲ್ಲಿ ?? !!.

ಅವನಿಗೆ ಮಳೆಯ ಮಹತ್ವ ತಿಳಿವುದು ಒಂದೋ ತಮ್ಮ ಮನೆ ಬಾಗಿಲಿಗೆ ಬಾರೋ ಕುಡಿಯೋ ನೀರು(ಬೆಂಗಳೂರಿಗೆ ಬರೋ ಕಾವೇರಿ) ನಿಂತಾಗ ., ಇಲ್ಲ ತಾನಿರೋ ಗಲ್ಲಿಯಲ್ಲಿ ಪವರ್ ಕಟ್/ ಲೋಡ್ ಶೆಡ್ಡಿಂಗ್ ಶುರು ಆದಾಗ ., ಇಲ್ಲವಾದಲ್ಲಿ ಪತ್ರಿಕೆಯಲ್ಲಿ ಹಾಗು ದೂರದರ್ಶನದಲ್ಲಿ ಬಿತ್ತರವಾಗುವ ಕೆಲ ಸುದ್ದಿಗಳತ್ತ (ಉದಾ : ಕೇವಲ ೧೧ ದಿನ ಮಾತ್ರ ವಿದ್ಯುತ್ ಉತ್ಪಾದನೆ ಸಾಧ್ಯ : ರಾಜ್ಯಕ್ಕೆ ಕಗ್ಗತ್ತಲೆಯ ಭೀತಿ ., ವರುಣ ದೇವನೇ ಗತಿ )ಕಣ್ಣು ಹಾಯಿಸಿದಾಗ.

ಮಳೆಗಾಲ ಶುರುವಾದ್ರೆ ಸಾಕು , ಮುsಲೆ ಸೇರಿದ್ದ ರೈನ್ ಕೊಟ್ ಹಾಗು ಛತ್ರಿಯನ್ನ ಹೊಂದಿಸಿ ಕುರ್ತಾನೆ ., ಮಳೆಯಲ್ಲಿ ನೆನದ್ರೆ ಶೀತ, ತಲೆ ನೋವು ಹೀಗೆ ಅನೇಕ ವ್ಯಾಧಿಗಳು ಹುಟ್ಟುತ್ವೆ ಅಂತ ಒ]ಷಧಿಗಳನ್ನ ರೆಡಿ ಮಾಡ್ಕೋತಾನೆ ., ಮಳೆಗಾಲ ಶುರುವಾಗೊದನ್ನ ಹಾಗು ಮುಗಿಯೋದನ್ನ ಸುದ್ದಿ ಮಾಧ್ಯಮಗಳ ಮುಖೇನ ತಿಳಿದುಕೊಳ್ತಾನೆ ., ಹೀಗೆ ಬದುಕೋ ಅವನಲ್ಲಿ ಮಳೆ ಬಗ್ಗೆ ಪ್ರೀತಿ ಹುಟ್ಟು ಅಂದ್ರೆ ಎಲ್ಲಿಂದ ತಾನೇ ಹುಟ್ಟುತ್ತೆ ?? ಅಲ್ವ !!! ??

ಅದೇ ಮಳೆ ಬಿದ್ರೆ ಸಾಕು ಹಿರಿ ಹಿರಿ ಹಿಗ್ಗುವ ನಮ್ಮ ಹಳ್ಳಿಯವ.ಅದರ ಹನಿಗಳು ಇನ್ನಷ್ಟು ರಭಸವಾಗಿ ಹಾಗೂ ಇನ್ನಷ್ಟು ದಪ್ಪನಾಗಿ ಬೀಳಲಿ ಎಂದು ಸದಾ ಬೇಡುವ .,


ಬಿಡದೇ ಸುರಿದರೂ ಬೇಸರಗೊಳ್ಳದೆ ಅದರ ಪ್ರತಿ ಹನಿಯನ್ನ ಪ್ರೀತಿಸುವ ., ಪೂಜಿಸುವ ., ನಮ್ಮ ಹಳ್ಳಿಯವ .






ಅವನಿಗೆ ಮಳೆಯೇ ಜೀವಾಳ ., ಅವನಿಗೆ ಮಳೆಯೇ ಎಲ್ಲ!!! ., ಅವನಿಗೆ ಮಳೆಗಾಲ ಯಾವಾಗ ಶುರುವಾಗುತ್ತೆ .,
ಆ ಕಾಲದಲ್ಲಿ ಎಷ್ಟು ಮಳೆ ಬಿಳುತ್ವೆ (ರೋಯಿಣಿ,ಭರಣಿ ಹೀಗೆ .,) ಯಾವ ಮಳೆ ಯಾವಾಗ ಹುಟ್ಟಿ ಯಾವಾಗ ಕೊನೆ ಆಗುತ್ತೆ !! ಹೊಸ ಮಳೆ ಯಾವಾಗ ಆರಂಭವಾಗುತ್ತೆ ಹೀಗೆ ಎಲ್ಲವನ್ನ ಸುದ್ದಿ ಮಾಧ್ಯಮಗಳಿಲ್ಲದೆ ತಿಳಿಯುವವ ., ಮಳೆಯನ್ನೇ ತನ್ನ ಒಂದು ಅಂಗವಾಗಿಸಿಕೊಂಡಿರುವ .,ಆ ಮಳೆಯನ್ನೇ ತನ್ನ ಪ್ರಾಣವಾಗಿಸಿಕೊಂಡಿರುವ .,

ಮಳೆ ಶುರುವಾದ್ರೆ ಸಾಕು ತಲೆ ಮೇಲೆ ಗೊಪ್ಪೆ(ಗೋಣಿ ಚೀಲ /ತಾಟು) ಹಾಕಿಕೊಂಡು ತನ್ನ ನಿತ್ಯ ಕಾರ್ಯದತ್ತ(ವ್ಯವಸಾಯದತ್ತ) ಹೆಜ್ಜೆ ಹಾಕ್ತಾನೆ , ಬೆಳಗಿನಿಂದ ಸಂಜೆವರೆಗೂ ಅದೇ ಮಳೆಯಲ್ಲಿ ಮಿಂದು ತನ್ನ ಅಸ್ಟು ಕೆಲಸವನ್ನ ಮುಗುಸ್ತಾನೆ., ರಾತ್ರಿ ಬೀಳೋ ಮಳೆಯನ್ನೂ ಹೆಂಡತಿ ಮಕ್ಕಳೊಂದಿಗೆ ಕೂತು ನೋಡಿ ಆನಂದ ಪಡ್ತಾನೆ ., ತನ್ನ ಮಕ್ಕಳಿಗೆ ಅದರ ಬಗ್ಗೆ ನೀತಿ ಪಾಠ ಹೇಳಿ ಆದರ್ಶ ಮೆರಿತಾನೆ ., ಮಕ್ಕಳೂ ಮಳೆಯನ್ನ ಪ್ರೀತಿಸಿ ., ಪೂಜಿಸುವಂತೆ ಮಾಡ್ತಾನೆ !!

ಹೀಗೆ ಮಳೆಯ ಪ್ರತಿ ಹನಿಯನ್ನ ಪ್ರೀತಿಸುವವರು ಅವರಾಗ್ತಾರೆ ., ಅ ಹನಿಯನ್ನೇ ದೂಶಿಸುವವರು ನಾವಾಗ್ತೇವೆ ...






ಸಿಹಿ ಹನಿ :


"ಬೇರೆಯವರಿಗೆ ಸಹಾಯ ಮಾಡಲಾಗದಿದ್ದರೂ ಅವರಿಗೆ ಕಷ್ಟ ಕೊಡಲೇಬಾರದು" !!
ಈ ಮಾತು ತಲತಲಾಂತರದಿಂದ ಬಂದದ್ದು ., ಈ ಮಾತನ್ನ ಮುಂದಿನ ತಲೆಮಾರಿಗೂ ಬಿಡಿ .,

ಮಳೆಯೇ ಹಳ್ಳಿಗನಿಗೆ ಜೀವಾಳ ., ಅದು ಸದಾ ಸುರಿಯಲು ಬಿಡಿ !! ಅದಕ್ಕಾಗಿ ಮರಗಳನ್ನ ಉಳಿಸಿ ., ಬೆಳಸಿ ., !!

ಸುರಿಯೋ ಮಳೆ ., ಅದನ್ನ ಪ್ರೀತಿಸುವ ಜೀವಕ್ಕೆ ಸಹಾಯ ಮಾಡಿ ., ಅದರ ನೆಮ್ಮದಿ ಬದುಕಿಗೆ ನೆರವಾಗಿ !!!