Monday, October 26, 2009

ಕಲಿಯುಗದಲ್ಲಿ "ಕನಸು"

ಏ ಕನಸೇ ..
ನಿನ್ನ ಒಳ -ಹೊರ ಮನಸ್ಸು
ಕಣ್ಮುಚ್ಚಿದಾಗಲೇ ಬಲು ಚಂದು
ಕಣ್ಣ ಬಿಟ್ಟರೆ ಸಾಕು
"ನೀ ಬಲು ದ್ವಂದ್ವ"



ಹುಟ್ಟಿದ ಮರುಗಳಿಗೆಯಿಂದ ನಮಗರಿವಿಲ್ಲದೆ
ಅಪ್ಪ - ಅಮ್ಮನ ಕನಸುಗಳ ಹೊತ್ತು ಬಾಳ ನೂಕುವೆವು ...
ಬುದ್ದಿ ಬಂದು ನಮ್ಮ ಬದುಕ ಸಾಗಿಸುವಾಗ
ಮಕ್ಕಳ ನಾಳಿನ ಕನಸುಗಳ ಹೊತ್ತು ಬಾಳ ದೂಡುವೆವು ...
ಕೊನೆಗೊಂದು ದಿನ !!!! ಸಾಕರಗೊಳ್ಳದ
ನಮಸ್ಟೂ ಕನಸುಗಳ ಸಾಕಾರಗೊಳಿಸಲು
ಮತ್ತೆ ಹುಟ್ಟಿ ಬರುವ ಕನಸ ಹೊತ್ತು ಮಣಲ್ಲಿ ಮಣ್ಣಾಗುವೆವು ....


ಕನಸೇ ಆಗೆ .,
ಧೋ ಎಂದು ಸುರಿಯೋ ಮಳೆಯ ಆಗೆ !!
ಬೇಡದಿದ್ದರೂ ಬಂದು ಮನಕೆ ತಂಪೆರೆಯುವುದು.
ಕೆಲವೊಮ್ಮೆ ಮಳೆಯು ಬದುಕ ದುಸ್ತರವಾಗಿಸುವಂತೆ .,
ಕನಸು ಮನದ ನೆಮ್ಮದಿ ಹಾಳುಗೆಡವುವುದು !!



ಚೆಲುವೆಯ ಚೆಂದುಟಿಯ ನಗು
ಹುಡುಗನ ಹಾಲ್ಗಡಲ ಮನಸಿನಲಿ
ಹೊಸದೊಂದು ಕನಸ ಹುಟ್ಟುಹಾಕುವುದು,
ಆ ನಗು ಮೊಗದಿ ಮಾಯವಾಗುವಸ್ಟರಲ್ಲೇ
ಹುಡುಗನ ಹಾಲ್ಗಡಲ ಮನಸ
ಕದಡಿ ಕೊಚ್ಚೆಯಾಗಿಸುವುದು.



ಕಾಣುವ ಪ್ರತಿಕನಸು ನನಸಾದರೆ
ಆ ಕನಸಿಗೆ ಬೆಲೆಯುಂಟೆ ??
ಇಡುವ ಪ್ರತಿ ಹೆಜ್ಜೆ ಸುಗಮವಾಗಿರಲು
ಆ ದಾರಿಗೆ ಬೆಲೆಯುಂಟೆ ??
ಪಟ್ಟರೂ ಕಷ್ಟವ ಪ್ರತಿಗಳಿಗೆ
ಅರೆ ಸುಖವೂ ದೊರೆಯದಿದ್ದರೆ
ಆ ಕಷ್ಟಕ್ಕೆ ಅರ್ಥವುಂಟೇ ??