Monday, November 24, 2008

ನನ್ನ ಮನದಾಳದ ಮಾತು .....ಆ ನನ್ನ ಗುರುವಿಗೆ


ನಿನ್ನ ನಗುವಲ್ಲಿ ನನ್ನ
ನಗುವ ನಾ ಮರೆತಿದ್ದೆ, ಅಂತೆ ನನ್ನ ಕನಸು ಹಾಗು ನನ್ನ ಜೀವನವನ್ನೂ ......
ಕೆಲ ಗೆಳೆಯರು ನೆನಪು ಮಾಡಿದ್ದುಂಟು " ಮಗನೆ ತುಂಬಾ ನಟಿಸಬೇಡ, ನಕ್ಕಂತೆ ಅಳಬೇಡ , ಮುಂದೊಂದು ದಿನ ನೀ ಒಬ್ಬನೇ ಕೂತು ಅಳಬೇಕಾಗುತದೆ " ಎಂದು ...
ಕೊನೆಗೂ ಅ ದಿನ ಬಂದು ಬಿಟ್ಟಿತೇ ......... ???





ನಿನ್ನ ನೆನದಾಗಲೆಲ್ಲ ನನಗೆ ನೋವಾಗುಹುದಿಲ್ಲ ಬದಲು ಹೆಮ್ಮೆ ಎನಿಸುತ್ತದೆ , ಏಕೆ ಗೊತ್ತೇ ??
"ನೀ ನನಗೆ ಜೀವನ/ಬದುಕು, ಸಮಾಜವೆಂದರೆ ಏನು ? ಎಂದು ತೋರಿದ ಗುರು'' ...
''ಗುರು ನೆನದೆರೆ ನೋವಿನ್ನೆಲ್ಲಿ .... ??? '' :) :)




ನಿನಗಿರುವ ಆಸೆ ಕನಸುಗಳು ನನಗೇಕಿಲ್ಲ.. ಇದ್ದಿದರೆ ನಾ ನಿನ್ನ ಅಪ್ಪ - ಅಮ್ಮನಿಗೆ ಆಗುತಿದ್ದೆನೇನೋ
'' Son - ಇನ್ - Law''


ನೀ ಯಾವಾಗಲು ಹೇಳುತಿದ್ದ ಮಾತು ನನಗಿನ್ನೂ ನೆನಪಿದೆ
"ಬೇರೆಯವರಿಗೆ ನೀತಿ ಪಾಠ ಹೇಳುವ ನೀನು ನಿನ್ನ ಜೀವನದಲ್ಲಿ ಅವುಗಳನ್ನ ಏಕೆ ಅಳವಡಿಸಿಕೊಳ್ಳುವುದಿಲ್ಲ"ಎಂದು ...
ನಾ ನಿನಗೂ ಜೀವನ ರೂಪಿಸಿಕೊಳ್ಳುವಲ್ಲಿ ನೀತಿ ಪಾಠ ಹೇಳಿದುಂಟು ..
ನನಗೆ ತಿಳಿದಿರುಹುದು '' ನಮ್ಮ ಜೀವನವೇ" ವರೆತು "ನನ್ನ ಜೀವನವಲ್ಲ "....
ಈಗ ಹೇಳು ಎಲ್ಲಿದೆ ನನ್ನ ಜೀವನ ?? :)



ಮಾತಾಗಲಿಲ್ಲ , ಕತೆಯಾಗಲಿಲ್ಲ ...
ಕಲ್ಪನೆಯ ಕನಸು ಹೊಂಗನಸಾಗಲಿಲ್ಲ ..
ಬದುಕಾಗಲಿಲ್ಲ , ಭರವಸೆಯಾಗಲಿಲ್ಲ ..
ನಿ ಎಂದಿಗೂ.. ನನ್ನವಳಾಗಲೇ ಇಲ್ಲ ..
ಆದರೂ "ಪ್ರೀತಿ" ಎಂಬ ಶಬ್ದ ಕೇಳಿದಾಗಲೆಲ್ಲ ,,
ನೆನಪಾಗಿ ಕಾಡುವೆಯಲ್ಲ....



ನನಗಿಂತ ಅ ಬಿಕ್ಷುಕನೆ ಎಷ್ಟೋ ಪಾಲು ಮೇಲೆ ..ಏಕೆ ಗೊತ್ತೇ ??
ಅವ ತಿಳಿದಿರದ ಯಾರದೋ ಮನೆ ಬಾಗಿಲ ಮುಂದೆ ನಿಂತು ಬಿಕ್ಷೆ ಬೇಡುತ್ತಾನೆ ,,
ನಾನು ತಿಳಿದಿರುವ ... ನಿನ್ನ ಮನದ ಬಾಗಿಲ ಮುಂದೆ ನಿಂತು ಪ್ರೀತಿ ಬೇಡಲು ಒದ್ದಾಡುತ್ತೇನೆ/ಒದ್ದಾಡುತ್ತಿದ್ದೇನೆ ...



ನನ್ನ ಜೀವನದ ಬವುದೊಡ್ಡ ಪಾಠಗಳು ....
ನನ್ನ ಅಪ್ಪ ಕಲಿಸಿದ್ದು .. ಜೀವನದಲ್ಲಿ ಎಷ್ಟು ಮಂದಿಯ ಪ್ರೀತಿಗಳಿಸಲು ಸಾದ್ಯವೋ ಅಸ್ಟೂಗಳಿಸು ...ನಿ ಕಲಿಸಿದ್ದು ........ ಒಂದಾ ಎರಡಾ ?? ,,, ಇಲ್ಲಿಯ ಪುಟ್ಟ ಜಾಗ ಸಾಲುವುದಿಲ್ಲ ,,,


ನಿನ್ನಿಂದ ಮೊದಮೊದಲು ನ ಬಯಸಿದ್ದು ಪ್ರೀತಿಯನ್ನೇ ...
ಆದರೆ ಕೊನೆಕೊನೆಗೆ ಬಯಸಿದ್ದು ಬರಿ ನಿನ್ನ ಸ್ನೇಹವನ್ನು ,,,
ನಾ ಅದಕ್ಕಾಗಿ ಅಂಗಲಾಚಿದ್ದೂ ಉಂಟು ... E - Mail ಕಳಿಸಿದ್ದೂ ಉಂಟು :) :) ..
ಏಕೆ ?? ನನಗೆ ಅ ಅರ್ಹತೆಯು ಇಲ್ಲವೇ ....



ನಿನಗೂ ನನಪ್ಪನಿಗೂ ಇರುವ ವತ್ಯಾಸವಿಸ್ಟೆ.....
ನನ್ನಪ್ಪ ಸಮಾಜಕ್ಕೆ ''ಜಾತಿಯ '' ವಿಚಾರದಲ್ಲಿ ಹೆದರುತ್ತಾರೆ ..

ನೀನು ಅದೇ ಸಮಾಜಕ್ಕೆ "Status" ವಿಚಾರದಲ್ಲಿ .... :)



ನನಗಾಗೆ ಬರೆದಿರಬೇಕು ''ಮುಸಂಜೆ ಮಾತಲ್ಲಿ " ಅ ಸಾಲುಗಳನ್ನ
'' ಏನಾಗಲಿ ಮುಂದೆ ಸಾಗು ನೀ ಬಯಸಿದ್ದೆಲ್ಲ ಸಿಗದು ಬಾಳಲಿ " ...
ಬಯಸಿದ್ದೆಲ್ಲ ಸಿಕ್ಕಿದ್ದರೆ ನಾನೇಕೆ ... Pharmacy ಕಂಪನಿಗಳನ್ನ ಉದ್ದಾರ ಮಾಡೋ ಕವಿ ಆಗುತ್ತಿದ್ದೆ ..... :) :)






ನನ್ನ ಜೀವನದ ಸ್ಥಿತಿಗೆ ತುಂಬಾ ಜನರಿದ್ದಾರೆ ... ತುಂಬಾ ಮಂದಿ ದಾರಿ ಹೊಕರೂ ಆಗಿದ್ದಾರೆ ...
ಆದರೆ ಕೊನಗೆ ಬಂದು ನಿಲ್ಲುವವರೂ ಯಾರು ಎಂದುಕೊಂಡಿರುವೆ ... ? ನೀನು ...? ಖಂಡಿತ ಅಲ್ಲ ....
ನನ್ನ ಜೀವನದ ಚಕ್ರ ನಿನ್ನ ಪ್ರೀತಿಯ ದಾರಿಯಲ್ಲಿ ''Puncture'' ಆಗುತಿದ್ದಾಗ .... ದಾರಿ ಬದಲಿಸಿದ ನನ್ನ ಗೆಳೆಯರು ... ಎಲ್ಲಿ ಹೋಗಿ ನಿಲ್ಲಬೇಕು ....





ನಮಗೂ ಆಸೆ ಕನಸುಗಳಿರುವಂತೆ ... ಅವರಿಗೂ ಇರುವುದ್ದಿಲವೇ ಗೆಳೆಯ ....
ಮನಸು ಮನಸು ಒಂದಾದಲ್ಲಿ ಮಾತ್ರ ನಮ್ಮ ಆಸೆ ಕನಸುಗಳಿಗೆ ಬೆಲೆ ,,,,,,,,
ಇಲ್ಲವಾದಲ್ಲಿ, ಬರಿ ನಮ್ಮ ಆಸೆ ಹಾಗು ಕನಸುಗಳಿಗೆ ಅಸ್ಟೆ " ಹೊಗೆ " :) :)




--
ಚಾರ್ಲಿ ............... ನೀ ನನ್ನ ಜೊತೆಗಿರು ಇಲ್ಲದಿರು .. ನನ್ನ ಜೀವನದ ಪ್ರತಿ ಸಾಧನೆ ನಿನಗೆ
ಅರ್ಪಣೆ