Monday, June 22, 2009

ಟಿಪ್ಪು ಸುಲ್ತಾನ್ !! .. ಹಾಗು ಅವನ ಬೆಂಗಳೂರಿನ "ಬೇಸಿಗೆ ಅರಮನೆ"



"ಟಿಪ್ಪು ಸುಲ್ತಾನ್" ಹೆಸರು ಕೇಳುತ್ತಲೇ ಎಲ್ಲರೂ ಓ ಅವರ ಬಗ್ಗೆ ಶಾಲಾ ದಿನಗಳಲ್ಲಿ ತುಂಬಾ ಓದಿದ್ದೇವೆ ಎಂದು ಉದ್ಗರಿಸುತ್ತಾರೆ ., ಈ ಸಾಲಿನಲ್ಲಿ ನಾನು ಸಹ ಇದ್ದೆ !! .,
ಆದರೆ ಬೆಂಗಳೂರಿನಲ್ಲಿರುವ ಅವರ ಬೇಸಿಗೆ ಅರಮನೆ ನೋಡಿದ ನಂತರವೇ ನನಗೆ ಅರಿವಿಗೆ ಬಂದದ್ದು ನಾ ಅವರ ಬಗ್ಗೆ ತಿಳಿದಿರುವುದು ಅಲ್ಪ ಮಾತ್ರ
(ಈ ಲೇಖನ ಓದಿ ಮುಗಿಸುವುದರಲ್ಲಿ ನಿಮಗೂ ಈ ಭಾವನೆ ಬರಬಹುದು ) .,

ಅಲ್ಲಿ ತಿಳಿದ , ಕಲೆ ಹಾಕಿದ ಕೆಲ ಮಾಹಿತಿಗಳು ನಿಮ್ಮ ಮುಂದೆ .,


ಟಿಪ್ಪುವಿನ ಘಟನೆಗಳ ಕಾಲ ಸೂಚಿ (Histroy)
-----------------------------------------


1.1750 - ದೇವನಹಳ್ಳಿಯಲ್ಲಿ ಫ್ಹಕ್ರುನ್ನಿಸ್ಸಾ ಮತ್ತು ಹೈದರ್ ಆಲಿ ದಂಪತಿಗಳಿಗೆ ಮಗನಾಗಿ ಜನನ
2.1767 - ತಂದೆ ಹೈದರ್ ಆಲಿ ಜೊತೆ ಮೊದಲ ಆಂಗ್ಲೋ - ಮೈಸೂರು ಯುದ್ಧದಲ್ಲಿ ಹೋರಾಡಿ ಆಂಗ್ಲರನ್ನು ಸೋಲಿಸಿದರು.
3.1780 - ಎರಡನೇ ಆಂಗ್ಲೋ - ಮೈಸೂರು ಯುದ್ಧದಲ್ಲಿ ತಂದೆ ಹೈದರ್ ಆಲಿ ಜೊತೆ ಸೇರಿ ಪೋಲಿಲುರ್ ಬಳಿ ಕರ್ನಲ್ ಬೇಯಲಿಯನ್ನು ಸೋಲಿಸಿದ್ದರು.
4. 1782 - ಚಿತ್ತೂರು ಮೊಕ್ಕಾಂ ಬಳಿ ತಂದೆ ಹೈದರ್ ಆಲಿಯ ಮರಣ
5. 1783 - ಮೇ ೪ ರಂದು ಬಿದನೂರಿನ ಸರಳ ಸಮಾರಂಭದಲ್ಲಿ ಮೈಸೂರ ಅರಸನಾಗಿ ಅಧಿಕಾರ ಸ್ವೀಕಾರ .,
6. 1784 - ಮಂಗಳೂರು ಒಪ್ಪಂದಕ್ಕೆ ಸಹಿ
7. 1790-92 - ಮೂರನೆಯ ಆಂಗ್ಲೋ - ಮೈಸೂರು ಯುದ್ಧದಲ್ಲಿ ಪರಾಜಯ ಹಾಗೂ ಶ್ರೀರಂಗಪಟ್ಟಣದ ಒಪ್ಪಂದಕ್ಕೆ ಸಹಿ
8. 1792 - ಲಾರ್ಡ್ ಕಾರ್ನ್ ವಾಲಿಸ್ ಸಾರಿದ ಶಾಂತಿ ಒಪ್ಪಂದಕ್ಕೆ ಸಹಿ .
ತಮ್ಮ ಇಬ್ಬರು ಮಕ್ಕಳನ್ನ (ಅಬ್ದುಲ್ ಖಾಲಿಖ್ ಮತ್ತು ಮ್ರುಜುಹುದ್ದೀನ್ ) ಆಂಗ್ಲರಿಗೆ ಒಪ್ಪಿಸಿದ
9. 1799 - ನಾಲ್ಕನೇ ಆಂಗ್ಲೋ - ಮೈಸೂರು ಯುದ್ಧದಲ್ಲಿ ಪರಾಜಯ
10. 1799 - ಮೇ ೪ ರಂದು ವೀರ ಮರಣ

ಇಂತಿಸ್ಟು ಅವನ ಚರಿತ್ರೆ .,

ಇನ್ನ ಅವನ ಚಾರಿತ್ರ್ಯದ ಬಗ್ಗೆ .......,


೧. ಪ್ರಜೆಗಳ ಆರ್ಥಿಕ ಹಿತರಕ್ಷಣೆ ಮತ್ತು ತನ್ನ ರಾಜ್ಯದ ಸಂಪನ್ಮೂಲಗಳ ಅಭಿವೃದ್ದಿ ಮತ್ತು ಪ್ರಗತಿ ಟಿಪ್ಪುವಿನ ಮುಖ್ಯ ಧ್ಯೇಯಗಳಾಗಿದ್ದವು.

೨. ಟಿಪ್ಪು ತನ್ನ ಸಕ್ರಿಯ ಕೃಷಿ ಕಾರ್ಯನೀತಿಯ ಮೂಲಕ ಮೈಸೂರಿನ ಬಹುಭಾಗ ಜಮೀನುಗಳನ್ನ ಆರ್ಥಿಕ ಸಂವೃದ್ದಿಗೆ ಒಳಪಡಿಸಿದ್ದನು.ಸ್ವಾರ್ತಿಗಳಾದ ಸಾಹುಕಾರನನ್ನ ತೆಗೆದು ಹಾಕಿ, ರಾಜ್ಯಕ್ಕೆ ನ್ಯಾಯವಾಗಿ ಸಲ್ಲ ತಕ್ಕ ಭಾಗವನ್ನು ನಿಗದಿಪಡಿಸ್ಸಿದ್ದನು.

೩. ಸುಗಂದಭರಿತ ಶ್ರೀಗಂಧದ ಮರಗಳನ್ನ ರಾಜ್ಯದ ಸ್ವಾಮ್ಯತಗೆ ತಂದವನು ಟಿಪ್ಪು .

೪. ಟಿಪ್ಪು ತೇಗದ ಮರದ ಬೆಳವಣಿಗೆಗೆ ಪ್ರೋತ್ಸಾಹ ನೀಡಿ ರಾಜ್ಯಕ್ಕೆ ಅದರ ಏಕಸ್ವಾಮ್ಯತೆ ತಂದನು.

೫. ಟಿಪ್ಪು ಟರ್ಕಿ,ಫ್ರಾನ್ಸ್,ಪರ್ಶಿಯಾ ಮತ್ತು ಆಫ್ಗನಿಸ್ತಾನ್ ರಾಜ್ಯಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದನು.ಈ ವ್ಯಾಪಾರ ಒಪ್ಪಂದಗಳ ಕಾರ್ಯನಿರ್ವಾಹಣೆಗಾಗಿ ವಾಣಿಜ್ಯ ರಾಯಭಾರಿ ಮತ್ತು ಪ್ರತಿನಿಧಿಗಳನ್ನ ನೇಮಿಸಿದ್ದನು. ವಿದೇಶಗಳಲ್ಲಿ ಕಾರ್ಖಾನೆಗಳನ್ನ ಸ್ಥಾಪಿಸಿ. ಸರಕು ಮಳಿಗೆಗಳನ್ನ ತೆರೆದು,ವ್ಯಾಪಾರ ಕೇಂದ್ರಗಳನ್ನ ಯಶಸ್ವಿಯಾಗಿ ನಡೆಸುವುದು ಅವರ ಜವಾಬ್ದಾರಿಯಾಗಿತ್ತು.

೬.ಮೈಸೂರಿನಲ್ಲಿ ಪ್ರಪ್ರಥಮವಾಗಿ ಹಿಪ್ಪನೇರಳೆ ಸಾಗುವಳಿ ಹಾಗು ರೇಷ್ಮೆ ಹುಳುಗಳ ಸಾಗಾಣಿಕೆ ಪ್ರಾರಂಭಿಸಿದ ಯಶಸ್ಸು ಟಿಪ್ಪುವಿನದ್ದು.

೭.ತೋಟಗಾರಿಕೆಗೆ ಟಿಪ್ಪುವಿನ ಕಾಣಿಕೆ ಗಮನಾರ್ಹವಾದುದ್ದು. ಹೈದರ್ ಆಲಿ ಆರಂಭಿಸಿದ ಲಾಲ್ ಬಾಗ್ ತೋಟವನ್ನ ಟಿಪ್ಪು ಬಹು ದಕ್ಷತೆಯಿಂದ ಪೋಶಿಸಿದ್ದ.,

೮.1797ರಲ್ಲಿ, ಶ್ರೀರಂಗಪಟ್ಟಣದ ಪಶ್ಚಿಮಕ್ಕೆ ಕೆಲವು ಕಿ.ಮಿ. ದೂರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ,ಎಪ್ಪತ್ತು ಅಡಿ ಎತ್ತರದ ಸೇತುವೆಯನ್ನ ನಿರ್ಮಿಸಿದ್ದು ಟಿಪ್ಪು.

೯.ಟಿಪ್ಪು ವ್ಯವಸಾಯವನ್ನ ಅಭಿವೃದ್ದಿ ಪಡಿಸಿ ವ್ಯಾಪಾರ ಮತ್ತು ಕೈಗಾರಿಕೊದ್ಯಮವನ್ನು ಪ್ರವರ್ತಿಸಿದ್ದನು. ರಸ್ತೆಗಳನ್ನು ನಿರ್ಮಿಸಿದ್ದನು.ಮಲಬಾರ್ ನ ರಸ್ತೆ ನಿರ್ಮಾಣದ ಕತೃ ಟಿಪ್ಪು.

೧೦. ಟಿಪ್ಪು ಅಪೂರ್ವ ಅಂಚೆ ಮತ್ತು ಸುದ್ದಿ ಇಲಾಖೆಗಳನ್ನ ಸ್ಥಾಪಿಸಿ, ಅಂಚೆ ರನ್ನರ್ ಗಳನ್ನ ಮತ್ತು ಗೂಢಚಾರರನ್ನು ನೇಮಿಸಿದ್ದನು. ಈ ರೀತಿ ನೇಮಿಸಲ್ಪಟ್ಟವರಲ್ಲಿ ಬೇಹುಗಾರರು ಒಬ್ಬರು. ಸಂದೇಶಗಳನ್ನು ನೇರವಾಗಿ ತಲುಪಿಸುವುದು, ಇತರ ಅಧಿಕಾರಿಗಳ ಮೇಲೆ ನಿಗಾವಹಿಸುವುದು, ಶತ್ರುಗಳ ಚಲನವಲನಗಳನ್ನ ಗಮನಿಸಿ ಸೂಕ್ತ ಸಲಹೆಗಳನ್ನ ನೀಡುವುದು ಅವರ ಮುಖ್ಯ ಕೆಲಸವಾಗಿತ್ತು .,

೧೧. ಫ್ರೆಂಚ್ ನ ರಾಜಕಾರಣ ಸಂಸ್ಥೆಯ ಜಕೊಬಿಯನ್ ಕ್ಲಬ್ ಗೆ ಗೌರವ ಸದಸ್ಯನಾದ ಭಾರತದ ಪ್ರಥಮ ವ್ಯಕ್ತಿ ಟಿಪ್ಪು


ಟಿಪ್ಪು ಮತ್ತು ರಾಕೆಟ್ ತಂತ್ರಜ್ಞಾನ ....,

ತಂತ್ರೋದ್ಯಮದಲ್ಲಿ ಅತ್ಯಾಸಕ್ತನಾಗಿದ್ದ ಟಿಪ್ಪು ಸುಲ್ತಾನ್ ., ತನ್ನ ತಂದೆ ಹೈದರ್ ಆಲಿ ಪರಿಚಯಿಸಿದ ಬಾಣ ಬಿರುಸುಗಳ ತಯಾರಿಕೆಯನ್ನ ಉತ್ತೇಜಿಸಿ ಪ್ರವರ್ತಿಸಿದ್ದರು. ಅಧಿಕಾರಕ್ಕೆ ಬಂದ ನಂತರ, ಟಿಪ್ಪು ತನ್ನ ಬಾಣ ಬಿರುಸುಗಳ ಸೈನ್ಯ ಸಂಖ್ಯೆಯನ್ನ ೫೦೦೦ಕ್ಕೆ ಹೆಚ್ಚಿಸಿದ್ದನು. ಟಿಪ್ಪು ಕೈಗೊಂಡ ವಿವಿಧ ಯುದ್ದಗಳಲ್ಲಿ ಈ ಬಾಣ ಬಿರುಸುಗಳನ್ನ ಅತ್ಯಂತ ಪರಿಣಾಮಕಾರಿಯಾಗಿ ಬಳಸಲಾಗುತ್ತಿತ್ತು. ಈ ಬಾಣ ಬಿರುಸುಗಳ ನಿಪುಣರು,ಗುರಿಯ ದೂರ ಮತ್ತು ಬಾಣಗಳ ಗಾತ್ರವನ್ನ ಆಧರಿಸಿ, ಗಾಲಿಗಾಡಿಗಳ ಬಳೆಕೆಯಿಂದ, ಬಾಣಗಳ ಕೊನಗಳನ್ನ ಸರಿಹೊಂದಿಸುವ ಸಾಮರ್ಥ್ಯ
ಪಡೆದಿದ್ದರು. ಈ ಆಕಾಶ ಬಾಣಗಳ ಗುರಿ ೨.೪ ಕಿ ಮಿ ದೂರವಿದ್ದು ಅವುಗಳ ಹೊದಿಕೆಗೆ ಕಬ್ಬಿಣ ಬಳಸಿದ್ದರಿಂದ ಅವು ಆಗಿನ ಕಾಲಕ್ಕೆ ಅತ್ಯುನ್ನತ ಮಟ್ಟದ ಕಾರ್ಯವೆಂದು ಪ್ರಸಿದ್ದಿ ಪಡೆದಿತ್ತು.

ಈ ಕಾರ್ಯದ ಬಗ್ಗೆ ನಮ್ಮ ಡಾ||ಎ.ಪಿ.ಜೆ.ಅಬ್ದುಲ್ ಕಲಾಂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ., ಲಂಡನ್ ನ ವೂಲ್ ವಿಚ್ ಮ್ಯೂಸಿಯಂನಲ್ಲಿ "ಭಾರತದ ವಾರ್ ರಾಕೆಟ್ " ಎಂಬ ತಲೆಬರಹದ ಅಡಿಯಲ್ಲಿ ಇದರ ವಿವರಗಳನ್ನ ದಾಖಲಿಸಿದ್ದಾರೆ .,ಇದು ನಮಗೆ ಹೆಮ್ಮೆಯ ವಿಷಯ ಎಂದಿದ್ದಾರೆ.,





ಟಿಪ್ಪುವಿನ ಬಗ್ಗೆ ತಿಳಿಯಲೇಬೇಕಾದ ಕೆಲ ಮುಖ್ಯ ವಿಚಾರಗಳು .,

೧. ದಕ್ಷಿಣದ ದಿಂಡಿಗಲ್ ನಿಂದ ಉತ್ತರದ ಧಾರವಾಡದ ವರಗೆ ಹಾಗು ಪಶ್ಚಿಮದಲ್ಲಿ ಕೊಂಕಣದ ಕರಾವಳಿಯಿಂದ ಪೂರ್ವದಲ್ಲಿ ಬಳ್ಳಾರಿ ಮತ್ತು ಕರ್ನೂಲ್ (ಆಂದ್ರ) ಬಯಲು ಸೀಮೆವರೆಗೆ ಅವನ ಸಾಮ್ರಾಜ್ಯ ವ್ಯಾಪಿಸಿತ್ತು.,

೨. ಲಂಚ ರುಶುವತ್ತುಗಳನ್ನ ತಡೆಗಟ್ಟಲು ಅಧಿಕಾರಿಗಳು ಸೇವೆಗೆ ಸೇರುವಾಗ ತಮ್ಮ ಆಸ್ತಿ-ಪಾಸ್ತಿಗಳನ್ನ ಗೊಷಿಸುವಂತೆ ಒತ್ತಾಯಿಸುತ್ತಿದ್ದ., (Asset Declaration) (ಇದು ಸರಿಯಾಗಿ ಮುಂದುವರೆದಿದ್ದಲ್ಲಿ "ಬ್ರಷ್ಟಾಚಾರ" ಎಂಬ ಪದ ನಮಗೆ ತಿಳಿಯುತ್ತಲೇ ಇರಲಿಲ್ಲ ).

೩. "Tippus Tiger Organ"



ಟಿಪ್ಪು ಕುತೂಹಲ ಯಾಂತ್ರಿಕ ಆಟಿಕೆಯೊಂದನ್ನ ಹೊಂದಿದ್ದ., ಹುಲಿಯ ಪ್ರತಿಕೃತಿ ಬ್ರಿಟಿಷ್ ಅಧಿಕಾರಿಯೊಬ್ಬನ ಮೇಲೆ ಧಾಳಿ ನಡೆಸುತ್ತಿರುವ ದೃಶ್ಯವನ್ನ ಅದು ಪ್ರದಿನಿಧಿಸುತ್ತದೆ ., ಈ ಪ್ರತಿಕೃತಿ ಲಂಡನ್ ವಿಕ್ಟೋರಿಯ ಮತ್ತು ಆಲ್ಬರ್ಟ್ ಮ್ಯೂಸಿಯಂ ನಲ್ಲಿ ಅತ್ಯಮೂಲ್ಯ ಸಂಗ್ರಹವೆನಿಸಿದೆ .,



೪. ಹುಲಿಯ ಪಟ್ಟೆಯನ್ನ ಟಿಪ್ಪು ತನ್ನ ರಾಜ ಚಿಹ್ನೆ ಹಾಗು ಲಾಂಛನವಾಗಿ ಗುರುತಿಸಿದ., ಈ ಚಿಹ್ನೆ ಮೈಸೂರ ಹುಲಿ ಎಂದು ಪ್ರಸಿದ್ಧನಾದ ಟಿಪ್ಪುವಿನ ಸಂಕೆತವಾಗಿತು., ತನ್ನ ಕನಸು ಮನಸುಗಳಲ್ಲೂ ಆತ ಹುಲಿಯ ಸಂಗಡವೇ ಇರುತ್ತಿದ್ದ ., ಹುಲಿಯ ಛಾಯೆ ಅವನ ಮನಸಿನಲ್ಲಿ ಎಷ್ಟರಮಟ್ಟಿಗೆ ಬೇರೂರಿತೆಂದರೆ ಫಿರಂಗಿ,ಬಂದೂಕು, ವಸ್ತ್ರ ಹಾಗು ಬಾವುಟಗಳ ಮೇಲೆ ಹುಲಿ ಚಿಹ್ನೆ ಚಿತ್ರಿತವಾಗುತ್ತಿತ್ತು ., ಇದನ್ನ ಅರಮನೆಯ ಅಲಂಕಾರದಲ್ಲಿಯು ಬಳಸಲಾಗುತ್ತಿತ್ತು . ಹುಲಿ , ಚಿರತೆಗಳನ್ನ ಅರಮನೆಯಲ್ಲಿ ಸರಪಳಿಯಿಂದ ಕಟ್ಟಿಹಾಕಲಾಗುತ್ತಿತ್ತು ಹಾಗು ಹುಲಿ ಬೇಟೆ ಅವನ ಮೆಚ್ಚಿನ ಕ್ರೀಡೆಯಾಗಿತ್ತು .,



ಇನ್ನ ಅವನ "ಬೆಂಗಳೂರಿನ ಬೇಸಿಗೆ ಅರಮನೆ" ಬಗ್ಗೆ .....



ಈ ಅರಮನೆ ೧೭೮೧ರಲ್ಲಿ ಹೈದರ್ ಆಲಿ ಆರಂಭಿಸಿದ ., ಆದರೆ ದಶಕದ ನಂತರ ಟಿಪ್ಪುವಿನಿಂದ ಅದು ಪೂರ್ಣಗೊಂಡಿತು .,
ಬೇಸಿಗೆಯ ತಾಣವಾಗಿಸುವುದಲ್ಲದೆ ಈ ಅರಮನೆಯ ನಿರ್ಮಾಣದ ಉದ್ದೇಶ ಆಡಳಿತ ಹಾಗೂ ದರ್ಬಾರ್ ಗೆ ಸಂಭಂದಪಟ್ಟ ಕಾರ್ಯಗಳನ್ನ ನಿರ್ವಯಿಸುವುದು ಸಹ ಆಗಿತ್ತು .,


ಅರಮನೆಯು ೧೭ ನೇ ಶತಮಾನದಲ್ಲಿ ೧ ನೇ ಚಿಕ್ಕದೇವರಾಜ ಒಡೆಯರ್ ರವರಿಂದ ನಿರ್ಮಿತವಾದ ಮಣ್ಣಿನ ಕೋಟೆಯಿಂದ ಸುತ್ತುವರೆದಿತ್ತು .,ಆದ್ದರಿಂದ ಮರಾಠರು ಕೊಳ್ಳೆ ಹೊಡೆಯದಂತೆ ಬೆಂಗಳೂರು ಸುರಕ್ಷಿತವಾಗಿತ್ತು ., ಇದು ಟಿಪ್ಪುವಿನ ಮರಣದ ನಂತರ ಆಂಗ್ಲರ ಕೈ ಸೇರಿ ., ಅನಂತರ ರಾಜವಂಶದ ಒಡೆಯರ ವಶಕ್ಕೆ ಬಂತು .
----------------------------------------------$$$$$-------------------------------------------

'' ಇಂತ ಇತಿಹಾಸ ಉಳ್ಳ ಕಟ್ಟಡವನ್ನ ಸರ್ಕಾರ ನಿರ್ಲಕ್ಷಿಸಿತ್ತು ., ಅದರ ಸಂರಕ್ಷಣೆ ಬಗ್ಗೆ ದಿವ್ಯ ನಿರ್ಲಕ್ಷ ತೋರಿತ್ತು ., ಕೆಲ ತಿಂಗಳುಗಳ ಹಿಂದೆ ಪತ್ರಿಕೆಗಳಲ್ಲಿ ಇದರ ಬಗ್ಗೆ ತಿಳಿಸಿದಾಗ ಹೆಚ್ಚೆತ್ತ ಸರಕಾರ ಅದನ್ನ ಪೋಷಿಸುವ ಕಾರ್ಯಕ್ಕೆ ಕೈ ಹಾಕಿದೆ ., ತಕ್ಕ ಮಟ್ಟಿಗೆ ಅದರ ಪೋಷಣೆ ನಡೆದಿದೆ ., ಇನ್ನ ಅಭಿರುದ್ದಿ ಕಾರ್ಯಗಳು ಅಲ್ಲಿ ನಡೆಯಬೇಕಿದೆ '' .,


ಅರಮನೆ ವೀಕ್ಷಣೆಗೆ :-
ಭಾರತೀಯರಿಗೆ - ೫ ರೂ ಶುಲ್ಕ ನಿಗದಿಪಡಿಸಲಾಗಿದೆ
ನ.ರ.ಹೈ ಗೆ - ೧೦೦ ರೂ ಶುಲ್ಕ ನಿಗದಿಪಡಿಸಲಾಗಿದೆ (ಇದು ಮಹಾ ಮೋಸವೇ ಸರಿ., ನೀವು ಅಲ್ಲಿಗೆ ಹೋಗಿ ಬಂದರೆ ನೀವೇ ಉದ್ಗರಿಸುವಿರಿ "ಇದು ಮಹಾ ಮೋಸವೇ ಅಂತ" ).,


ಇತಿಹಾಸ ಬೇಕು ., ಇತಿಹಾಸ ನಿರ್ಮಿಸೋಕೆ .,
ಇತಿಹಾಸ ಬೇಕು ., ಒಳ್ಳೆ ವಿಚಾರಗಳನ್ನ ತಿಳಿದು ಸಾಧನೆ ಎಡೆ ಹೆಜ್ಜೆ ಇಡೋಕೆ .,
ಇತಿಹಾಸ ಬೇಕು ., ನಮ್ಮ ಬಗ್ಗೆ ನಾವು ಹೆಮ್ಮೆ ಪಡೋಕೆ ., ಗರ್ವ ಪಡೋಕೆ .,

ಇತಿಹಾಸ ಬೇಕು ., ನಮನ್ನ ನಾವು ತಿದ್ದಿಕೊಳೋಕ್ಕೆ.,
ಇತಿಹಾಸ ಬೇಕು ., ನಮ್ಮ ಮಕ್ಕಳ/ ನಮ್ಮ ಮುಂದಿನವರ ಬಾಳ ಬೆಳಗೋಕೆ .,


ಇತಿಹಾಸ ತಿಳಿಯಿರಿ ಹಾಗೂ ತಿಳಿಸಿರಿ ., ಬಿಡುವಿದ್ದಾಗ ನಿಮ್ಮ ಸುತ್ತ-ಮುತ್ತ ಇರೋ ಇಂತ ಸ್ಮಾರಕಗಳನ್ನ ವೀಕ್ಷಿಸಿ ., ಅದನ್ನ ಸಂರಕ್ಷಿಸಲು ಸಹಕರಿಸಿ ಎಂದು ತಿಳಿಸುತ್ತ .,


ನಿಮ್ಮ ನೆಲ್ಮೆಯ
ಚಾರ್ಲಿ .,





Tuesday, June 9, 2009

ನನ್ನ ಬದುಕಿನ ಪ್ರತಿ ಹೆಜ್ಜೆಯನ್ನ ತಿದ್ದಿ ತೀಡಿದ(ತೀಡುತ್ತಿರುವ) ನನ್ನ ಮುದ್ದು ಗೆಳೆಯರಿಗೆ., ಹಾಗು ಕೆಲ ಗೆಳತಿಯರಿಗೆ .,

ನಾ ಈ " ಬ್ಲಾಗ್ ದುನಿಯಾಗೆ " ಕಾಲಿಟ್ಟು ಜೂನ್ 17ಕ್ಕೆ ಸರಿ ಸುಮಾರು ಒಂದು ವರ್ಷ .,


ಈ ಬ್ಲಾಗ್ ದುನಿಯಾಗೆ ಕಾಲಿಟ್ಟಿದ್ದು ನನ್ನ ಗೆಳೆಯ DPಯ ಬ್ಲಾಗ್ ನೋಡಿ ., ಅವನ ಕೆಲ ಲೇಖನಗಳಿಂದ Inspire ಆಗಿ .,ಆದರೆ ನಾ ಗೀಚಿದ್ದು ಮಾತ್ರ ಶೂನ್ಯ !!!

ಪ್ರೀತಿಯ ಹಿಂದೆ ಬಿದ್ದಿದ್ದ ನನ್ನ ಮನಸ್ಸು ., ಸದಾ ಅದರ ಅಲೆಯಲ್ಲೇ ತೇಲುತ್ತಿದ್ದ ನನ್ನ ಆಲೋಚೆನಗಳು ., ಹೀಗಿರುವಾಗಲೇ ಗೀಚಲು ಕೂತು ಬರಿ "ಪ್ರೀತಿ" ಅದರ ಜೊತೆಗಿರುವ "ಭಾವನೆಗಳಲ್ಲೇ" ಮುಳುಗಿ ಹೋಗುತ್ತಿದ್ದೆ .,
ಅಪ್ಪಿ-ತಪ್ಪಿ ಎಲ್ಲೋ ಒಂದು ಘಟನೆಯೋ ., ಒಂದು ನೋವೂ ...,ಆಳವಾಗಿ ನನ್ನ ಮನಸಲ್ಲಿ ನೆಟ್ಟಲ್ಲಿ ಅದರ ಬಗ್ಗೆ ಗೀಚಿ ಒಂದು ಉತ್ತಮ ಲೇಖನವೋ / ಕವಿತೆಯೋ ಆಗಿಸಿರುವೆ ., ಮಿಕ್ಕಂತೆ ನಾನು , ನನ್ನ ಕೊರಗುವ ಮನಸ್ಸು ., ಅದರಿಂದ ಹೊರಬಂದ "ಸದಾ ಅಳುವ ನನ್ನ ಕವಿತೆಗಳು/ ಕವನಗಳು".,

ಹೀಗೆ ನನ್ನ ಭಾವನೆಗಳನ್ನ ಹೊರಹಾಕಿದಾಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು ., ಕೆಲವರು ಹೊಗಳಿದರು ., ತುಂಬಾ ಮಂದಿ ಉಗಿದರು ., ಇನ್ನ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ತುಂಬಾ ನೀತಿ ಪಾಠ ಹೇಳಿದರು ..
ಕೆಲವರ ಪ್ರತಿಕ್ರಿಯೆಗಳು, ಕೆಲವರ ಹಿತನುಡಿಗಳು ನನ್ನ ಮನಸಿಗೆ ತುಂಬಾ ಆಳವಾಗಿ ನಾಟಿ ., ನನ್ನನ್ನ ಆಲೋಚನೆಗೆ ದೂಡಿದವು .,

ಪ್ರತಿ ಗಳಿಗೆಗೆ ಬದಲಾಗೋ ಮನಸುಗಳು, ಪ್ರತಿ ದಿನವೂ ಹೊಸ ಸಾಧನೆಗಳು., ಅಂತೇ ಪ್ರತಿ ದಿನವೂ ಕ್ರೂರ ಘಟನಾವಳಿಗಳು .,

ಲೋಕದಲ್ಲಿ ಹಿಗಿಂತಿರುವಾಗ ., ನನ್ನಲ್ಲೂ ಹೊಸತನ, ನನ್ನಲ್ಲೂ ಬದಲಾವಣೆಗಳು ದಿನದಿಂದ ದಿನಕ್ಕೆ ಆಗಲೇಬೇಕಲ್ಲವೇ ... ??

ಖಂಡಿತವಾಗಿಯುs ನನ್ನಲ್ಲೂ ಬದಲಾವಣೆಗಳಾಗಿವೆ ., ನನ್ನಲ್ಲೂ ಹೊಸತನ ., ಹೊಸ ಕನಸುಗಳು ಹಾಗೆ ಹೊಸ ಸವಾಲುಗಳ ಚಕ್ರವ್ಯೂಹ ನಿರ್ಮಾಣವಾಗಿದೆ .,


ಒಳಗಿರುವ ಎಲ್ಲವನ್ನೂ ಹೊರಹಾಕಿ ., ನಿಮ್ಮ ಆಶಯದಂತೆ ಒಂದು ಉತ್ತಮ ಮಾರ್ಗದಲ್ಲಿ ನಡೆಯಬೇಕು ., ಒಂದು ಉತ್ತಮ ಕಾರ್ಯದತ್ತ ಮುನ್ನುಗ್ಗಲೆಂದೇ ಈ ಮೇಲಿನ ಪೀಠಿಕೆ .,


ಹೆಣ್ಣು ಮಕ್ಕಳಿಲ್ಲ ಎಂದು ಸದಾ ಕೊರಿಗಿಕೊಂಡೆ ತಮ್ಮ ಸರ್ವಸ್ವವನ್ನೂ ನಮ್ಮ ವಿದ್ಯಾಭ್ಯಾಸಕ್ಕಾಗಿ, ನಮ್ಮ ಸುಂದರ ನಾಳೆಗಾಗಿ ದಾರೆಯೆರದ ಅ ನನ್ನ ತಂದೆ-ತಾಯಿಗೆ ಸಮನಾದ ಹಾಗೂ ಅಣ್ಣ ಯಾಕಾದರೂ ಇದ್ದಾನೆ, ಅವನಿಗೇ ಮೊದಲ ಆದ್ಯತೆ, ಅವನು ಉಪಯೋಗಿಸಿಬಿಟ್ಟ ಎಲ್ಲವೂ ನನಗೆ ಬರುತ್ತೆ ನಾ ಸದಾ "Second Hand" :) ಎಂದು ತಂತಾನೇ ದೂಶಿಸಿಕೊಳ್ಳುವ, ಸದಾ ನನ್ನ "ಕರಿಯ" ಎಂದೇ ಉದ್ಗರಿಸುವ ಆ ನನ್ನ ಮುದ್ದು ತಮ್ಮನಸ್ಟೇ ಪ್ರೀಯರಾದ ಓ ನನ್ನ ಗೆಳೆಯರೇ/ಕೆಲ ಗೆಳತಿಯರೇ !!!

ಹುಟ್ಟಿದ್ದು ಅಮ್ಮನ ಮಡಿಲಲ್ಲೇ ., ನನ್ನಪ್ಪನ ಊರಲ್ಲೇ ., ಆದರೆ ಬೆಳದದ್ದು, ಓದಿದ್ದು ಮಾತ್ರ ನನ್ನ ದೊಡ್ಡಮ್ಮನ ಮನೆ ಅಂಗಳದಲ್ಲಿ ., ಬೆಳೆ ಬೆಳೆಯುತ್ತಾ ವಿದ್ಯಾಭ್ಯಾಸ ನಿಮಿತ್ತ ಅಲ್ಲಿಂದಲೇ ಬೇರೆ ಕಡೆ ಹೋಗಿದ್ದೆ ಹೆಚ್ಚು .,
ಹೀಗೆ ಅಪ್ಪ-ಅಮ್ಮನಿದ್ದ ದೂರವೇ ಇದ್ದ (Almost not Completely) ನನಗೆ, ಹೋದಲೆಲ್ಲ ಸಿಕ್ಕಿದ್ದು ನಿಮ್ಮಂತ ದೊಡ್ಡ ಗೆಳೆಯ-ಗೆಳತಿಯರ ದಂಡು .,
ಎಲ್ಲರಿಗೂ ತಿಳಿದಂತೆ School Days ಹಾಗು Degree Friends ಅಸ್ಟೇ ನಮ್ಮ Life ಅಲ್ಲಿ ಸ್ವಲ್ಪ Settled :) ಮತ್ತೆ Best Friends ಆಗೋದು ., :) ನನ್ನ ಬಾಳು ಇದಕ್ಕೆ ಬಿನ್ನವೇನಲ್ಲ !!

ನನ್ನ ಜೀವನದ ಈಗಿನ ಸ್ಥಿತಿಗೆ ನನ್ನ ತಂದೆ-ತಾಯಿ,ಕೆಲ ಬಂಧುಗಳು,ನನ್ನ ಇಬ್ಬರು ತಂಗಿಯರು(Smitha-Cousin Sis, Lavanya - Rental Sis) :) ಹಾಗೆ ನಿಮ್ಮಂತ ನೂರಾರು ಗೆಳೆಯರು,ಅಂತೇ "ಅ ಹುಡುಗಿಯ" Silenceನ ಸಂಗವಿದೆ .,
ನನ್ನ ಈ ಕ್ಷಣದ ಬದುಕಲ್ಲಿ ಎಲ್ಲಾ ಇದೆ., ನ ಬಯಸಿದ ಪ್ರೀತಿ ಬಿಟ್ಟು !!!., ಆದರೂ ಬೇಜಾರಿಲ್ಲ, ಆ ಪ್ರೀತಿ ಕಲಿಸಿದ ಪಾಠಗಳು, ಅ ಪ್ರೀತಿ ಬಯಸಿದ ಕೆಲ Qualities ನನ್ನಲ್ಲಿ Build ಆಗಿ ನಾನು Almost Complete Man ಆಗಿದೀನಿ.,ಈ ಕ್ಷಣದಲ್ಲಿ ಅ ಪ್ರೀತಿಗೆ ಕೃತಜ್ಞತೆ ಅರ್ಪಿಸಿ., ನನ್ನ ಮನದಲ್ಲೇ ಗೊರಿಯಾಗಿಸಿದ್ದ ಅ ಪ್ರೀತಿಗೆ ತಿಲಾಂಜಲಿ ಬಿಟ್ಟು (Most of my Friends needs this .,Respecting their Feel here .,Put the full stop to tht)

ಸದಾ ನನ್ನ ಮುಖದಲ್ಲಿ ನಗು, ಸದಾ ನನ್ನ ಬಾಳಲ್ಲಿ ಹೊಸತನ ನೋಡಲು ಆತೊರೆಯುತ್ತಿರುವ ಆ ನನ್ನ ಗೆಳೆಯರ ಹಾಗು ಕೆಲ ಗೆಳತಿಯರ ಅಣತಿಯಂತೆ ಸಾಗುತ್ತೇನೆ .,ಅವರೆಲ್ಲರ ಭಾವನೆಗಳಿಗೆ ಸ್ಪಂದಿಸಿ ನನ್ನ ಸುತ್ತಲಿರುವ ಸಮಾಜಕ್ಕೆ ಹಾಗು ಜನತೆಗೆ ನನ್ನಲ್ಲಿರುವ ಸ್ವಲ್ಪ Creative Ideas/Things/Thoughts ಇಂದ ಸಹಾಯ ಮಾಡ್ತೇನೆ , ಒಂದು ಆದರ್ಶಮಯ ಬಾಳತ್ತ ದಾಪುಗಾಲು ಹಾಕುತ್ತೇನೆ ., ಎಂದು ತಿಳಿಸುತ್ತಾ !!

ಮುದ್ದು ಗೆಳೆಯರೇ/ಕೆಲ ಗೆಳತಿಯರೆ., ಸದಾ ನನ್ನ ಬಾಳಲ್ಲಿ ನೀವು ಹಸಿರಾಗಿರಿ ., ಸದಾ ನನ್ನ ಕಂಗೊಳಿಸುವಂತೆ ಮಾಡಿ ., ನಿಮ್ಮ Feedback ನಿಂದ ನನ್ನ ಬಾಳ ಹಾದಿಯ ಸುಗಮಗೊಳಿಸಿ ಎಂದು ಬೇಡುತ್ತಾ .,

ನೀವು ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಸದಾ ನಾ ಋಣಿಯಾಗಿರುತ್ತೇನೆ ಎಂದು ತಿಳಿಸುತ್ತಾ !!

ನಿಮ್ಮ ನೆಲ್ಮೆಯ
ಚಾರ್ಲಿ ., ಬಾಳ ಅಂಗಳದಲಿ ಸ್ನೇಹವೇ ನನಗೆಲ್ಲ !!!