Saturday, January 10, 2009

ನಿಮ್ಮ ಮನದ ಮಾತುಗಳು / ಭಾವನೆಗಳು ನಿಮ್ಮ ಮುಂದೆ ಅಸ್ಟೆ .....



ನನ್ನಪ್ಪನ ಪುಟ್ಟ ಪುಟ್ಟ ಸಾದನೆಗಳನ್ನ ಜಗಕ್ಕೇ ತೋರುವಾಸೆ ..
ಅವರ ಪ್ರತಿ ಹೆಜ್ಜೆಗಳಲ್ಲಿ ಜೊತೆಗಿದ್ದ ನನ್ನಮ್ಮನ ಪರಿಚಯಿಸುವಾಸೆ ..
ಅದಕ್ಕೆ ಏನೋ ನನಗೂ ಒಂದು ಪುಟ್ಟ ಸಾದನೆ ಮಾಡುವಾಸೆ....


ಪ್ರತಿ ನೋವಿಗೂ ... ಸಂತೋಷವೇ ನಾಂದಿ
ಅ ಸಂತೋಷ ಕಪ್ಪೆ ಚಿಪ್ಪಿನೊಳಗಿನ ಮುತ್ತಿನಂತಿರಬಹುದು ,
ಸಮುದ್ರದಲ್ಲಿನ ನೀರಿನಂತಿರಬಹುದು ..
ನೋವಿನ ಪ್ರತಿ ಅಣುವನ್ನು ಅನುಭವಿಸಿದವನು,
ನೋವಿನ ಆಳವನ್ನ ಅರಿತವನೇ ಅದನ್ನ ವಿವರಿಸಬಲ್ಲ ....


ತುಂಬಾ ವರ್ಷ ಕಳೆದರೂ ನನ್ನಿಂದೆನೂ ಬಯಸದ
ಅ ಎರಡೂ ಜೀವಗಳಿಗೆ ಏನನ್ನಾದರು ಕೊಡುವಾಸೆ
ಎಸ್ಟೇ ಒದ್ದಾಡಿದರೂ ಏನೂ ಕೊಡಲಾಗುತ್ತಿಲ್ಲ
ಕಡೇ ಪಕ್ಷ ಅವರ ಒಂದು ಪುಟ್ಟ ಕನಸಿಗೆ ಬೆನ್ನಕೊಟ್ಟು ..
ನನಸಾಗಿಸುವ ಆಸೆ, ಅದಾದರೂ ಹಿಡೇರುವುದೇ... ?




ಪ್ರತಿ ಗಂಡಿನ ಸಾದನೆಯ ಹಿಂದೆ ಒಬ್ಬ ಹೆಣ್ಣು ಮಗಳು ಇರುತ್ತಾಳೆ ಎಂಬುದು ಶುದ್ದ ಸುಳ್ಳು ..
ಒಂದೋ ಹೆಣ್ಣು ಮಗಳು ತನ್ನೆಲ್ಲಾ ಕನಸುಗಳನ್ನ ಗಂಡಿಗಾಗಿಯೋ ಅಥವಾ
ಗಂಡು ತನ್ನೆಲ್ಲಾ ಕನಸುಗಳನ್ನ ಹೆಣ್ಣಿಗಾಗಿಯೋ ತ್ಯಾಗ ಮಾಡಿರುತ್ತಾರೆ .
ಆಗೇ . . ಇಲ್ಲಿಯ ಸಾದನೆಯ ಹಿಂದೆ ಅನ್ನ್ಯೋನ್ಯತೆ ,
ಮಧುರ ಬಾಂಧವ್ಯ,ನಂಬಿಕೆ,ಪ್ರೀತಿ ಇವು ಜೊತೆಗಿರುತ್ತವೆ ವಿನ:
ಒಬ್ಬರು ಇನ್ನೊಬ್ಬರ ಹಿಂದೆ ಇರುವುದಲ್ಲ ...


ಮೇಲಿನ ಮಾತುಗಳು / ಕವಿತೆಯ ಸಾಲುಗಳು ....
ನಿಮ್ಮ ಮನದಲ್ಲೂ ಇರುವವೇ ,,,
ನ ಹೊಸದಾಗಿ ಏನೂ ಬರೆದಿಲ್ಲ ..
ಹೊಸದಾಗಿ ಏನೂ ಕಲ್ಪಿಸಿಲ್ಲ/ಊಯಿಸಿಲ್ಲ ..
ನಿಮ್ಮ ಮನದ ಮಾತುಗಳು/ಭಾವನೆಗಳು ನಿಮ್ಮ ಮುಂದೆ
ನಿಮ್ಮೀ ಗೆಳೆಯನಿಂದ ಅಸ್ಟೆ ....










Yours Truely ,

Hope One and Only :)
A Lovable ... By Sisters :) :) only :(

Charlie ....... I Dont know anything extra in life than sentiment,emotion,attachments offcourse idiot feelings ...moreover respecting and loving each creature on earth...

Tuesday, January 6, 2009

ಹತ್ತಿಕಲಾರದ ನನ್ನೀ ವೇದನೆ ನಿಮ್ಮ ಮುಂದೆ .... ಹಾಗೆ ಸುಮ್ಮನೆ ....!!!!

ನೋವಿನ ಪ್ರತಿ ಇಂಚು ನನಗೆ ಗೊತ್ತು ..
ನಗುವಿನ ಆಳವೂ ನಂಗೊತ್ತು ...
ಆದರೆ ಈ "ಅಳು"ವಿನ ಬಗ್ಗೆ ಚೂರು ಅರಿತಿರಲಿಲ್ಲ ,,,
ಈಗ ಮಾತ್ರ ಅದರಲ್ಲಿ Ph.D ಮಾಡೋ ಹಂಬಲ ...
ಇದು ನನ್ನ ನೋವಿನ ಪರಮಾವದಿಯೇ ಅಥವಾ
ನನ್ನ ನಗುವಿನ ವ್ಯಂಗ್ಯ ನಡೆಯೇ ?



ಆಸೆಗಳ ಹೊತ್ತು ಅಗಸಕ್ಕೆಂದೂ ಏಣಿ ಹಾಕಲಿಲ್ಲ ...
ದೊಡ್ಡ ಆಸೆಗಳನಿತ್ತು ಕನಸೂ ಕಾಣಲಿಲ್ಲ ..
ರೆಕ್ಕೆ ಬಲಿಯುವ ಮೊದಲೇ ಆಸೆ - ಕನಸ ಹೊತ್ತು ಹಾರಲು ಪ್ರಯತ್ನಿಸಲಿಲ್ಲ ..
ಇದರಲ್ಲಿ ಯಾವುದಾದರೊಂದನ್ನು ಪ್ರಯತ್ನಿಸಿದ್ದರೆ ಸಾಕಿತ್ತೇನೋ
ನನ್ನ ಬದುಕು ಹಸನಾಗಲು ..ನೆಮ್ಮದಿಯಡೆ ಸಾಗಲು




ನನ್ನ ಬದುಕಿನ ಪ್ರತಿ ಹೆಜ್ಜೆಯಲ್ಲೂ ಬೇರೆಯವರಿಂದ ನೋಡಿ ಕಲಿತ್ತದ್ದೆ ಹೆಚ್ಚು
ಅವರು ಪಟ್ಟ ಕಷ್ಟಗಳು, ಅವರ ಸಾಧನೆಯ ಪ್ರತಿ ಹೆಜ್ಜೆಗಳು , ಅವರ ಶುದ್ದ ನಡೆತ,
ಅವರ ಸ್ವಾರ್ಥವಿಲ್ಲದ ಬದುಕು ಹೀಗೆ ಅನೇಕ ಗುಣಗಳನ್ನ .,
ಆದರೂ ಏಕೋ ಸಮುದ್ರದ ಮದ್ಯೆ ನಿಂತಿರುವ ಅ ಮಹಾ ಪುರುಷನಂತಾಗಲಿಲ್ಲ
ಕಡೆ ಪಕ್ಷ ಬೇರೆಯವರಿಗಾಗಿ ಹೋರಾಡಿ ಪ್ರಾಣ ತೆತ್ತು ಅಮರನಾಗಲಿಲ್ಲ ..

ನಾ ಹೊಸ ಕನಸುಗಳನ್ನು ಕಂಡವನಲ್ಲ
ನಾ ನನಗೆ ಎಟುಕದ ವಸ್ತುಗಳ ಬಗ್ಗೆ ತಲೆ ಕೆಡಿಸಿಕೊಂಡವನಲ್ಲ
ನಾ ಹೊಡೆದಾಡುವುದು/ಹೊಡೆದಾಡುತ್ತಿರುವುದು,
ಜೀವನವನ್ನು ಎಳೆದಾಡುತ್ತಿರುವುದು
ನನ್ನಪ್ಪನ ನೆಮ್ಮದಿ ಬದುಕಿಗೆ
ನನ್ನಮ್ಮನ ಪ್ರತಿ ನಗುವಿಗೆ .....



ಜೀವನದಲ್ಲಿ ನಾ ಪಟ್ಟ ಕಷ್ಟಗಳಿಗೆ ಅರ್ಥ ಸಿಕ್ಕಿ
ನಾನು "ಸಾಧಕ"ನಾಗುವೆ ಎಂದುಕೊಂಡೆ ..
ಆದರೆ ಈಗಲೇ ಅರಿವಾಗಿದ್ದು ., ಸಾಧಕನಾಗಲು ಉತ್ಸಾಹ ಒಂದಿದ್ದರೆ ಸಾಲದು .,
ಮಾನಸಿಕ ಶ್ರಮ, ಸ್ವಾವಲಂಬನೆಯ ಬದುಕು ,ಛಲ,ದೈರ್ಯ ..
ಇಂತ ಇನ್ನೂ ಹಲವು ದೊಡ್ಡ,ದೊಡ್ಡ ಪದಗಳ ಪಟ್ಟಿಯೇ ಇದೆ ಎಂದು .,
ಮೇಲಿನ ಅಂತ ಪದಗಳಿಗೆ ಅರ್ಥ ತಿಳಿಯದ ನಾನು
"ಸಾಧನೆ"ಯ ಕನಸ ಕಾಣುವುದು ಸರಿಯೇ ???


ಚಾರ್ಲಿ... ಜೀವನದ ಪ್ರತಿ ಹೆಜ್ಜೆಯಲ್ಲೂ ಕಲಿತ ಪಾಠಗಳೊಂದಿಗೆ ಬಿಕ್ಕಳಿಸುತ್ತ !!!!