Wednesday, September 14, 2011

ಓ ಮನವೆ ಬದಲಾಗಿಬಿಡು.,ನನ್ನ ಬಾಳ ಬದಲಾಯಿಸಿಬಿಡು !!

ಓ ಮನವೆ ಬದಲಾಗಿಬಿಡು
ಹೊಸ ಭಾವನೆಗಳ ಹಾರಿಬಿಡು
ಬಾಳ ದಾರಿಯಲಿ ಹಸಿರ ಹಾಸಿಬಿಡು
ನನ್ನ ಬಾಳಲಿ ತೇಲಿ ಬಂದಿಹಳು ಕನ್ನಿಕೆ
ಕೈ ಹಿಡಿದು ನೆಡಸಲು ನನ್ನ ಕನಸಿನ ಗೋಪುರಕೆ !!


ಓ ಮನವೆ ಬದಲಾಗಿಬಿಡು
ನಿನ್ನೆಲ್ಲ ನೋವಿನ ಕಥೆಗಳ ,
ಸೋತು ಸೋರಿಗಿದ ಕನಸುಗಳ ಬದಿಗಿಟ್ಟು .
ನನ್ನ ಬಾಳ ಬೆಳಗಲು ಅಡಿಹಿಡುತ್ತಿರುವಳು ಆ ಕನ್ನಿಕೆ
ಶುಭ ಹಾರೈಸಿ ., ಅವಳ ಬಾಳ ಅರ್ಥೆಯ್ಸಿಬಿಡು,ಅವಳ್ ಬಾಳ ಬೆಳಗಿಬಿಡು .


ಓ ಮನವೆ ಬದಲಾಗಿಬಿಡು
ಭಾವನೆಗಳ ಹೊಡೆತಕ್ಕೆ ಸಿಲುಕಿ ನಲುಗಿದ್ದೆ ನೀನು
ಒಂದರ ಮೇಲೊಂದು ಪಾಶವ ಕಟ್ಟಿಕೊಂಡಿದ್ದೆ ನೀನು
ಭಾವನೆಗಳ ಕೂಪವ ನಿರ್ಲಕ್ಷಿಸಿದ್ದೆ ನೀನು
ಮಗದೊಮ್ಮೆ ನೋಡು ಕಣ್ಣರಳಿಸಿ .,
ನನ್ನ ಬಾಳ ತೀಡಲು ಕೈ ಹಿಡಿದಿರುವಳು ಕನ್ನಿಕೆ
ಜೊತೆಯಾಗಿಬಿಡು ಅವಳ ಭಾವನೆಗಳೊಟ್ಟಿಗೆ .,
ಬದಲಾಯಿಸಿ .,ಬೆಳಗಿಬಿಡು ನನ್ನ ಬಾಳ !!!

Friday, June 3, 2011

ಇಂದಿನ ಸುಂದರ ಬದುಕ ಹಾಳುಗೆಡವುತ್ತಾ ., Just ಆತ್ಮಾವಲೋಕನದಲ್ಲಿ !!!



ಸುಂದರ ನಾಳೆಯ ಕನಸಿನಲ್ಲಿವೆ ನಿಮ್ಮ ಕೂಸುಗಳು
ಆಸೆ - ಆಕಾಂಕ್ಷೆಗಳನ್ನೊತ್ತು ಬಾನಿಗಾರಿವೆ ಆ ನಿಮ್ಮ ಕೂಸುಗಳು
ಮಾನವೀಯ ಮೌಲ್ಯಗಳೊಟ್ಟಿಗೆ ! ಪರಿಶುದ್ದ ನೀರು,ನೆಲ,ಗಾಳಿ ಉಳಿಸಿಕೊಡಿ
ಜೊತೆಗೆ ಬ್ರಷ್ಟಾಚಾರ ತೊಲಗಿಸುವ ಹೊಣೆ ಹೊತ್ತು
ಅವರಿಗೊಂದು ಸುಂದರ ನಾಳೆಯ ಕಟ್ಟಿ ಕೊಡಿ .



ಪ್ರಸ್ತುತ ರಾಜಕಾರಣದ ಪ್ರತಿ ಹಂತ ನಾಗರಿಕತೆಯ ಹಾದಿ ತಪ್ಪಿಸಿದೆ,
ಬ್ರಷ್ಟಾಚಾರವೆಂಬ ಭೂತವನ್ನ ಬೆಂಬಿಡದೆ ಬೆಳಸಿದೆ ,
ಸುಂದರ ಪರಿಸರ, ಮಾನವೀಯ ಮೌಲ್ಯಗಳನ್ನ ಹಾಳುಗೆಡವಿದೆ,
ಪ್ರತಿಯೊಬ್ಬರಿಗೂ ಅರಿವಿಗೆ ಬರುವಂತೆ ಯುವಜನತೆಯ
ಬಾಳ ಕಗ್ಗತ್ತಲಾಗಿಸುತ್ತಿದೆ .



ತಿರುಗಿ ಬೀಳುವ ಕಾಲ ಎದುರಾಗಿದೆ ಇಂದು
ಸಮಾಜದ ಕೆಲ ಚಟುವಟಿಕೆಗಳ ವಿರುದ್ದ ,
ಸಾರಿ ಹೇಳಲೇಬೇಕಿದೆ ., ಅವಲೋಕನದ ಅವಶ್ಯಕತೆ ಇದೆ .,
ಹೋರಾಡುವ ಕಾಲ ಎದುರಾಗಿದೆ ,
ನಮಗರಿವಿದ್ದೋ ಇಲ್ಲದೆಯೋ ಕಟ್ಟಿಕೊಂಡ
ಈ ಸಮಾಜದ ಕೆಟ್ಟ ವ್ಯವಸ್ಥೆಗಳ ವಿರುದ್ದ !!
ಬನ್ನಿ ಕೈ ಜೋಡಿಸಿ ., ಬ್ರಷ್ಟಾಚರವನ್ನ ನಿಗ್ರಹಿಸೋಣ .



ಸೃಷ್ಟಿಯ ಅದ್ಭುತದಲ್ಲಿ ಭೂಮಿಯು ರೂಪಗೊಂಡಿದ್ದು
ವಿಸ್ಮಯ ,ಆಸರೆಗಳೊಂದಿಗೆ .
ಸೃಷ್ಟಿಯ ತಪ್ಪಿನಲ್ಲಿ ಭೂಮಿಗಿಳಿದ ಮಾನವ
ತನ್ನ ಕೆಲ ಕುಚೋದ್ಯಗಳಿಂದ
ವಿಸ್ಮಯಗಳ , ತನಗಾಸರೆಯಾಗಿದ್ದ ಭೂಮಿಯನ್ನ
ಮುಂದಿನವರ ಆಲೋಚನೆಗೆಟಕದಂತೆ ಕಾಲ್ಪನಿಕವಾಗಿಸುತ್ತಿರುವ
ಅವರ ಬದುಕ ಕ್ಲಿಷ್ಟವಾಗಿಸುತ್ತಿರುವ.
ಬನ್ನಿ ಅರಿವು ಮೂಡಿಸೋಣ ., ಮುಂದಿನವರ ಬಾಳ ಬೆಳಗೋಣ .




ನೀರು ,ನೆಲ, ಗಾಳಿಯ ಜಡತೆಯನ್ನರಿತೋ ಏನೋ
ಮಾನವ ಅವುಗಳನ್ನ ಬಲತ್ಕರಿಸುತ್ತಲೇ ಇರುವ .,
ಇವುಗಳ ಸೂಕ್ಷ್ಮತೆಯನ್ನರಿಯದೇ ಏನೋ ಇಂದಿನ ಪೀಳಿಗೆ
ಪೋಷಕರ ಹಾದಿ ಅನುಸರಿಸುತ್ತಲೇ ಬಂದಿಹರು ..,
ಯಾಂತ್ರಿಕ ಜೀವನದಲ್ಲಿ ಮಿಂದಿರುವ ಯುವಜನತೆ
ಮೇಲೇಳುವಸ್ಟರಲ್ಲಿ ಬರಡಾಗಿರುವವು ಎಲ್ಲವೂ ..,
ಅರಿತು ಬಾಳಿ ., ತಿಳಿಸಿ ಹೇಳಿ ., ಮುಂದಿನವರ ಬಾಳ ಹಸಿರಾಗಿಸಿ .



ನಾರಾಯಣ ಮೂರ್ತಿ, ಪ್ರೇಂಜೀ,ಡಾIIದೇವಿಶೆಟ್ಟಿಯವರೊಟ್ಟಿಗೆ
ಸುಭಾಷ್,ಭಗತ್ ,ಗಾಂಧಿ,ಅಜಾದ್ ಬಗೆಯು ಮಕ್ಕಳಲ್ಲಿ ಅರಿವು ಮೂಡಿಸಿ .,
ಮಾನವೀಯ ಹೋರಾಟಗಳ, ಮೌಲ್ಯಗಳ ಎತ್ತಿ ಹಿಡಿಯಿರಿ
ಹಣ , ಆಸ್ತಿ , ಅಂತಸ್ತಿನ ಜೊತೆ
ನೀರು , ನೆಲ , ಗಾಳಿಯ ಅವಶ್ಯಕತೆಗಳ ಬಗ್ಗೆ, ಅವುಗಳ ಉಳಿಸುವಲ್ಲೂ
ಮಕ್ಕಳಿಗೆ ಅರಿವು ಮೂಡಿಸಿ
ಇಲ್ಲವಾದಲ್ಲಿ ಪರಿಸರ ಹೇಳ ಹೆಸರಿಲ್ಲದಂತಾಗುವುದು .,
ಮಾನವೀಯ ಮೌಲ್ಯಗಳಿಲ್ಲದೆ ದೇಶ ಮತ್ತೆ ಅಧಿಕಾರಶಾಯಿಗಳ ಕೈ ಸೇರುವುದು.



ನೈತಿಕತೆಯ ಹೊಣೆಹೊತ್ತು ಪ್ರಸ್ತುತ ಪರಿಸರ, ಸಮಾಜವ
ಉಳಿಸುವತ್ತ ದಾಪುಗಾಲಿಡಿ,
ಮುಂದಿನವರಿಗೆ ಒಂದಿಷ್ಟು ಆರೋಗ್ಯಕರ ಆಲೋಚನೆಗಳ
ತುಂಬುವಲ್ಲಿ ಜಾಗರೂಕರಾಗಿ,
ಪ್ರತಿ ನಿಲುವಲ್ಲೂ ನಿಮ್ಮ ಏಳ್ಗೆಯ ಜೊತೆ
ಪರಿಸರ,ಸಮಾಜದ ಏಳ್ಗೆಗೆ ಕೈ ಜೋಡಿಸಿ.



ಚಾರ್ಲಿ.

ಪರಿಸರ ಉಳಿಸಿ .,ಬೆಳಸಿ ., ಬ್ರಷ್ಟಾಚಾರವ ಕೊನೆಗೊಳಿಸಿ
ಮುಂದಿನವರ ಸುಂದರ ಬದುಕಿಗೆ ಆಸರೆಯಾಗಿ .

Tuesday, May 31, 2011

ನಿನ್ನ ಮುಗ್ಧ ನಗುವಿಗಾಗಿ ., ನನ್ನ ಪ್ರತಿ ನೆಮ್ಮದಿ ಹೆಜ್ಜೆಗಾಗಿ

ಗೀಚಿ ಕರಗಿಸಿಕೊಳ್ಳಬೇಕೆಂದಿರುವೆ ನನ್ನ ಭಾವನೆಗಳ
ನಿನ್ನ ಮೇಲಿನ ನನ್ನಷ್ಟೂ ಪ್ರೀತಿಯ
ಮತ್ತೆ ಬಿಕ್ಕಳಿಸದಿರು ನಿನ್ನ ಗತಕಾಲವ ನೆನದು
ಸೊರಗುವುದು ನನ್ನ ಮನ , ಕರಗುವುದು ನನ್ನ ಭಾವನೆಗಳ ಕಣಜ .


ನೋವಿನ ಅಂಗಳದಲ್ಲಿ ಸದಾ ನೀ ನಡೆದಾಡಿರುವೆ
ನಗುವಿನ ಚಿಲುಮೆಯಲ್ಲೂ ನೀ ಮಿಂದ್ದೆದ್ದಿರುವೆ
ನಾಳಿನ ನೆಮ್ಮದಿ ನಗುವಿಗಾಗಿ ಹೆಜ್ಜೆ ಇಡುತ್ತಿರುವೆ
ದಯಮಾಡಿ ತೇಲಿಬಿಡು ನಿನ್ನೆಲ್ಲ ನೋವಿನ ಕ್ಷಣಗಳ , ನೋವಿನ ಕಂತೆಗಳನ್ನ
ನಿನ್ನ ಮುಗುಳ್ನಗೆಯೊಂದಿಗೆ.,


ನೀನೆಂದರೆ ಮತ್ತೆ ಗರಿಗೆದರುವವೇ ನನ್ನಷ್ಟೂ ಭಾವನೆಗಳು
ನೀನೆಂದರೆ ಮತ್ತೆ ಪುಟಿಯುವವೇ ನನ್ನೆಲ್ಲಾ ಕನಸುಗಳು
ನೀನೇ ಹಾಗೆ ನಿನಗರಿಯದ ಭರವಸೆಯ ಸಾಗರ
ನನಂತ ಹತ್ತಾರು ಮಂದಿಯ ಬಾಳಿನ ತೋರಣ ., ಸಿಂಚನ .


ಜೀವನದ ಏಳು - ಬೀಳುಗಳಲ್ಲಿ ನಿನ್ನೊಂದಿಗಿರುವ ಹ೦ಬಲ /ಹಠ
ಬಾಳ ದೈನಂದಿನ ಪಾಠಗಳನ್ನ ನಿನ್ನೊಂದಿಗೆ ಪಠಿಸುವ ಚಟ
ಬಾಳಿನ ಪ್ರತಿ ಹೆಜ್ಜೆಯನ್ನ ನಿನ್ನೊಂದಿಗಿಡುವ ತವಕ
ಕಟ್ಟಿಕೊಡೆ ನನಗೊಂದು ನೆಮ್ಮದಿ ಬದುಕ


ಹೆಣಗುತ್ತಿರುವೆ ನಿನಗಾಗಿ ಕಟ್ಟಲು ಮತ್ತೊಂದು ತಾಜಾ - ಮೆಹಲು
ಹೆಣಗುತ್ತಿರುವೆ ನಿನಗಾಗಿ ಕಟ್ಟಲು ಮತ್ತೊಂದು ತಾಜಾ - ಮೆಹಲು
rate ಗೀಟಿ , deal ಮುಗಿದು , ಕೋರ್ಟಿನ ತಕರಾರು ಮುಗಿಸಿ site freeze ಮಾಡಿ
BDA,BBMPಯವರಿಗೆ ಸ್ವಲ್ಪ ತಿನ್ನಿಸಿ ತಾಜಾ - ಮೆಹಲು ಕಟ್ಟಿದ್ರೂ
ನೀ ಬಂದು Ribbon Cut ಮಾಡೋ Sceneನೇ ಕಾಣ್ತಿಲ್ವೆ !! .,



ಅವನೊಂದಿಗೆ ಕಂಡ ಆ ನಿನ್ನ ಎಲ್ಲಾ
ಆಸೆ - ಕನಸುಗಳನ್ನ ಕಷ್ಟವಾದರೂ ಸರಿ ಒಮ್ಮೆ ಗಾಳಿಗೆ ತೂರಿಬಿಡು
ಮನಸಿನೊಳಗಿರುವ ಅವನ್ನೆಲ್ಲಾ ಚಿತ್ತಾರಗಳನ್ನ
ಸಾಧ್ಯವಾದರೆ ಹಾಗೆ ನುಂಗಿಬಿಡು
ಜೀವನವೆಂದರೆ ಹೀಗೆ ನಮ್ಮ ಆಸೆ - ಕನಸುಗಳನ್ನ ನಾವೇ ಚಿವಿಟಿಬಿಡುವುದು .,
ಅವುಗಳ ಸಮಾಧಿಯ ಮೇಲೆ ಮತ್ತೊಂದು ಸುಂದರ ನಾಳೆಯ ಆಸೆ ಕನಸ ಕಟ್ಟುವುದು .


ಕಷ್ಟಗಳು ಇಂದು ನೆನ್ನೆಯದಲ್ಲ
ನನ್ನದು ನಿನ್ನದು ಮಾತ್ರವಲ್ಲ
ಇಡೀ ಜೀವ ಜಗತ್ತಿಗೆ
ಆ ದೇವರಿಟ್ಟಿರುವ " ಸತ್ವ - ಪರೀಕ್ಷೆ "


ಜೀವನದಲ್ಲಿ ಏರಿಳಿತಗಳೇ ಹಾಗೆ
ಒಂದೊಮ್ಮೆ ಸಂತೋಷದ ಉತ್ತುಂಗ
ಮಗದೊಮ್ಮೆ ದುಃಖವೆಂಬ ಪ್ರಪಾತ
ಅವರೆಡರಲ್ಲಿ ಮುಳಿಗೆದ್ದು ಸೆಟದು ನಿಲ್ಲುವುದೇ ನಮ್ಮ ಕಾಯಕ .


ಶತಮಾನಗಳಿಂದ ಮಾನವ ಭೂಮಿಯ ಮೇಲೆ ತನಗಾಗಿ ಬದುಕುತ್ತಿರುವುದೇ ಕಡಿಮೆ
ಅವ ಬದುಕುತ್ತಿರುವುದು ಒಂದೋ
ಬೇರೆಯವರ ಆಸೆ - ಕನಸುಗಳ ಈಡೇರಿಕೆಗಾಗಿಯೋ
ಇಲ್ಲವಾದಲ್ಲಿ ., ಬೇರೆಯವರ ಸಂತೃಪ್ತಿಗಾಗಿಯೋ ಮಾತ್ರ .


ಆಸೆ - ಕನಸುಗಳೇ ಹಾಗೆ
ಕತ್ತಲೆಯ ಪ್ರಪಂಚವನ್ನ ಕ್ಷಾಣರ್ದ್ದದಲ್ಲೇ ಬೆಳ್ಳಗಾಗಿಸುವವು
ಮಾನವ ಆ ಬಿಳಿ ಪ್ರಪಂಚದ ಸುಖವರಿಯುವಸ್ಟರಲ್ಲೇ
ಮತ್ತೆ ದುಃಖವೆಂಬ ಕತ್ತಲೆ ಆವರಿಸುವುದು !! .


ಜೀವನವೆಂದರೆ ಹೀಗೆ .,
ಹಳೆ ಆಸೆ - ಕನಸುಗಳ ಕೆರೆತಗಳು
ಹೊಸ ಆಸೆ - ಕನಸುಗಳ ಮೊರೆತಗಳು
ಮಧ್ಯದಲ್ಲಿ ಸಿಲುಕಿ ನಲುಗುವ ಹಸಿ ಹಸಿ ಮನಸುಗಳು
ಜೊತೆಗಿರುವ Half-full boiled ತಲೆ ಬುರುಡೆಗಳು
ಅವುಗಳೋಟ್ಟಿಗಿರುವ Matured - Psycho Brainಗಳು
ಏನೇ ಬಂದರೂ ಸರಿ ಹೆದರಿಸಿ ಗೆಲ್ಲುವೆ
ಎನ್ನುವ Comitted Bodyಗಳು .
ಲೈಫು ಇಷ್ಟೇನೆ ..... !!!


ನಿನ್ನ ನೆನೆಯದ ದಿನಗಳಿಲ್ಲ
ನಿನ್ನಲ್ಲರಿಯದ ವಿಷಯಗಳಿಲ್ಲ
ನಿನ್ನ ಪ್ರೀತಿ , ಮಮಕಾರವ ವರ್ಣಿಸಲು ಪದಗಳಿಲ್ಲ
ನಿನ್ನ ಮೇಲಿನ ನನ್ನಷ್ಟೂ ಪ್ರೀತಿ ಹೊರಗೆಡವಲು No words ಕಣೆ ಹುಡುಗಿ .


ಪ್ರೀತಿಯ ಅರ್ಥ ತಿಳಿಸಿರುವೆ
ನನ್ನ ಭಾವನೆಗಳನ್ನ ಗವ್ ರವಿಸಿರುವೆ
ನನ್ನನ್ನ ಅರಿತಿರುವೆ , ನನ್ನ ಮೇಲೆ ನನಗೇ ನಂಬಿಕೆ ತರಿಸಿರುವೆ
ನನ್ನಲ್ಲಿ ನೇ ನೆಲೆಯೂರಿರುವೆ
ಕಣ್ತುಂಬಿರುವೆ ನನ್ ಬಾಳ ಪಥದಲ್ಲಿ ನೀ ಬೆಳೆಕಾಗಿರುವೆ .. :)


ಬಾಳಿನ ಏರಿಳಿತಗಳಲ್ಲಿ ನಲುಗಿದ್ದೆ
ಸುಖ ದುಃಖಗಳಲ್ಲಿ ಹಿಗ್ಗಿದ್ದೆ , ಕುಗ್ಗಿದ್ದೆ
ಸುಂದರ ನಾಳೆಯ ಹಂಬಲದಲ್ಲಿದ್ದೆ
ಬದಲಾವಣೆಯ ಕ್ಷಣಗಳಿಗೆ ಎದುರು ನೋಡುತ್ತಿದ್ದೆ ., ಹಾತೊರೆಯುತ್ತಿದ್ದೆ
ಪರಿವರ್ತನೆಯ ಗಾಳಿ ಬೀಸಿದೆ ., ಹಸನಾಗಲು ಶುರುವಾಗಿದೆ ನಿನ್ನ ಬಾಳು
Just ತೇಲಿ ಬಿಡೆ ನಿನ್ನ ನೀನು ., ಹಸಿರಾಗುವುದು ನಿನ್ನ ಬಾಳು


ನನ್ನ ಪ್ರೀತಿಯ ಮಧುರತೆ ಅರಿಯಲು ನಿನ್ನ ಮನವ ಹೆಣೆದುಬಿಡು
ನನ್ನಸ್ಟೂ ಭಾವನೆಗಳ ಮನದಿ ಬಚ್ಚಿಟ್ಟುಬಿಡು
ತೆರದ ಪುಸ್ತಕವಾಗು ., ಬಿಚ್ಚಿಟ್ಟ ದಾಳಿಂಬೆಯಾಗಿಬಿಡು
ಹಾರುವ ಹಕ್ಕಿಗೆ ಬಾನು ಆಸರೆ ನೀಡುವಂತೆ ., ನನ್ನ ಕನಸಿಗೆ ಸೂರಾಗಿಬಿಡೆ
Just ತೇಲಿ ಬಿಡೆ ನಿನ್ನ ನೀನು ., ಸುಖವಾಗಿರುವುದು ನಮ್ಮಿಬ್ಬರ ಬಾಳು :೦)


ನಿನಗರಿಯದ ಮಹಾನ್ ಚೈತನ್ಯ ನೀನು
ಎಲ್ಲರರಿತಿರುವ ಪರಿಪೂರ್ಣ ಮನಸು ನೀನು
ಪ್ರೀತಿ,,ಮಮಕಾರ,ಕರುಣೆಯ ಹೊಂಗಿರಣ ನೀನು
ನನ್ನ ಬಾಳ ಬೆಳುಕು ನೀನು , ಸ್ಫೂರ್ತಿ ನೀನು
ನನ್ನ ಹೃದಯ ಮಿಡಿತ ನೀನು
ನನಗರಿಯದೆ ನನ್ನಲ್ಲಿ ಏಲ್ಲವೂ ನೀನು


ಪ್ರೀತಿ ಸೋನೆ ಮಳೆಯಲಿ ತೋಯ್ದಿರುವುದೀ ಮನ
ಭಾವನೆಗಳ ಕಾರಂಜಿಯಲ್ಲಿ ಕುಪ್ಪಳಿಸಿರುವುದೀ ಮನ
ಕನಸುಗಳ ಕಟ್ಟಿಕೊಂಡು ಹಾರುತ್ತಿರುವುದೀ ಮನ
ಕಲ್ಪನೆಯ ಲೋಕದಲ್ಲಿ ಅಲೆಯುತ್ತಿರುವುದೀ ಮನ
ನಿನ್ನ ಸಾರಥ್ಯದಲ್ಲಿ ಓಡುವ ರಥವಾಗಿರುವುದೀ ಮನ
Please ಜೋಪನವಾಗಿರಿಸೆ ಈ ಮನವ !!


ಚಾರ್ಲಿ ... ನಿನ್ನೊಂದಿಗೆ ಕಳೆವ ಪ್ರತಿ ಕ್ಷಣ ಮಧುರ
ಪಿಸುಗುಟ್ಟುವ ಶಬ್ದಗಳಂತೂ ಅಮರ !!