Friday, June 3, 2011

ಇಂದಿನ ಸುಂದರ ಬದುಕ ಹಾಳುಗೆಡವುತ್ತಾ ., Just ಆತ್ಮಾವಲೋಕನದಲ್ಲಿ !!!



ಸುಂದರ ನಾಳೆಯ ಕನಸಿನಲ್ಲಿವೆ ನಿಮ್ಮ ಕೂಸುಗಳು
ಆಸೆ - ಆಕಾಂಕ್ಷೆಗಳನ್ನೊತ್ತು ಬಾನಿಗಾರಿವೆ ಆ ನಿಮ್ಮ ಕೂಸುಗಳು
ಮಾನವೀಯ ಮೌಲ್ಯಗಳೊಟ್ಟಿಗೆ ! ಪರಿಶುದ್ದ ನೀರು,ನೆಲ,ಗಾಳಿ ಉಳಿಸಿಕೊಡಿ
ಜೊತೆಗೆ ಬ್ರಷ್ಟಾಚಾರ ತೊಲಗಿಸುವ ಹೊಣೆ ಹೊತ್ತು
ಅವರಿಗೊಂದು ಸುಂದರ ನಾಳೆಯ ಕಟ್ಟಿ ಕೊಡಿ .



ಪ್ರಸ್ತುತ ರಾಜಕಾರಣದ ಪ್ರತಿ ಹಂತ ನಾಗರಿಕತೆಯ ಹಾದಿ ತಪ್ಪಿಸಿದೆ,
ಬ್ರಷ್ಟಾಚಾರವೆಂಬ ಭೂತವನ್ನ ಬೆಂಬಿಡದೆ ಬೆಳಸಿದೆ ,
ಸುಂದರ ಪರಿಸರ, ಮಾನವೀಯ ಮೌಲ್ಯಗಳನ್ನ ಹಾಳುಗೆಡವಿದೆ,
ಪ್ರತಿಯೊಬ್ಬರಿಗೂ ಅರಿವಿಗೆ ಬರುವಂತೆ ಯುವಜನತೆಯ
ಬಾಳ ಕಗ್ಗತ್ತಲಾಗಿಸುತ್ತಿದೆ .



ತಿರುಗಿ ಬೀಳುವ ಕಾಲ ಎದುರಾಗಿದೆ ಇಂದು
ಸಮಾಜದ ಕೆಲ ಚಟುವಟಿಕೆಗಳ ವಿರುದ್ದ ,
ಸಾರಿ ಹೇಳಲೇಬೇಕಿದೆ ., ಅವಲೋಕನದ ಅವಶ್ಯಕತೆ ಇದೆ .,
ಹೋರಾಡುವ ಕಾಲ ಎದುರಾಗಿದೆ ,
ನಮಗರಿವಿದ್ದೋ ಇಲ್ಲದೆಯೋ ಕಟ್ಟಿಕೊಂಡ
ಈ ಸಮಾಜದ ಕೆಟ್ಟ ವ್ಯವಸ್ಥೆಗಳ ವಿರುದ್ದ !!
ಬನ್ನಿ ಕೈ ಜೋಡಿಸಿ ., ಬ್ರಷ್ಟಾಚರವನ್ನ ನಿಗ್ರಹಿಸೋಣ .



ಸೃಷ್ಟಿಯ ಅದ್ಭುತದಲ್ಲಿ ಭೂಮಿಯು ರೂಪಗೊಂಡಿದ್ದು
ವಿಸ್ಮಯ ,ಆಸರೆಗಳೊಂದಿಗೆ .
ಸೃಷ್ಟಿಯ ತಪ್ಪಿನಲ್ಲಿ ಭೂಮಿಗಿಳಿದ ಮಾನವ
ತನ್ನ ಕೆಲ ಕುಚೋದ್ಯಗಳಿಂದ
ವಿಸ್ಮಯಗಳ , ತನಗಾಸರೆಯಾಗಿದ್ದ ಭೂಮಿಯನ್ನ
ಮುಂದಿನವರ ಆಲೋಚನೆಗೆಟಕದಂತೆ ಕಾಲ್ಪನಿಕವಾಗಿಸುತ್ತಿರುವ
ಅವರ ಬದುಕ ಕ್ಲಿಷ್ಟವಾಗಿಸುತ್ತಿರುವ.
ಬನ್ನಿ ಅರಿವು ಮೂಡಿಸೋಣ ., ಮುಂದಿನವರ ಬಾಳ ಬೆಳಗೋಣ .




ನೀರು ,ನೆಲ, ಗಾಳಿಯ ಜಡತೆಯನ್ನರಿತೋ ಏನೋ
ಮಾನವ ಅವುಗಳನ್ನ ಬಲತ್ಕರಿಸುತ್ತಲೇ ಇರುವ .,
ಇವುಗಳ ಸೂಕ್ಷ್ಮತೆಯನ್ನರಿಯದೇ ಏನೋ ಇಂದಿನ ಪೀಳಿಗೆ
ಪೋಷಕರ ಹಾದಿ ಅನುಸರಿಸುತ್ತಲೇ ಬಂದಿಹರು ..,
ಯಾಂತ್ರಿಕ ಜೀವನದಲ್ಲಿ ಮಿಂದಿರುವ ಯುವಜನತೆ
ಮೇಲೇಳುವಸ್ಟರಲ್ಲಿ ಬರಡಾಗಿರುವವು ಎಲ್ಲವೂ ..,
ಅರಿತು ಬಾಳಿ ., ತಿಳಿಸಿ ಹೇಳಿ ., ಮುಂದಿನವರ ಬಾಳ ಹಸಿರಾಗಿಸಿ .



ನಾರಾಯಣ ಮೂರ್ತಿ, ಪ್ರೇಂಜೀ,ಡಾIIದೇವಿಶೆಟ್ಟಿಯವರೊಟ್ಟಿಗೆ
ಸುಭಾಷ್,ಭಗತ್ ,ಗಾಂಧಿ,ಅಜಾದ್ ಬಗೆಯು ಮಕ್ಕಳಲ್ಲಿ ಅರಿವು ಮೂಡಿಸಿ .,
ಮಾನವೀಯ ಹೋರಾಟಗಳ, ಮೌಲ್ಯಗಳ ಎತ್ತಿ ಹಿಡಿಯಿರಿ
ಹಣ , ಆಸ್ತಿ , ಅಂತಸ್ತಿನ ಜೊತೆ
ನೀರು , ನೆಲ , ಗಾಳಿಯ ಅವಶ್ಯಕತೆಗಳ ಬಗ್ಗೆ, ಅವುಗಳ ಉಳಿಸುವಲ್ಲೂ
ಮಕ್ಕಳಿಗೆ ಅರಿವು ಮೂಡಿಸಿ
ಇಲ್ಲವಾದಲ್ಲಿ ಪರಿಸರ ಹೇಳ ಹೆಸರಿಲ್ಲದಂತಾಗುವುದು .,
ಮಾನವೀಯ ಮೌಲ್ಯಗಳಿಲ್ಲದೆ ದೇಶ ಮತ್ತೆ ಅಧಿಕಾರಶಾಯಿಗಳ ಕೈ ಸೇರುವುದು.



ನೈತಿಕತೆಯ ಹೊಣೆಹೊತ್ತು ಪ್ರಸ್ತುತ ಪರಿಸರ, ಸಮಾಜವ
ಉಳಿಸುವತ್ತ ದಾಪುಗಾಲಿಡಿ,
ಮುಂದಿನವರಿಗೆ ಒಂದಿಷ್ಟು ಆರೋಗ್ಯಕರ ಆಲೋಚನೆಗಳ
ತುಂಬುವಲ್ಲಿ ಜಾಗರೂಕರಾಗಿ,
ಪ್ರತಿ ನಿಲುವಲ್ಲೂ ನಿಮ್ಮ ಏಳ್ಗೆಯ ಜೊತೆ
ಪರಿಸರ,ಸಮಾಜದ ಏಳ್ಗೆಗೆ ಕೈ ಜೋಡಿಸಿ.



ಚಾರ್ಲಿ.

ಪರಿಸರ ಉಳಿಸಿ .,ಬೆಳಸಿ ., ಬ್ರಷ್ಟಾಚಾರವ ಕೊನೆಗೊಳಿಸಿ
ಮುಂದಿನವರ ಸುಂದರ ಬದುಕಿಗೆ ಆಸರೆಯಾಗಿ .