Friday, July 31, 2009

ಬುಡುಬುಡಿಕೆಯವರಂತೆ ಬಡಬಡಾಯಿಸಿ ಸುಮ್ಮನಾಗೋ ನಮ್ಮ ಮಾಧ್ಯಮದೋರು !!

೨೬ ಜುಲೈ ೧೯೯೯,ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆ ಹಾರಿಸಿದ ದಿನ.




ಆಗಷ್ಟೇ ನಾವು ಶಾಲ ದಿನಗಳನ್ನ ಮುಗಿಸಿ ಕಾಲೇಜಿನತ್ತ ಹೆಜ್ಜೆ ಇಟ್ಟಿದ್ದ ಕಾಲ ಅದು.
ಯುದ್ಧ ಅಂದ್ರೆ ಆಗ ನಮಗೆ ತಿಳಿದದ್ದು ಕಳಿಂಗ ., ಮೊದಲ ಮಹಾಯುದ್ಧ ., ಎರಡನೇ ಮಹಾಯುದ್ಧ .. ಹೀಗೆ ಅನೇಕ ., ಅಂದ್ರೆ ನಮ್ಮ ೭ ರಿಂದ ೧೦ ನೇ ತರಗತಿಯ ಪಠ್ಯಗಳಲ್ಲಿದ್ದ Chronologically arranged ಯುದ್ಧಗಳಷ್ಟೇ ., ಇವುಗಳ ಬಗ್ಗೆ ಓದಿ ಪರೀಕ್ಷೆ ಬರೆದು ., ತದನಂತರ ಅವುಗಳ ಮರೆತವರೇ ಹೆಚ್ಚು ., !!

ಆದ್ರೆ ೧೯೯೯ ರಲ್ಲಿ "ಪಾಕ್ - ಭಾರತ"ದ ನಡುವೆ ನಡೆದ "ಕಾರ್ಗಿಲ್ ಯುದ್ಧ" ಮಾತ್ರ ೨೦ ನೇ ಶತಮಾನದಲ್ಲಿದ್ದ ಪ್ರತಿಯೊಬ್ಬರ ಮನಸ್ಸಿನಲ್ಲಿ ಮರೆಯಲಾರದ ಕಹಿ ನೆನಪಾಗಿ ಉಳಿದಿದೆ.(ಕೆಲ ಭ್ರಷ್ಟ ಮನಸುಗಳಲ್ಲಿ ಬಿಟ್ಟು).


ಆ ಯುದ್ಧದ ಚಿತ್ರಣ ಮಾಧ್ಯಮದವರಿಂದಾಗಿಯೇ ಪ್ರತಿಯೊಬ್ಬರಿಗೂ ತಲುಪಿತು ., ಯುದ್ಧ ಅಂದ್ರೆ ಹೀಗೂ ಇರುತ್ತೆ ., ಅದರ ತೀವ್ರತೆ ., ಸಾವು ನೋವುಗಳು ಹೀಗಿರುತ್ತವೆ ಅಂತ ತೋರಿಸಿಕೊಟ್ಟವರು ಅವರೇ ..
ಎಲ್ಲವನ್ನ ಎಲ್ಲರಿಗೂ ತಿಳಿಸಿಕೊಟ್ಟವರೂ ಅವರೇ .,

ಆ ಯುದ್ಧದಲ್ಲಿ ನಡೆದ ತ್ಯಾಗ ಬಲಿದಾನಗಳು - ನಂತರದ ನೋವಿನ ಕ್ಷಣಗಳು - ಜೊತೆಗೇ ಹುಟ್ಟಿಕೊಂಡ ನಮ್ಮ ಭ್ರಷ್ಟ ರಾಜಕಾರಣಿಗಳ ಹಗರಣಗಳು .. ಹೀಗೆ ಎಲ್ಲವೂ ಎಲ್ಲರಿಗೇ ತಿಳಿದೇ ಇದೆ .

ಆ ಯುದ್ಧದ ನಂತರ ನಡೆದದ್ದು ಸಂತಾಪ ಸೂಚಿಸುವ ಕಾರ್ಯಕ್ರಮಗಳು ಜೊತೆಗೆ ನಮ್ಮ ರಾಜಕಾರಣಿಗಳ ಪೊಳ್ಳು ಆಶ್ವಾಸನೆಯ ಸಾಲು ಭಾಷಣಗಳು .,

ಅಂದು ಆ ಯುದ್ಧದಲ್ಲಿ ಹುತಾತ್ಮರಾಗಿದ್ದು ೫೩೩ ವೀರ ಯೋಧರು.,

ಆ ಯುದ್ಧ ಗತಿಸಿ ಇಂದಿಗೆ ೧೦ ವರ್ಷಗಳೇ ಕಳೆದಿವೆ !!!

ಆದರೆ ಅದೆಷ್ಟೋ ಸೆನಾನಿಗಳ ಕುಟುಂಬಕ್ಕೆ ಸರ್ಕಾರದಿಂದ ಸಲ್ಲಬೇಕಿದ್ದ ಸವಲತ್ತುಗಳು ಇನ್ನೂ ತಲುಪಿಲ್ಲ ., ಅಷ್ಟೂ ಕುಟುಂಬದವರ ದೈನಂದಿನ ಬದುಕು ದುಸ್ತರವಾಗಿದೆ .,
ಸಾರ್ವಜನಿಕರು ಹಾಗು ಕೆಲ ಸಂಘ ಸಂಸ್ಥೆಗಳು ಮಾಡಿದಷ್ಟು ಸಹಾಯ, ಸರ್ಕಾರ ಇನ್ನೂ ಕೆಲ ಯೋಧರ ಕುಟುಂಬಕ್ಕೆ ಮಾಡಿಲ್ಲ ಎಂಬುದು ಸತ್ಯ ಸಂಗತಿ .,

ಮೇಲಿನ ಆಷ್ಟೂ ವಿಚಾರಗಳು ನಮ್ಮಗೆ ತಿಳಿದಿರುವವೆ ., ಇವುಗಳ್ಳನ್ನೂ ನಮ್ಮ ಮಾಧ್ಯಮದವರು ಇನ್ಚಿಂಚೂ ಚಿತ್ರಿಸಿ ತೊರಿಸಿ ., ಮುದ್ರಿಸಿದ್ದೂ ಆಗಿದೆ.

ಸಮಾಜದ ಎಲ್ಲ ಮುಖಗಳನ್ನ ಜನತೆಗೆ ತೋರಿಸಿ,ತಿಳಿಸಿ ಹೇಳಿ., ಪ್ರತಿ ಘಟನಾವಳಿಗಳನ್ನ ಪ್ರತಿಯೊಬ್ಬರಿಗೂ ತಲುಪಿಸಿ ಕೆಲವೊಮ್ಮೆ ಆದರ್ಶ ಮೆರಿತಾರೆ .,
ಕೆಲವೊಮ್ಮೆ ತಮ್ಮ ಪ್ರಭಾವದ ಮೂಲಕ ಎಲ್ಲವೂ ಸುಸೂತ್ರವಾಗಿ ಮುಗಿಸಿ,ಒಬ್ಬರ ಬಾಳ ಬೆಳಗುವಾಗ ಮಾತ್ರ
ಕೈಕಟ್ಟಿ ಕುಳಿತು ಆ ಕ್ಷಣವನ್ನ ಕಣ್ಣ ಮುಂದೆ ತಂದಾಗೆ ಮಾಡಿ,ಬುಡುಬುಡಿಕೆಯವರಂತೆ ಬಡಬಡಾಯಿಸಿ ಸುಮ್ಮನಾಗುತ್ತಾರೆ.ನಮ್ಮ ಭ್ರಷ್ಟ ರಾಜಕಾರಿಗಳಿಗೆ ಪುಗುಸಟ್ಟೆ ಆಹಾರವಾಗಿಸಿ ., ಆಶ್ವಾಸಾನೆಯ ಮಾಹಪೋರ ಹರಿಸಲಿಕ್ಕೆ ಎಡೆಮಾಡಿ ಕೊಡುತ್ತಾರೆ !!

ಈ ಕಾರ್ಗಿಲ್ ಯುದ್ಧದ ನಂತರವೂ ನಡೆಯುತ್ತಿರುವುದೂ ಇದೆ ., !!


ಏಲ್ಲಿ ಎನು ತಪ್ಪಾಗಿದೆ ., ಎಲ್ಲಿ ಯಾವ ಯೋಧರ ಕುಟುಂಬಕ್ಕೆ ಸರಿಯಾದ ಪರಿಹಾರ ದೊರೆತಿಲ್ಲ ಎಲ್ಲ ವಿಚಾರಗಳನ್ನ ಕಲೆಹಾಕಿ ಅವರ ಗೋಳಿನ ಕತೆಗಳನ್ನ ಚಿತ್ರ ವಿಚಿತ್ರವಾಗಿ ಚಿತ್ರಿಸಿ ತೊರಿಸುತ್ತಾ ಇದಾರೆ ವಿನಃ , ಅವರಿಗಿರೋ ಪ್ರಭಾವವನ್ನ ಬಳಸಿಕೊಂಡು ಆ ಯೋಧರ ಕುಟುಂಬಕ್ಕೆ ಸಲ್ಲಬೇಕಾದ ಸರ್ಕಾರಿ ಸವಲತ್ತುಗಳನ್ನ ತಲುಪಿಸುವಲ್ಲಿ ಮಾತ್ರ ಜಾಣ-ದಡ್ಡರಂತೆ ವರ್ತಿಸುತ್ತಿದ್ದಾರೆ !!

ವರ್ಷಕ್ಕೊಮ್ಮೆ ಶೋಕಾಚರಣೆ ., ವಿಜಯೋತ್ಸವ ಆಚರಿಸಿ ಸುಮ್ಮನಾಗೋ ಸರ್ಕಾರಗಳು ., !!
ಆ ವೇಳೆಯಲ್ಲಿ ಅದ್ಬುತವಾದ ತಲೆ ಬರಹದಡಿ ಕೆಲ ಲೇಖನಗಳನ್ನ ( ಉದಾ: "ಕಾರ್ಗಿಲ್ ಕಲಿಗಳಿಗೆ ನಮನ" . "ಪಾಕ್ ವಿರುದ್ದ ಭಾರತ ಜಯಗಳಿಸಿದ ದಶಕದ ಸ್ಮರಣೆ")ಗೀಚಿ ಸುಮ್ಮನೆ ಆಗೋ ಪತ್ರಿಕೆಯವರು ಹಾಗೂ ಸುಂದರ ಕಾರ್ಯಕ್ರಮಗಳನ್ನ ಚಿತ್ರಿಸಿ ,ಅಂದೊಂದು ದಿನ ಒಬ್ಬರ ಯೋಧರ ಕರೆಸಿ ಅವರ ಅನುಭವಗಳನ್ನ ಹಂಚಿಕೊಳ್ಳುವ ನಮ್ಮ ದೃಷ್ಯ ಮಾಧ್ಯಮದವರು ಇನ್ನಾದರೂ ಇಂತ ಕಾರ್ಯಗಳತ್ತ ಕಣ್ಣು ಹಾಯಿಸ್ತಾರ ?
ಇಂತ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುತ್ತಾರ ? ಅವರ ಗೌರವ ಕಾಪಾಡುತ್ತಾರ ? ವೀರ ಯೋಧರ ತ್ಯಾಗ-ಬಲಿದಾನಗಳನ್ನ ಅವರ ಆದರ್ಶಗಳನ್ನ ಮುಂದಿನ ಪೀಳಿಗೆಗೆ ಇನ್ನೂ ಉತ್ತಮ ರೀತಿಯಲ್ಲಿ ತಲುಪಿಸುತ್ತಾರ? ಮುಂದಿನ ತಲೆಮಾರ ಆದರ್ಶಮಯವಾಗಿಸುತ್ತಾರ? ಹ್ಮ್ಮ್ ಎಲ್ಲವಕ್ಕೂ ಕಾಲವೇ ಉತ್ತರ ನೀಡಬೇಕಿದೆ .,

ಸಿಹಿ ಹನಿ

"ಸಮಾನ್ಯ ನಾಗರಿಕರೂ ದೇಶಕ್ಕೆ ಜೀವ ಬಲಿದಾನ ಮಾಡಿದ ಕುಟುಂಬಗಳ ಸಂಕಷ್ಟದಲ್ಲಿ ಭಾಗಿಗಳಾಗಬೇಕು"
ನಿಮಗೆನಾದ್ರು ಯೋಧರ ಕುಟುಂಬಕ್ಕೆ ಸಹಾಯ ಮಾಡೊ ಮನಸಿದ್ರೆ ಈ ಕೆಳಗಿನ ಲಿಂಕ್ ನೋಡಿ .,

ಹುತ್ತಾತ್ಮ ಸೈನಿಕರ ಕುಟುಂಬಕ್ಕೆ ನೆರವಾಗಲೆಂದೆe ಹುಟ್ಟಿಕೊಂಡಿರುವ ಹೊಸ ಸಂಸ್ಥೆ .
"Flags of Honour "!!

No comments: