Saturday, July 25, 2009

ಆತ್ಮಾಭಿಮಾನ/ಆತ್ಮಸಂತೃಪ್ತಿ ಬೆಳಸಿಕೊಳ್ಳಿ ., ಜೊತೆಗೊಂದಿಸ್ಟು ಪ್ರೀತಿ/ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಿ.!!

ದೊರೆವ ಜೀತಕೆ ದುಡಿತ, ಮರುದಿನ ಚಿಂತೆ ಮತ I
ಹೊರೆಯ ಹಗುರಾಗಿಸುವ ಕೆಳೆಯರರೊಡನಾಟ II
ಸರಳತೆಯ ಪರಿತುಷ್ಟಿ, ಪರಮಾರ್ಥ ದ್ರುಷ್ಟಿಯವು I
ಸರಿಗೂಡೆ ಸುಕೃತವದು - ಮಂಕುತಿಮ್ಮ II



ಈ ಮೇಲಿನ ಸಾಲುಗಳು ಮಾನ್ಯ ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗದಿಂದ ಆಯ್ದಂತವು.
ಡಿ.ವಿ.ಜಿ ಯವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಕೃತಿಗಳನ್ನ ರಚಿಸಿದ್ದರು.




ಅವುಗಳಲ್ಲಿ ಅತ್ಯಂತ ಅದ್ಭುತವಾದಂತಹ ಕೃತಿ "ಮಂಕುತಿಮ್ಮನ ಕಗ್ಗ". ಇದು ೧೯೪೩ ರಲ್ಲಿ ಪ್ರಕಟವಾಗಿತ್ತು.

ಅಂದರೆ ಇಂದಿಗೆ ಸರಿಸುಮಾರು ೬ ದಶಕಗಳ ಹಿಂದೆ.

ಕವಿಗಳು ಹಾಗು ಲೇಖಕರು ಏನೇ ಬರೆದರೂ, ಅದು ಅವರ ಜೀವಿತಾವಧಿಯಲ್ಲಿ ನಡೆದ ಘಟನಾವಳಿಗಳೋ, ಅವರ ಕಲ್ಪನೆಯಲ್ಲಿ ನಾಳೆಗಳೋ ಆಗಿರುತ್ತವೆ., ಇಲ್ಲ ತಮ್ಮ ಅನುಭವದಿಂದ ತಮ್ಮ ಮುಂದಿನವರ ಬಾಳ ಬೆಳಗಲು/ ಹದಗೊಳಿಸಲು ಎನನ್ನೊ ಸಿದ್ದಗೊಳಿಸಿದಂತೆ ಇರುತ್ತವೆ.



ಈ ಮೇಲಿನ ಕಗ್ಗದ ಸಾಲುಗಳು ಅಂತೇ., ಮಾನ್ಯ ಡಿ.ವಿ.ಜಿ.ಯವರ ಅನುಭವದ ಮಾತು, ನಮ್ಮ ಬಾಳು ಸುಖವಾಗಿರಲೆಂದು ಅವರು ಸೃಷ್ಟಿಸಿದ ಬ್ರಹ್ಮ ಲಿಪಿ ಅಂದ್ರೂ ತಪ್ಪಾಗಲಾರದು.

"ನಾವು ಪ್ರತಿದಿನವೂ ಮಾಡುವ ಕೆಲಸಕ್ಕೆ ಸರಿಯಾದ ಸಂಬಳ, ನಾಳೆಯ ಚಿಂತೆ ಅಷ್ಟಿಲ್ಲ, ಜೀವನದ ಭಾರವನ್ನ ಕಡಿಮೆಯಾಗಿಸುವ ಸ್ನೇಹಿತರ ಜೊತೆ ಆಟ-ಪಾಟಗಳು. ಈ ಬಗೆಯ ಸರಳ ರೀತಿಯ ಜೀವನದಲ್ಲಿ ಸಂತೃಪ್ತಿಯನ್ನ ಹೊಂದಿರುವುದು ಮತ್ತು ಪರಮಾರ್ಥವನ್ನು ಗಳಿಸುವುದರಲ್ಲಿ ದೃಷ್ಟಿ ಇರಿಸಿಕೊಂಡಿರುವುದು., ಇವುಗಳೆಲ್ಲವೂ ಕೂಡಿ ಬಂದರೆ ಅದು ನಮ್ಮ ಅದೃಷ್ಟದ ಫಲ ಎನ್ನಬಹುದು".- ಇದು ಮೇಲಿನ ಕಗ್ಗದ ತಾತ್ಪರ್ಯ .

ಇಂದಿನ ಯಾಂತ್ರಿಕ ಜೀವನವನ್ನ ಬಿಂಬಿಸುವಂತೆ ಹಾಗೂ ಆ ಬದುಕಿಗೆ ಹೇಗೆ ಮುಕ್ತಿ ಕಂಡುಕೊಳ್ಳಬೇಕು ., ಏನು ಮಾಡಿದರೆ ನಮ್ಮ ಬದುಕು ಸಾರ್ತಕವೆನಿಸುವುದು ಎಂಬುದನ್ನ ಈ ಕಗ್ಗದ ಮೂsಲಕ ಮಾನ್ಯ ಡಿ.ವಿ.ಜಿ ಯವರು ಅವಾಗಲೇ ಚಿತ್ರಿಸಿದ್ದಾರೆ.


ಇಂದಿನ ಬದುಕಿನಂತೆ ಅಂದಿನ ಬದುಕಿತ್ತ ? ಇಂದಿನ ಯಾಂತ್ರಿಕ ಜೀವನ ಆಗಲೇ ಸೃಷ್ಟಿಯಾಗಿತ್ತ ? ಇಲ್ಲ ಡಿ.ವಿ.ಜಿ ಯವರ ಆಲೋಚನೆಗಳು ಇಂದಿನ ದಿನಗಳನ್ನ ಸೃಷ್ಟಿಸಿ ತೋರಿಸಿದ್ದವ ?


ಅವರ ಮೇಲಿನ ಕಗ್ಗ ಓದುತ್ತಾ ಇದ್ದರೆ .,ಮೇಲಿನಂತೆ ಬರೀ ಪ್ರಶ್ನೆಗಳೇ ಉದ್ಬವಿಸುತ್ತವೆ ವಿನಃ ಉತ್ತರ ಸಿಗೋದು ಒಂದೊ ಎರಡೋ ಪ್ರಶ್ನೆಗಳಿಗೆ ಮಾತ್ರ!!.

ಆ ಮೇಲಿನ ಕಗ್ಗದ ಸಾಲುಗಳು ಏಕೆ ಹಾಗು ಹೇಗೆ ಹುಟ್ಟಿದವು ಅಂತ ಅದರ ಮೂsಲ ಹುಡುಕೋದಕ್ಕಿಂತ., ಆ ಸಾಲುಗಳು ಏನನ್ನ ಬಿಂಬಿಸ್ತಾ ಇವೆ ., ಅದರಿಂದ ನಮಗೆ ಏನಾದ್ರು ಸಹಾಯ ಆಗುತ್ತಾ ಅಂತ ನೋಡೋಣ ., ಆ ಸಾಲುಗಳನ್ನ ಅರ್ಥ ಮಾಡಿಕೊಳ್ಳೋಣ .,ಸಾಧ್ಯವಾದರೆ ಅವುಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ .,

ಈ ಯಾಂತ್ರಿಕ ಜೀವನದಲ್ಲಿ ದಿನ ಉರಿಳಿದಂತೆ ಮಾನವನ ಒಳ್ಳೇ ಆಲೋಚನೆಗಳು .,ಉತ್ತಮ ತತ್ವಗಳು/ಮಾರ್ಗಗಳು ನೆಲ ಕಚ್ಚುತಾ ಇವೆ.,


ಹಿಂದಿನ ದಿನಗಳಲ್ಲಿ ಅವನು ಇರಿಸಿಕೊಂಡಿದ್ದ ಮಧುರ ಭಾವನೆಗಳು ., ಪ್ರೀತಿ - ಬೆಸುಗೆಗಳು, ಸ್ನೇಹ - ಬಾಂಧವ್ಯಗಳು ನೆಲ ಸೆರ್ತಾ ಇವೆ .,

ಹಣ-ಅಂತಸ್ತು , ಅಧಿಕಾರ-ಪ್ರತಿಷ್ಟೆ ಈ ನಾಲ್ಕು ಅವನ ಬಾಳ ಪ್ರತಿ ಹೆಜ್ಜೆಯನ್ನ ಆವರಿಸುತ್ತಾ ಬರುತ್ತಿವೆ ., ಈ ನಾಲ್ಕಕ್ಕಾಗಿ ಏನನ್ನಾದರೂ ಮಾಡಲು ಸಿದ್ದನಿದ್ದಾನೆ., ಯಾರನ್ನಾದರು ತುಳಿಯಲು, ಕಿತ್ತು ತಿನ್ನಲು ., ಹ್ಮ್ಮ್ ಉಪಯೋಗಿಸಿ ಬಿಸಾಡಲು ಸಿದ್ದನಿದ್ದಾನೆ .,


ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕಂದ್ರೆ., ಹಣ-ಅಂತಸ್ತು , ಅಧಿಕಾರ-ಪ್ರತಿಷ್ಟೆ, ಇಸ್ಟೂ ಬಾಳಲ್ಲಿ ಇರಬೇಕು ಅಂದರೆ ಯಾರ ಒಡನಾಟ ಇರಬೇಕು ., ಏಲ್ಲಿ ಏನನ್ನ ಸೃಷ್ಟಿ ಮಾಡಬೇಕು ., ಏಲ್ಲಿ ಏನನ್ನ ನಾಶಮಾಡಬೇಕು ., ಇವೆಲ್ಲವನ್ನ ಕರಗತ ಮಾಡ್ಕೋತಾ ಇದಾನೆ ., ಎಲ್ಲವೂ ಕರಗತವಾಗ್ತಾ ಇದೆ ., ಅವನಂದುಕೊಂಡಂತೆ ಸಾಗ್ತಾ ಇದೆ .,

ಎಲ್ಲವನ್ನ ಎಲ್ಲರನ್ನ ಬದಿಗೊತ್ತಿ ., ಅವನಂದುಕೊಂಡಂತೆ ಹಣ-ಅಂತಸ್ತು , ಅಧಿಕಾರ-ಪ್ರತಿಷ್ಟೆ ಇಸ್ಟೂ ಸಿಕ್ತು ಮುಂದೆ?

ಆಗ ಖಂಡಿತ ಮನುಷ್ಯ ಪ್ರೀತಿ ಬೇಡ್ತಾನೆ ., ಕೆಲವರ/ಉತ್ತಮರ ಸಂಗ ಬೇಡ್ತಾನೆ, ಉತ್ತಮ ಬಾಂಧವ್ಯಗಳನ್ನ ಬೇಳೆಸೋಕೆ ಖಂಡಿತ ಪ್ರಯತ್ನ ಪಡ್ತಾನೆ ., ಆದ್ರೆ ಅವುಗಳ್ಯಾವು ಅವನ ಬಾಳಲ್ಲಿ ಮತ್ತೆ ಸೃಷ್ಟಿಯಾಗೊಲ್ಲ, ಸೃಷ್ಟಿಯಾದ್ರು ಮಧುರಾನುಭವ ನೀಡೋಲ್ಲ .,

ಮಾನವನ ಬದುಕು ಇಗೂ ಆಗುತ್ತೆ ., ಅವನ ಆಲೋಚನೆಗಳು ಅವನ ನೆಮ್ಮದಿ ಹಾಳುಗೆಡವುತ್ತವೆ, ಮಾನವ ಜೀವನದಲ್ಲಿ ಸಾಮರಸ್ಯ ಕಳೆದುಕೊಳ್ತಾನೆ ಅಂತ ಡಿ.ವಿ.ಜಿ ಯವರಿಗೆ ಹೊಳೆದಿತ್ತಾ ? ಅವರನ್ನ ಸರಿದಾರಿಯಲ್ಲಿ ನೆಡೆಸಲೆಂದೇ ಅವರು ಇಂತ ಸಾಲುಗಳನ್ನ ತಮ್ಮ ಕಗ್ಗದ ಮೂಲಕ ಚಿತ್ರಿಸಿದ್ರ ?

ಉತ್ತರ ನೀಡೋಕೆ ಅವರಿಲ್ಲ ., ಆದ್ರೆ ಅವರು ರಚಿಸಿರುವ ಕಗ್ಗಗಳನ್ನ ಓದಿದರೆ ನಿಜ ಅನ್ನಿಸುತ್ತೆ .,


ಸ್ವಾರ್ತ ಸಾಧನೆಯಲ್ಲಿ ಬೇರೆಯವರ ಬಾಳು ನರಕವಾಗಿಸುತ್ತಿರುವ ಇಂದಿನ ಯಾಂತ್ರಿಕ ಮಾನವ ., ಮುಂದಿನದಿನಗಳಲ್ಲಾದರು ಇಂತ ಮಹಾತ್ಮರ ಹಿತನುಡಿಗಳನ್ನ ಜೀವನದಲ್ಲಿ ಅಳವಡಿಸಿಕೊಳ್ತಾನಾ? ., ಮುಂದಿನವರ ಬಾಳ ಬೆಳ್ಗತಾನಾ? ಕಾದು ನೊಡಬೇಕಿದೆ !!





ಸಿಹಿ ಹನಿ :

ಆತ್ಮಾಭಿಮಾನ/ಆತ್ಮಸಂತೃಪ್ತಿ ಬೆಳಸಿಕೊಳ್ಳಿ ., ಜೊತೆಗೊಂದಿಸ್ಟು ಪ್ರೀತಿ/ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಿ .ಇತಿಂಸ್ಟೇ ಸಾಕು ನಮ್ಮ ಬದುಕು ಸಾರ್ತಕವೆನಿಸಲು !! ., ನಮ್ಮ ಬದುಕು ಹಸನಾಗಲು !!.,


1 comment:

Unknown said...

nice one, lots of info..keep up the good work..