Tuesday, December 2, 2008

ಅ ನಾಲ್ಕು ಕಲಿಗಳಿಗೆ ... ಅಂತ ಇನ್ನೂ ಅಲವರಿಗೆ...













ದೇಶ ಉಳಿಸಿ ಬೆಳಸುವ ನಿಮ್ಮ ಆಸೆ,ಕನಸುಗಳಿಗೆ ಬೆನ್ನು ಕೊಡದೆ ..
ನನ್ನ ಅಪ್ಪ ಅಮ್ಮನ ಆಸೆ,ಕನಸುಗಳ ಜೊತೆಗೇ ಹುಟ್ಟಿಕೊಂಡ
ನನ್ನ ಆಸೆ ಕನಸುಗಳಿಗೆ ಬೆನ್ನು ಕೊಟ್ಟು
" ಬಹುದೊಡ್ಡ ಸ್ವಾರ್ತಿಯಾದೆ "


ನಾನು,ನನ್ನ ಬಂಧುಗಳು ,ನನ್ನ ಸ್ವತ್ತು ಎನ್ನುವ ಸ್ವಾರ್ಥ ಮನಸುಗಳನ್ನ ...
ನೀವು ನಮ್ಮವರು,ನನ್ನ ಜನ, ನನ್ನ ನಾಡು, ನನ್ನ ದೇಶ ಎಂದು
ಸದಾ ಅವರಿಗಾಗಿ ಹೋರಾಡಿ ಕೊನೆಗೊಮ್ಮೆ ಅವರಿಗಾಗೆ ಮಣ್ಣಾಗುವಿರಲ್ಲ ....
ನಿಮಗೆ ಸಿಗುವುದಾದರೂ ಏನು ???


ನಿಮ್ಮ ಹುಟ್ಟು ನಮ್ಮ ಹುಟ್ಟು ಒಂದೇ .. ನೀವು ಹುಟ್ಟುವಾಗ ಏನು ಹೊತ್ತು ತರುಹುದಿಲ್ಲ ನಾವು ಕೂಡ ಅಸ್ಟೆ ... ನಾವು ಸಾಯುವಾಗ ಬೇರೆಯವರಿಗೆ ಅಸ್ತಿ , ಸಂತೋಷ ,ನೆಮ್ಮದಿ ಬಿಟ್ಟು ಹೋಗುತ್ತೇವೆ ...
ನೀವು ಹೋಗುವಾಗ ನೋವನ್ನು ಬಿಟ್ಟು ಬೇರೆಲ್ಲವನ್ನೂ ಹೊತ್ತು ಸಾಗುತ್ತಿರ ...


ಕಳೆದೆರಡು ದಿನಗಳ ಘಟನೆ ನಮಗೆ ಅಸ್ಟೇನು ನೋವನ್ನುಂಟು ಮಾಡಿಲ್ಲ ... ಏಕೆಂದರೆ
"ಅ ಸಾವುಗಳು, ಅ ಭಯಾನಕ ಕ್ಷಣಗಳು ನಮ್ಮ ಮನೆ ಅಂಗಳದಲ್ಲಿ ನಡೆದಿಲ್ಲವಲ್ಲ "



ತಾಜ್ ಹೊತ್ತಿ ಉರಿದದ್ದು ,ನಮ್ಮ ಅ ನಾಲ್ಕು ಕಲಿಗಳನ್ನು ಕಳೆದುಕೊಂಡದ್ದು ..
ನಮ್ಮಲ್ಲಿ ದೇಶಾಭಿಮಾನ ಹೆಚ್ಚು ಮಾಡುವುದಲ್ಲವೇ ? ..
ದೇಶಕ್ಕಾಗಿ ಏನಾದರು ಮಾಡಬೇಕು ಅನಿಸುವುದಲ್ಲವೇ .?
" ಮುರೇ ದಿನ "ಎಲ್ಲಾ ಮರೆತು ನಮ್ಮ ನಮ್ಮ ಮುಲೆಗಳನ್ನ ಸೇರಿಕೊಳ್ಳುತ್ತೇವೆ ...


ದೇಶಾಭಿಮಾನ ಹೆಚ್ಚಾಗುವುದು ಕೇವಲ
ನಮ್ಮ ದೇಶದ ಮೇಲೆ ಆಕ್ರಮಣವಾದಾಗ,
ನಮ್ಮ ಹತ್ತಿರದಲ್ಲೇ ಸಾವು ನೋವು ಸಂಭವಿಸಿದಾಗ .. ಮಿಕ್ಕಂತೆ
" ನಾವು ,ನಮ್ಮ ಮನೆ , ನಮ್ಮ ಸುಖ ಅಸ್ಟೆ "



ನಿಮ್ಮಂತೇ ಬದುಕಿ ಅಮರನಾಗುವ ಆಸೆ , ಏನು ಮಾಡಲಿ ನಿಮ್ಮಂತೆ ದೇಶವನ್ನೇ ಹೃದಯದಲ್ಲಿ ಇಡುವಸ್ಟು ದೊಡ್ಡ ಹೃದಯ ನನ್ನದಲ್ಲ ,,,
ಅಲ್ಲಿ ನನ್ನ ಕುಟುಂಬದವರನ್ನ ಇಡುವಸ್ಟೇ ಜಾಗವಿರುವುದು ...

ನಮ್ಮ ಪ್ರೀತಿ ಪಾತ್ರರಿಗಾಗಿ ಬದುಕಿ ನಮ್ಮ ನೆಮ್ಮದೆಯೂ ಹಾಳು ..ನಮ್ಮ ಸಾವೂ ವ್ಯರ್ತ ಸಾವು ,,,,,

ನೀವು ಬದುಕುವುದೇ ಬೇರೆಯವರಿಗಾಗಿ ಹಾಗಾಗೆ ಇರಬೇಕು
ನಿಮ್ಮದು ಸಾರ್ತಕ ಸಾವು .....



ಇಂದಿನ ಯುವ ಪೀಳಿಗೆಯ ಬಹುಮಂದಿ ರಾಜಕೀಯ ಪುಡಾರಿಗಳನ್ನ, ವ್ಯೆದ್ಯರನ್ನ, ಇಂಜಿನಿಯರ್ ಹಾಗು
ಕಾನೂನು ಪಾಲಕರನ್ನ ಬಹುಬೇಗ ಗುರುತಿಸುತ್ತಾರೆ .. ಅವರಂತಾಗಲು ಮುಗಿಬೀಳುತ್ತಾರೆ
ನಿಮ್ಮನ್ನ ಗುರುತಿಸುವುದೇ ಇಲ್ಲ , ಇನ್ನ ನಿಮ್ಮಂತಾಗಲು ಬಯಸುವುದೆಲ್ಲಿ ??
ಕಾರಣವಿಸ್ಟೆ ..
ಮೇಲಿನವರೆಲ್ಲ ತಮ್ಮ ಸ್ವಾರ್ತ ಬದುಕಿನ ಅ ಸಾದನೆಯನ್ನ ಬೇರೂರಿ ಸಿರುವುದು .........



ನಮ್ಮ ಯೋಧರ ಸಾವಿಗೂ.. ನಮ್ಮ ಸಾವಿಗಿರುವ ವ್ಯತ್ಯಾಸ :

" ವೀರ - ಮರಣ "

ಚಾರ್ಲಿ ... ಎಲ್ಲರಂತ ಸ್ವಾರ್ಥ ಸಾವು ನನಗೆ ಬೇಕಿಲ್ಲ ..ನಿಮ್ಮಂತೆ ಅಮರನಾಗುವ ಆಸೆ

No comments: